ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ಟ್ಯಾಕ್ಸಿ(ಐಲ್ಲೋ ಬೋರ್ಡ್) ಚಾಲಕರು

ಬೆಂಗಳೂರು 

     ಸರ್ಕಾರದ ಬೊಕ್ಕಸಕ್ಕೆ ವೈಟ್ ಬೋರ್ಡ್ ಮಾಲೀಕರೇ ಭಾರೀ ನಷ್ಟ ಉಂಟು ಮಾಡ್ತಿದ್ದಾರೆ. ಅನುಮತಿ ತೆಗೆದುಕೊಂಡಿದ್ದು ವೈಟ್ ಬೋರ್ಡ್ ಗೆ ಆದ್ರೆ ಬಳಕೆ ಮಾಡ್ತಿರೊದು ಮಾತ್ರ ವಾಣಿಜ್ಯಕ್ಕೆ. ಹೀಗಾಗಿ ಯೆಲೋ ಬೋರ್ಡ್ ಚಾಲಕರು ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ನಿಯಮದ ಪ್ರಕಾರ ವೈಟ್ ಬೋರ್ಡ್ ವಾಹನಗಳನ್ನು ವಾಣಿಜ್ಯ ಬಳಕೆಗೆ ಬಳಸುವಂತಿಲ್ಲ. ಆದರೂ ಬೆಂಗಳೂರಿನಲ್ಲಿ  ಎಗ್ಗಿಲ್ಲದೆ ಟ್ರಾನ್ಸ್ ಪೋರ್ಟ್ ರೂಲ್ಸ್ ಉಲ್ಲಂಘನೆ ಆಗ್ತಿದೆ. ಈ ಬಗ್ಗೆ ಸಾರಿಗೆ ಇಲಾಖೆಗೆ  ಸಾಲು ಸಾಲು ದೂರು ಬಂದಿದ್ದು ಇದೀಗ ಇಲಾಖೆ ಆರ್ಲಟ್ ಆಗಿದೆ.

    ಹಲವು ಆಪ್ ಮೂಲಕ ವೈಟ್ ಬೋರ್ಡ್ ವಾಹನವನ್ನು ವಾಣಿಜ್ಯ ಬಳಕೆಗೆ ಬುಕಿಂಗ್ ಆಗ್ತಿದೆ‌. ಕೆಲ ಆಪ್ ಗಳನ್ನ ನಿಷೇಧ ಮಾಡಿದ್ರು ಸಹ ಅನಧಿಕೃತವಾಗಿ ರನ್ ಆಗ್ತಿದ್ದು, ರೀಲ್ಸ್ ಮುಖಾಂತರ ಪ್ರಮೋಷನ್ ಸಹ ವೈಟ್ ಬೋರ್ಡ್ ಮಾಲೀಕರು ಮಾಡಿಸುತ್ತಿದ್ದಾರೆ‌. ಹೀಗಾಗಿ ಸಾರಿಗೆ ಇಲಾಖೆಯು ಕಾರ್ಯಾಚರಣೆಗೆ ಮುಂದಾಗಿದ್ದು, ರೀಲ್ಸ್ ಮಾಡುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜೊತೆಗೆ ವಾಹನದ ಆರ್ ಸಿ, ಡಿಎಲ್ ರದ್ದು ಮಾಡುವ ಎಚ್ಚರಿಕೆ ನೀಡಿದ್ದಾರೆ.

Recent Articles

spot_img

Related Stories

Share via
Copy link