ನವದೆಹಲಿ :
ಯಾಹೂ ಕಂಪನಿಯು ಭಾರತದಲ್ಲಿ ಪ್ರಕಟವಾಗುತ್ತಿದ್ದ ತನ್ನ ಕೆಲವು ಸುದ್ದಿ ಜಾಲ ತಾಣಗಳನ್ನು ಸ್ಥಗಿತಗೊಳಿಸಿದೆ.
ಭಾರತದಲ್ಲಿ ಡಿಜಿಟಲ್ ವಿಷಯವನ್ನು ನಿರ್ವಹಿಸುವ ಹಾಗೂ ಪ್ರಕಟಿಸುವ ಮಾಧ್ಯಮ ಕಂಪನಿಗಳ ವಿದೇಶಿ ಮಾಲೀಕತ್ವವನ್ನು ಸೀಮಿತಗೊಳಿಸುವ ಹೊಸ ವಿದೇಶಿ ನೇರ ಹೂಡಿಕೆ (ಎಫ್ ಡಿಐ) ನಿಯಮಗಳಿಂದಾಗಿ ಭಾರತದಲ್ಲಿ ಯಾಹೂ ತನ್ನ ಸುದ್ದಿ ವೈಬ್ ಸೈಟ್ ಗಳನ್ನು ಸ್ಥಗಿತಗೊಳಿಸಲಿದೆ.
ಇದರಲ್ಲಿ ಯಾಹೂ ನ್ಯೂಸ್, ಯಾಹೂ ಕ್ರಿಕೆಟ್, ಹಣಕಾಸು, ಮನರಂಜನೆ ಹಾಗೂ ಮೇಕರ್ಸ್ ಇಂಡಿಯಾ ಸೇರಿವೆ. ಆದರೆ ಇದು ಬಳಕೆದಾರರ ಯಾಹೂ ಇಮೇಲ್ ಹಾಗೂ ಯಾಹೂ ಸರ್ಚ್ (ಹುಡುಕಾಟ) ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ . ಇವುಗಳಲ್ಲಿ ಯಾವುದೇ ಬದಲಾವಣೆಯಿಲ್ಲ. ಇಲ್ಲಿವರೆಗೂ ನಮ್ಮನ್ನು ಬೆಂಬಲಿಸಿರುವವರಿಗೆ ಹಾಗೂ ಜಾಲತಾಣ ಓದುಗರಿಗೆ ಧನ್ಯವಾದಗಳು’ ಎಂದು ಯಾಹೂ ವೆಬ್‌ಸೈಟ್ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
