ನವದೆಹಲಿ:
ಹಿಮಾಚಲಪ್ರದೇಶದಲ್ಲಿ ಬಿಆರ್‌ಒ (ಗಡಿ ರಸ್ತೆ ನಿರ್ಮಾಣ ಸಂಸ್ಥೆ) ನಿರ್ಮಿಸಿರುವ ಅಟಲ್ ಸುರಂಗ ಮಾರ್ಗ ವಿಶ್ವದಾಖಲೆ ನಿರ್ಮಿಸಿದೆ.
10,000 ಅಡಿಗಿಂತ ಎತ್ತರದಲ್ಲಿರುವ ಅತಿ ದೀರ್ಘ ಹೆದ್ದಾರಿ ಸುರಂಗ ಮಾರ್ಗ ಎಂಬ ದಾಖಲೆ ಸ್ಥಾಪಿಸಿದೆ.
ಇಂಗ್ಲೆಂಡ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಈ ಕುರಿತ ದಾಖಲೆಗಳನ್ನು ಬಿಆರ್‌ಒ ಪ್ರಧಾನ ನಿರ್ದೇಶಕ ಲೆ.ಜ.ರಾಜೀವ್ ಚೌಧರಿಗೆ ಹಸ್ತಾಂತರಿಸಿದೆ.
2020, ಅ.3ರಂದು ಪ್ರಧಾನಿ ನರೇಂದ್ರ ಮೋದಿ 9.02 ಕಿ.ಮೀ. ದೂರದ ಈ ಸುರಂಗವನ್ನು ಲೋಕಾರ್ಪಣೆ ಮಾಡಿದ್ದರು. ಇದು ಹಿಮಾಚಲದ ಮನಾಲಿ ಮತ್ತು ಲಾಹೌಲ್-ಸ್ಪಿತಿಗಳನ್ನು ಬೆಸೆಯುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
