ಲೋಕ ಚುನಾವಣೆ : ಮರು ರಚನೆಯಾಗುತ್ತಾ “KPCC”..?

ಬೆಂಗಳೂರು: 

    ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ, ರಾಜ್ಯಾದ್ಯಂತ ತನ್ನ ನೆಲೆಯನ್ನು ಬಲಪಡಿಸಲು ಕಾಂಗ್ರೆಸ್ ಹಲವು ಪ್ರಮುಖ ಬದಲಾವಣೆ ಮತ್ತು ಸುಧಾರಣೇಗಳನ್ನು ತರಲು ಮುಂದಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸೆಪ್ಟೆಂಬರ್‌ನಲ್ಲಿ ಪುನಾರಚನೆಯಾಗುವ ನಿರೀಕ್ಷೆಯಿದೆ.

    ಸಿದ್ದರಾಮಯ್ಯ ಸಂಪುಟದ ಭಾಗವಾಗದ ನಾಯಕರಿಗೆ ಪಕ್ಷದ ಹೈಕಮಾಂಡ್ ಹೆಚ್ಚಿನ ಜವಾಬ್ದಾರಿ ನೀಡಿ ಪಕ್ಷ ಕಟ್ಟುವ ಚಟುವಟಿಕೆಗಳಿಗೆ ಹೆಚ್ಚಿನ ಸಮಯವನ್ನು ಮೀಸಲಿಡುವ ಸಾಧ್ಯತೆಯಿದೆ. ಕೆಪಿಸಿಸಿ ಪದಾಧಿಕಾರಿಗಳಾಗಿರುವ ಅನೇಕರು ಸಚಿವರಾಗಿದ್ದಾರೆ. ಅವರನ್ನು ಪಕ್ಷದ ಜವಾಬ್ದಾರಿಯಿಂದ ಮುಕ್ತಗೊಳಿಸಬೇಕಿದೆ. ಹೊಸಬರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಪುನಾರಚನೆ ಮಾಡಲಾಗುತ್ತಿದೆ.

     ರಾಜ್ಯ ಕಾಂಗ್ರೆಸ್ ಸರ್ಕಾರ ಇತ್ತೀಚೆಗಷ್ಟೇ 100 ದಿನಗಳನ್ನು ಪೂರೈಸಿದ್ದು,ಗ್ಯಾರಂಟಿಗಳ ಅನುಷ್ಠಾನದಲ್ಲಿ ನಿರತವಾಗಿದೆ. ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಯೋಜನೆಗಳ ಯಶಸ್ಸನ್ನು ಜನರ ಬಳಿಗೆ ಕೊಂಡೊಯ್ಯಲು ಬಯಸಿದೆ. ಸದ್ಯ ಹಲವು ಕೆಪಿಸಿಸಿ ಪದಾಧಿಕಾರಿಗಳು ಈಗ ಶಾಸಕರಾಗಿದ್ದಾರೆ ಮತ್ತು ಕೆಲವು ಸಚಿವರು ಜಿಲ್ಲಾ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಹೊರತಾಗಿ ಬಿಬಿಎಂಪಿ ಮತ್ತು ಪಂಚಾಯತ್‌ಗಳ ಚುನಾವಣೆಗಳೂ ನಡೆಯಲಿವೆ. “ಪಕ್ಷ ಕಟ್ಟುವ ಚಟುವಟಿಕೆಗಳ ಮೇಲೆ ಮಾತ್ರ ಗಮನಹರಿಸಬಲ್ಲ ವ್ಯಕ್ತಿಗಳು ನಮಗೆ ಬೇಕು. ಮಂತ್ರಿಗಳು ಅದನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

      ಸೆಪ್ಟೆಂಬರ್ ಮೊದಲ ವಾರದೊಳಗೆ ಕೆಪಿಸಿಸಿ ಪುನಾರಚನೆ ನಡೆಯಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಲ್ಲೊಬ್ಬರಾದ ಸಲೀಂ ಅಹ್ಮದ್ ಹೇಳಿದ್ದಾರೆ.  ಕೆಪಿಸಿಸಿಯಲ್ಲಿ 5 ಜನ ಕಾರ್ಯಾಧ್ಯಕ್ಷರು ಮುಂದುವರೆಯುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.   ಕಾರ್ಯಾಧ್ಯಕ್ಷರಾಗಿರುವ   ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ ಮತ್ತು ಸತೀಶ್ ಜಾರಕಿಹೊಳಿ ಸಚಿವರಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap