ಯಲಬುರ್ಗಾ ಮಾಜಿ ಶಾಸಕ ಶಿವಶರಣಪ್ಪಗೌಡ ನಿಧನ

ಕೊಪ್ಪಳ

   ಯಲಬುರ್ಗಾ ಕ್ಷೇತ್ರದ ಮಾಜಿ ಶಾಸಕ ಶಿವಶರಣಪ್ಪಗೌಡ (79) ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ತುಮಕೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಇಹಲೋಕ ತ್ಯಜಿಸಿದ್ದಾರೆ. ಶಿವಶರಣಪ್ಪಗೌಡ ಅವರು 1999ರಿಂದ 2004ರ ವರೆಗೂ ಯಲಬುರ್ಗಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಮೃತರು ನಾಲ್ಕು ಜನ ಪುತ್ರರು ಮತ್ತು ಪತ್ನಿಯನ್ನು ಅಗಲಿದ್ದಾರೆ.

    ಯಲಬುರ್ಗಾ ಪಟ್ಟಣದಲ್ಲಿರುವ ಶಿವಶರಣಪ್ಪಗೌಡ ಅವರ ನಿವಾಸದಲ್ಲಿ ಬುಧಾವರ ಸಂಜೆಯಿಂದ ಗುರುವಾರ ಬೆಳಗದಗಿನವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದೆ. ನಂತರ ಅವರ ಸ್ವಗ್ರಾಮ ಯಲಬುರ್ಗಾ ಹುಣಿಸ್ಯಾಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶಾಸಕರಾಗುವ ಮೊದಲು ತಾಲೂಕು ಬೋರ್ಡ್​​ ಅಧ್ಯಕ್ಷರಾಗಿ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾಗಿಯೂ ಶಿವಶರಣಪ್ಪಗೌಡರು ಕಾರ್ಯ ನಿರ್ವಹಿಸಿದ್ದರು.

Recent Articles

spot_img

Related Stories

Share via
Copy link