ವಿಜಯಪುರ:
ವಕ್ಫ್ ಬೋರ್ಡ್ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಪತ್ರ ಬರೆದಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪತ್ರ ಹಂಚಿಕೊಂಡಿದ್ದು, ವಕ್ಫ್ ಮಂಡಳಿ ದೇಶಾದ್ಯಂತ ರೈತರ, ದೇವಸ್ಥಾನಗಳ, ಟ್ರಸ್ಟ್‌ಗಳ, ಮಠಗಳ, ಜಮೀನುಗಳ ಮೇಲೆ ಹಕ್ಕು ಸಾಧಿಸುವ ಪ್ರಯತ್ನ ನಡೆಸಿದೆ.
ಈ ಅನಿಯಂತ್ರಿಕ ಸ್ಪಷ್ಟ ಉಲ್ಲಂಘನೆಯನ್ನು ಗಮನದಲ್ಲಿಟ್ಟುಕೊಂಡು ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣಗೊಳಿಸುವಂತೆ ಮನವಿ ಮಾಡಿದ್ದಾರೆ. ದೇಶದ ಸಂಪನ್ಮೂಲ ಯಾವುದೇ ಸೀಮತಿ ಕೋಮಿಗೆ ಸೇರುವುದು ಜಾತ್ಯಾತೀತದ ವಿರುದ್ಧವಾಗಿರುತ್ತz. ಹಾಗಾಗಿ ವಕ್ಫ್ ಆಸ್ತಿ ರಾಷ್ಟ್ರೀಕರಣಕ್ಕೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವುದಾಗಿ ಯತ್ನಾಳ್ ಹೇಳಿದ್ದಾರೆ.
ವಕ್ಫ್ ಬೋರ್ಡ್‌ನಿಂದಾಗಿ ಜಮೀನು ಮಾಲಿಕರು, ರೈತರಿಗೆ ತೊಂದರೆಯಾಗುತ್ತಿದೆ. ರೈತರು, ಜಮೀನು ಮಾಲಿಕರು ಸೇರಿ ಧಾರ್ಮಿಕ ಸಂಸ್ಥೆ, ಮಠ ಮಾನ್ಯಗಳ ಜಮೀನನ್ನು ವಕ್ಫ್ ಆಕ್ರಮಿಸಿಕೊಳ್ಳುತ್ತದೆ. ವಕ್ಫ್ ಕಾನೂನು ಅಸಮಾನತೆ, ಕ್ರೂರತೆಯನ್ನು ಒಳಗೊಂಡಿದೆ. ವಕ್ಫ್ ಬೋರ್ಡ್‌ಗೆ ಅನಿಯಂತ್ರಿತ, ಪರಿಮಿತ ಅಧಿಕಾರ ನೀಡಲಾಗಿದೆ ಎಂದು ಪತ್ರದಲ್ಲಿ ಶಾಸಕರು ಉಲ್ಲೇಖಿಸಿದ್ದಾರೆ.