ಸಧೃಡ ದೇಹಕ್ಕೆ ಆಟೋಟ ಹೇಗೋ : ಸೃಜನಶೀಲ ಹಾಗೂ ಚುರುಕಾದ ಬುದ್ದಿ ಮೆತ್ತೆಗೆ ಚೆಸ್‌ ಹಾಗೆ…..!

ಬೆಂಗಳೂರು :
    ಚೆಸ್ ಗೆ ದೈಹಿಕ ಶ್ರಮದ ಅಗತ್ಯವಿಲ್ಲ, ಬುದ್ದಿಯನ್ನು ಉಪಯೋಗಿಸಿ ಅಡಬೇಕಷ್ಟೇ. ಹೀಗಾಗಿ ಇದನ್ನು ಬುದ್ಧಿವಂತಿಕೆ ಮತ್ತು ತಂತ್ರಗಾರಿಕಾ ಕೌಶಲ್ಯದ ಆಟ ಎಂದು ಕರೆಯಲಾಗಿದೆ. ಈ ಆಟಕ್ಕೆ ಒಂದು ದಿನವನ್ನು ಮೀಸಲಾಗಿಡಲಾಗಿದ್ದು, ಪ್ರತಿ ವರ್ಷ ಜುಲೈ 20 ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಚೆಸ್ ದಿನವನ್ನು ಆಚರಿಸಲಾಗುತ್ತದೆ.
     ಹಾಗಾದ್ರೆ ವಿಶ್ವ ಚೆಸ್ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು ಹಾಗೂ ಅದರ ಪ್ರಾಮುಖ್ಯತೆಯ ಕುರಿತಾದ ಮಾಹಿತಿಯು ಇಲ್ಲಿದೆ.

ಚದುರಂಗ ಅಥವಾ ಚೆಸ್ ಎನ್ನುವುದು ಬಹಳ ಪ್ರಾಚೀನವಾದ ಆಟಗಳಲ್ಲಿ ಒಂದು. ಚದುರಂಗವೆಂದರೇನೇ ಬುದ್ಧಿವಂತಿಕೆ ಹಾಗೂ ಜಾಣ್ಮೆ. ನಮ್ಮ ಬುದ್ದಿಮತ್ತೆಗೆ ಸವಾಲಾದ ಆಟವಿದಾಗಿದ್ದು, ದೈಹಿಕ ಚಟುವಟಿಕೆಗಳಿಲ್ಲದೇ ಹೋದರೂ ಮಾನಸಿಕವಾಗಿ ಗಟ್ಟಿಯಾಗಿರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಆಟದ ದಾಟಿಯೇ ಬದಲಾಗುತ್ತದೆ. ಆಟಗಾರನು ಪ್ರತಿಯೊಂದು ಕಾಯಿಯನ್ನು ಜಾಣ್ಮೆಯಿಂದಲೇ ಮುನ್ನಡೆಸಬೇಕು. ಮಕ್ಕಳಿಗೆ ತಮ್ಮ ಏಕಾಗ್ರತೆಯ ಶಕ್ತಿಯನ್ನು ಬೆಳೆಸಲು ಈ ಆಟವನ್ನು ಆಡಿದರೆ ಉತ್ತಮ. ಇದು ಯೋಚಿಸುವ ಸಾಮರ್ಥ್ಯವನ್ನು ಹೆಚ್ಚಿಸಿ ಸರಿಯಾದ ಸಮಯಕ್ಕೆ ಹೇಗೆ ನಿರ್ಧಾರ ಕೈಗೊಳ್ಳಬೇಕೆನ್ನುವುದನ್ನು ತಿಳಿಸುತ್ತದೆ. ಈಗಾಗಲೇ ಅಧ್ಯಯನಗಳ ಪ್ರಕಾರವಾಗಿ ಈ ಚೆಸ್‌ ಆಟವು ಮಕ್ಕಳಲ್ಲಿ ಅವರ ಐಕ್ಯೂ ಮಟ್ಟದೊಂದಿಗೆ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ. ಈ ಆಟದ ಬಗ್ಗೆ ಅರಿವು ಮೂಡಿಸಿ, ಹೆಚ್ಚಿನವರ ಈ ಆಟದಲ್ಲಿ ಆಸಕ್ತಿ ವಹಿಸುವಂತೆ ಪ್ರೋತ್ಸಾಹಿಸಲು ಅಂತಾರಾಷ್ಟ್ರೀಯ ಚೆಸ್ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ. 

    1924ರ, ಜುಲೈ 20 ರಂದು ಫ್ರಾನ್ಸ್​​ನ ಪ್ಯಾರಿಸ್ ನಗರದಲ್ಲಿ ನಡೆದ ಎಂಟನೇ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ‘ವಿಶ್ವ ಚೆಸ್ ಫೌಂಡೇಷನನ್ನು ಸ್ಥಾಪಿಸಲಾಯಿತು. ಇದರ ಸ್ಥಾಪನೆಯ ಗೌರವಾರ್ಥವಾಗಿ ಜುಲೈ 20 ರಂದು ವಿಶ್ವ ಚೆಸ್ ದಿನವನ್ನು ಆಚರಿಸಲು ನಿರ್ಧರಿಸಿತು. ಜುಲೈ 20, 1966 ರಂದು ಮೊದಲ ಬಾರಿಗೆ ವಿಶ್ವ ಚೆಸ್ ದಿನವನ್ನು ಆಚರಿಸಲಾಯಿತು. ಇದಾದ ಸುಮಾರು ವರ್ಷಗಳ ಬಳಿಕ ಅಂದರೆ 2019ರ ಡಿಸೆಂಬರ್ 12ನೇ ತಾರೀಕಿನಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಜುಲೈ 20 ರಂದು ವಿಶ್ವ ಚೆಸ್ ದಿನವೆಂದು ಅಧೀಕೃತವಾಗಿ ಘೋಷಿಸಿತು. ಅಂದಿನಿಂದ ಪ್ರತಿ ವರ್ಷವು ವಿಶ್ವ ಚೆಸ್ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. 

   ಚೆಸ್ ಬುದ್ಧಿವಂತಿಕೆಯ ಆಟವಾಗಿದ್ದು, ತ್ವರಿತ ನಿರ್ಧಾರ ತಗೆದುಕೊಳ್ಳುವ ಕೌಶಲ್ಯ, ಕೈಚಳಕ ಮತ್ತು ಉತ್ತಮ ತಂತ್ರಗಾರಿಕೆಯನ್ನು ಒಳಗೊಂಡಿರುತ್ತದೆ. ಈ ದಿನವು ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್​​​ನ್ನು ಉತ್ತೇಜಿಸುವುದಾಗಿದೆ. ಅದಲ್ಲದೇ, ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ ಹಾಗೂ ಚೆಸ್ ಆಟದ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ದಿನದಂದು ಪ್ರಪಂಚದಾದ್ಯಂತ ಚೆಸ್ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap