ಮೆಟ್ರೋ ನಿಯಮ ಉಲ್ಲಂಘನೆ : ಮಹಿಳೆಗೆ ದಂಡ…..!

ಬೆಂಗಳೂರು

     ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಮ್ಮ ಮಟ್ರೋ ನಿಯಮಗಳನ್ನು ಉಲ್ಲಂಘಿಸುವ, ದಂಡ ಕಟ್ಟುವ ಪ್ರಕರಣಗಳು ಹೆಚ್ಚಾಗುತ್ತಿವೆ. ಮೆಟ್ರೋ ರೈಲಿನಲ್ಲಿ ತಿಂಡಿ ತಿನ್ನುವ, ಸಿಸಿಟಿವಿ ಮುಚ್ಚುವ ಪ್ರಕರಣಗಳ ಬೆನ್ನಲ್ಲೆ ಇತ್ತೀಚೆಗೆ ಯುವಕನೊಬ್ಬ ಭಿಕ್ಷೆ ಬೇಡಿದ್ದ ಪ್ರಕರಣ ವರದಿ ಆಗಿತ್ತು.

    ಅದರ ನಂತರ ಮತ್ತೊಂದು ಪ್ರಕರಣ ದಾಖಲಾಗಿದ್ದು,  ಮಹಿಳೆಗೆ ದಂಡ ವಿಧಿಸಲಾಗಿದೆ. ಮಹಿಳೆಯೊಬ್ಬರು ನಮ್ಮ ಮೆಟ್ರೋ ನೇರಳೆ ಮಾರ್ಗದ ರೈಲಿನಲ್ಲಿ ದೇಣಿಗೆ ಕೇಳಿದ್ದಕ್ಕೆ ಅವಳ ವಿರುದ್ಧ ಮೆಟ್ರೋ ಕಾಯಿದೆ ಸೆಕ್ಷನ್ 59 ರ ಅಡಿ ಪ್ರಕರಣ ದಾಖಲಿಸಲಾಗಿದೆ. ಭಾಗ್ಯ ಎಂಬ ಹೆಸರಿನ ಮಹಿಳೆಯು ದೂರವಾಣಿ ನಗರದಲ್ಲಿರುವ ಸಮಾಜ ಸೇವೆ ಸಂಸ್ಥೆಯೊಂದರ ಹೆಸರು ಹೇಳಿಕೊಂಡು ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದರು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ  ಮೂಲಗಳು ತಿಳಿಸಿವೆ.

    ಜ್ಞಾನಜ್ಯೋತಿ ಸೇವಾ ಸಂಸ್ಥೆಯ ಕಾರ್ಯದರ್ಶಿ ಎಂದು ಗುರುತಿಸಿಕೊಂಡು ಮೆಟ್ರೋದಲ್ಲಿ ದೇಣಿಗೆ ಸಂಗ್ರಹಿಸಿದ್ದಾರೆ. ಈ ಮೂಲಕ ಸಹ ಪ್ರಯಾಣಿಕರಿಗೆ ತೊಂದರೆ ನೀಡಿದ್ದಾರೆ ಎಂಬ ಆರೋಪ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಈ ಮಹಿಳೆಯಿಂದ 500 ರೂಪಾಯಿ ದಂಡ ಕಟ್ಟಿಸಿಕೊಂಡು, ಕ್ಷಮಾಪಣೆ ಪತ್ರ ಪಡೆದುಕೊಂಡು ಕಳುಹಿಸಲಾಗಿದೆ.

      ಬರುವಾಗ ಕೈಯಲ್ಲಿ ದೇಣಿಗೆ ಸಂಗ್ರಹದ ಪೆಟ್ಟಿಗೆ ಜೊತೆಗೆ ತೆಗೆದುಕೊಂಡು ಬಂದಿದ್ದಾಳೆ. ಅಲ್ಲದೇ ಕ್ಯೂಆರ್ ಕೋಡ್ ಸಹ ತಂದಿದ್ದಾರೆ. ಇವರಿಗೆ ಕೆಲವು ಮಂದಿ ಹತ್ತು, ಇಪ್ಪತ್ತು ರೂಪಾಯಿ ಹಾಕಿದ್ದಾರೆ. ದೇಣಿ ಸಂಗ್ರಹ ಮಹಿಳೆ ಗಮನಿಸಿದ ಸಹಾಯಕ ಭದ್ರತಾ ಸಿಬ್ಬಂದಿ ಅವರನ್ನು ಬಯ್ಯಪನಹಳ್ಳಿ ನಿಲ್ದಾಣದಲ್ಲಿ ಇಳಿಸಿ ನಿಯಂತ್ರಣ ಕೊಠಡಿಯಲ್ಲಿ ವಿಚಾರಿಸಿದ್ದಾರೆ. ಬಳಿಕ ಮಹಿಳೆ ಹೇಳಿಕೆ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.

       ಶನಿವಾರ ಸಿಬ್ಬಂದಿ ನನ್ನನ್ನು ಕಂಡು ರೈಲಿನಿಂದ ಕೆಳಕ್ಕೆ ಇಳಿಸಿದ್ದಾರೆ ಎಂದು ಭಾಗ್ಯ ತಿಳಿಸಿದ್ದಾರೆ. ಭಿಕ್ಷೆ ಬೇಡಿದ್ದ ಯುವಕ ಇತ್ತೀಚೆಗಷ್ಟೇ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಯುವಕನೊಬ್ಬ ಭಿಕ್ಷೆ ಬೇಡಿದ್ದ. ಆತನನ್ನು ನೋಡಿದ ಸಿಬ್ಬಂದಿಯೊಬ್ಬರು ನಿಯಂತ್ರಣ ಕೊಠಡಿಗೆ ತಿಳಿಸಿದ್ದರು. ಸ್ಥಳಕ್ಕೆ ಬಂದು ಆತನನ್ನು ಸಿಬ್ಬಂದಿ ವಿಚಾರಿಸಿದ್ದಾರೆ.

     ಆತನ ಜೇಬಿನಲ್ಲಿ ಸುಮಾರು 1,000 ರೂ. ಇದ್ದು, ಆತನಿಂದ 500 ರೂಪಾಯಿ ದಂಡ ಕಟ್ಟಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಎಚ್ಚರಿಕೆ ಕೊಟ್ಟು ಯುವಕನನ್ನು ಬಿಟ್ಟು ಕಳುಹಿಸಿದ್ದಾರೆ. ಅದರ ಬೆನ್ನಲ್ಲೆ ದೇಣಿಗೆ ಸಂಗ್ರಹ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap