ವೆಲ್ಲಿಂಗ್ಟನ್:
2025 ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ಗಾಗಿ ನ್ಯೂಜಿಲೆಂಡ್ ಬುಧವಾರ ತನ್ನ ತಂಡವನ್ನು ಪ್ರಕಟಿಸಿದೆ. 15 ಸದಸ್ಯರ ತಂಡವನ್ನು ಸೋಫಿ ಡಿವೈನ್ ಮುನ್ನಡೆಸಲಿದ್ದಾರೆ. ನಾಲ್ವರು ಆಟಗಾರ್ತಿಯರು ಚೊಚ್ಚಲ ಮಹಿಳಾ ವಿಶ್ವಕಪ್ ಕರೆ ಪಡೆದಿದ್ದಾರೆ. ಫ್ಲೋರಾ ಡೆವನ್‌ಶೈರ್, ಪಾಲಿ ಇಂಗ್ಲಿಸ್, ಬೆಲ್ಲಾ ಜೇಮ್ಸ್ ಮತ್ತು ಬ್ರೀ ಇಲ್ಲಿಂಗ್ ಅವರು ತಮ್ಮ ಮೊದಲ ವಿಶ್ವಕಪ್ ಕರೆ ಪಡೆದ ನಾಲ್ವರು ಆಟಗಾರ್ತಿಯರು.
ಡಿವೈನ್ ಜೊತೆಗೆ ಸುಜೀ ಬೇಟ್ಸ್ ಐದನೇ ಏಕದಿನ ವಿಶ್ವಕಪ್‌ಗೆ ಹಾಜರಾಗುತ್ತಿದ್ದಾರೆ. ಲಿಯಾ ತಹುಹು ತಮ್ಮ ನಾಲ್ಕನೇ ಏಕದಿನ ವಿಶ್ವಕಪ್ ಆಡಲಿದ್ದಾರೆ. ಮತ್ತು ಮ್ಯಾಡಿ ಗ್ರೀನ್ ಮತ್ತು ಅಮೆಲೀ ಕೆರ್‌ಗೆ ಇದು ಮೂರನೇ ಏಕದಿನ ವಿಶ್ವಕಪ್.
ಮಹಿಳಾ ವಿಶ್ವಕಪ್ ಟೂರ್ನಿ ಸೆಪ್ಟೆಂಬರ್ 30 ರಿಂದ ನವೆಂಬರ್ 2 ರವರೆಗೆ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ನ್ಯೂಜಿಲ್ಯಾಂಡ್ ತಂಡ ತನ್ನ ಮೊದಲ ಪಂದ್ಯವನ್ನು ಅ.1ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.
ನ್ಯೂಜಿಲ್ಯಾಂಡ್ ತಂಡ
ಸೋಫಿ ಡಿವೈನ್ (ನಾಯಕಿ), ಸುಜೀ ಬೇಟ್ಸ್, ಈಡನ್ ಕಾರ್ಸನ್, ಫ್ಲೋರಾ ಡೆವನ್‌ಶೈರ್, ಇಜ್ಜಿ ಗೇಜ್, ಮ್ಯಾಡಿ ಗ್ರೀನ್, ಬ್ರೂಕ್ ಹ್ಯಾಲಿಡೇ, ಬ್ರೀ ಇಲಿಂಗ್, ಪಾಲಿ ಇಂಗ್ಲಿಸ್, ಬೆಲ್ಲಾ ಜೇಮ್ಸ್, ಜೆಸ್ ಕೆರ್, ಮೆಲೀ ಕೆರ್, ರೋಸ್‌ಮರಿ ಮೈರ್, ಜಾರ್ಜಿಯಾ ಪ್ಲಿಮ್ಮರ್, ಲಿಯಾ ತಹುಹು.
