‘ಜೆಡಿಎಸ್‌ಗಾಗಿ ಕೊನೆಯವರೆಗೂ ದುಡಿಯುತ್ತೇನೆ’: ಎಚ್‌.ಡಿ.ದೇವೇಗೌಡ

ಚಿಂಚೋಳಿ

ಜೆಡಿಎಸ್ ಬಡವರ ಪಕ್ಷ. ಈ ಪಕ್ಷವನ್ನು ಸಂಘಟಿಸುವ ಕೆಲಸ ಕೊನೆಯವರೆಗೂ ಮಾಡುತ್ತೇನೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಈ ಭಾಗದ ನೀರಾವರಿ ಯೋಜನೆಗಳನ್ನು ಮಂಜೂರು ಮಾಡಿಸಿ ರೈತರಿಗೆ ಅನುಕೂಲ ಮಾಡಿದ್ದೇನೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

        ಪಟ್ಟಣದ ಹಾರಕೂಡ ಚನ್ನಬಸವ ಶಿವಯೋಗಿಗಳ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಚಿಂಚೋಳಿ ಮತಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ‘ಮುಂದಿನ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದಿಂದ ಸಂಜೀವನ್ ಯಾಕಾಪೂರ ಚುನಾವಣೆಯಲ್ಲಿ ನಿಲ್ಲುತ್ತಾರೆ’ ಎಂದರು.

‘ಕಾಂಗ್ರೆಸ್‌ ಪಕ್ಷದ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ. ಹಿಂದೆ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನಗಳು ಬಂದಾಗ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ನಾನು ಸೋನಿಯಾ ಗಾಂಧಿ ಅವರಿಗೆ ಹೇಳಿದ್ದೆ. ಅದಕ್ಕೆ ಖರ್ಗೆ ಅವರೂ ಒಪ್ಪಿದ್ದರು. ಆದರೆ, ಕೊನೆಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕಾಯಿತು’ ಎಂದು ಹೇಳಿದರು.

‘ರಾಜ್ಯದ ಅಭಿವೃದ್ಧಿ ಕುರಿತು ಪ್ರಧಾನಿ ನರೇಂದ್ರ ಮೋದಿ ಜತೆ ಚರ್ಚೆ ಮಾಡಿದ್ದೇನೆ ಹೊರತು, ಸ್ವಂತ ಕೆಲಸಕ್ಕೆ ಎಂದೂ ಭೇಟಿ ಮಾಡಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಯಾರು ಎಷ್ಟೇ ಒತ್ತಡ ತಂದರೂ ನನ್ನ ಜವಾಬ್ದಾರಿಯಿಂದ ಹಿಂದೆ ಸರಿದಿಲ್ಲ.

ಮೋದಿ ಅವರದ್ದು ಕೆಟ್ಟ ಸರ್ಕಾರ ಇರಬಹುದು. ಆದರೆ, ನಾನು ಹೋದಾಗಲೆಲ್ಲ ಅವರು ಅತ್ಯಂತ ಗೌರವದಿಂದ ನೋಡಿಕೊಂಡಿದ್ದಾರೆ’ ಎಂದರು.

ಪಕ್ಷದ ಮುಖಂಡ ಸಂಜೀವನ ಯಾಕಾಪುರ ಮಾತನಾಡಿ, ‘ಚಿಂಚೋಳಿಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಎರಡು ಸಿಮೆಂಟ್ ಕಾರ್ಖಾನೆಗಳಿದ್ದು ಅಲ್ಲಿ ಬೇರೆ ರಾಜ್ಯದ ಜನರು ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ಗಮನ ಹರಿಸಿಲ್ಲ.

ನಾನು ಜೆಡಿಎಸ್ ಪಕ್ಷದಿಂದ ಹೋರಾಟ ಮಾಡಿ ಹೊಲ ಕಳೆದುಕೊಂಡ 25 ಜನರಿಗೆ ಕಂಪನಿಯಲ್ಲಿ ಕಾಯಂ ಉದ್ಯೋಗ ಕೊಡಿಸಿದ್ದೇನೆ’ ಎಂದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಮುಖಂಡರಾದ ಎಚ್.ಸಿ. ನಿರಾವರಿ, ಬಂಡೆಪ್ಪ ಖಾಶೆಂಪೂರ, ಶಾಮರಾವ ಸೂರನ, ಶಂಕರ ಕಟ್ಟಿಸಂಗಾವಿ, ತಾಲ್ಲೂಕು ಘಟಕದ ಅಧ್ಯಕ್ಷ ರವಿಶಂಕರ ರೆಡ್ಡಿ ಮುತ್ತಂಗಿ, ವಿಷ್ಣುಕಾಂತ ಮೂಲಗೆ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link