ಮತ್ತೊಂದು ಬಾಂಬ್‌ ಸಿಡಿಸಿದ ಯತ್ನಾಳ್‌ …!

ಬೆಂಗಳೂರು: 

   ವಾಲ್ಮೀಕಿ ನಿಗಮದಂತೆ ಕರ್ನಾಟಕದಲ್ಲಿ ಇನ್ನೊಂದು ಕೇಂದ್ರ ಹಗರಣದ ಆಗರವಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.

   ಈ ಕುರಿತಂತೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು ಕರ್ನಾಟಕ ರಾಜ್ಯ ಹ್ಯಾಬಿಟೇಟ್ ಕೇಂದ್ರ, ಬೆಂಗಳೂರು ಎಂಬ ಒಂದು ಸಂಘಕ್ಕೆ ಸುಮಾರು 600 ಕೋಟಿ ಅನುದಾನವನ್ನು ಕರ್ನಾಟಕ ರಾಜ್ಯ ಪಾರದರ್ಶಕ ಕಾಯ್ದೆ ಉಲ್ಲಂಘಿಸಿ ನೀಡಲಾಗಿದೆ. ಈ ಹ್ಯಾಬಿಟೇಟ್ ಕೇಂದ್ರಕ್ಕೆ ಯಾವ ಸಾಂವಿಧಾನಿಕ ಮಾನ್ಯತೆಯೂ ಇಲ್ಲದಿದ್ದರೂ ಮಂತ್ರಿ ಜಮೀರ್ ಅಹ್ಮದ್ ನೇತೃತ್ವದಲ್ಲಿ ಈ ಸಂಸ್ಥೆಗೆ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡಲಾಗಿದೆ.

   ಈ ಹ್ಯಾಬಿಟೇಟ್ ಕೇಂದ್ರ ಸರ್ಕಾರಿ ಸಂಸ್ಥೆಯಲ್ಲ, ಇದರಲ್ಲಿ ಕಾರ್ಯನಿರ್ವಹಿಸುತ್ತಿರುವವರು ಸರ್ಕಾರೀ ನೌಕರರೂ ಅಲ್ಲ, ಇಲ್ಲಿ ಎಲ್ಲ ಮಾಯಾ! ಈ ಸಂಸ್ಥೆ ವಿಶೇಷವಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾಮಗಾರಿಗಳನ್ನು ಕೈಗೊಂಡಿರುವುದು ಮಂತ್ರಿ ಹಾಗು ಅಧಿಕಾರಿಗಳು ಕೈಜೋಡಿಸಿರುವಂತೆ ಕಾಣಿಸುತ್ತದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದಲೂ ಈ ಹ್ಯಾಬಿಟೆಟ್ ಕೇಂದ್ರಕ್ಕೆ ಹಣ ವರ್ಗಾವಣೆ ಮಾಡಲಾಗಿದೆ. ವಾಲ್ಮೀಕಿ ನಿಗಮದ ಅಕ್ರಮ ಬಯಲಾದ ದಿನದಿಂದ ಸಚಿವ ಜಮೀರ್ ಈ ಹ್ಯಾಬಿಟೇಟ್ ಕೇಂದ್ರದ ಸಭೆಗಳನ್ನು ಪ್ರತಿನಿತ್ಯವೂ ಮಾಡಿ ಏನನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ? ಯಾವ ಕಡತಕ್ಕೆ ಬೆಂಕಿ ಬೀಳಲಿದೆ? ಈ ಹಣ ಯಾವ ಚುನಾವಣೆಗೆ ಬಳಸಲಾಗಿದೆ? ಎಂದು ಪ್ರಶ್ನಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap