ನವದೆಹಲಿ:
ಕೆಲದಿನಗಳ ಹಿಂದೆ ಪ್ರಕಟವಾದ ಸೂರತ್ ಕೋರ್ಟ್ ತೀರ್ಪನ್ನು ಆಧರಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹ ಮಾಡಿದ್ದು ನೆಹರು ಕುಟುಂಬಕ್ಕೆ ಇದು ಮೊದಲೇನಲ್ಲ,ಈ ಹಿಂದೆ ಅವರ ಅಜ್ಜಿ ಇಂದಿರಾ ಗಾಂಧಿ ಅವರು 1971 ರ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮದಲ್ಲಿ ಅಪರಾಧಿ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯ ತೀರ್ಪು ನೀಡಿದ ನಂತರ ತಮ್ಮ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಂಡಿದ್ದರು.
ರಾಯ್ ಬರೇಲಿಯಲ್ಲಿ ಇಂದಿರಾ ಗಾಂಧಿ ಸೋಲಿಸಿದ್ದ ರಾಜ್ ನಾರಾಯಣ್ ಅವರು ಚುನಾವಣೆಯಲ್ಲಿ ಗೆಲ್ಲಲು ಅಕ್ರಮ ಮಾರ್ಗ ಬಳಸಿದ್ದಾರೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ ನಂತರ ಜೂನ್ 12, 1975 ರಂದು ಮಹತ್ವದ ಹೈಕೋರ್ಟ್ ತೀರ್ಪು ಬಂದಿತು. ಮೊದಲ ಬಾರಿಗೆ ಹಾಲಿ ಭಾರತೀಯ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ಸ್ವತಃ ಹೈಕೋರ್ಟ್‌ನಲ್ಲಿ ಅಡ್ಡ ಪರೀಕ್ಷೆಗೆ ಒಳಗಾಗಿದ್ದರು.
ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಯಾಗಿ ಎರಡು ದಿನ ಕಳೆದರೂ ರಾಹುಲ್ ಗಾಂಧಿ ಇನ್ನೂ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿಲ್ಲ. ಮೇಲ್ಮನವಿ ಸಲ್ಲಿಸಿದಾಗ ಅಜ್ಜಿಗಿಂತ ಭಿನ್ನವಾಗಿ ತಮ್ಮ ಅನರ್ಹತೆಯನ್ನು ರದ್ದು ಮಾಡಿಸಿಕೊಳ್ಳುತ್ತಾರೆಯೇ ಎಂಬುದನ್ನು ನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ