ಖಿನ್ನತೆಯಿಂದ ಯೋಗ ಶಿಕ್ಷಕಿ ಆತ್ಮಹತ್ಯೆ…!

ಮೈಸೂರು: 

    ಒಂಟಿಯಾಗಿದ್ದ ಯೋಗ ಶಿಕ್ಷಕಿಯೊರ್ವರು ಖಿನ್ನತೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಗೋಕುಲಂನಲ್ಲಿ ಶನಿವಾರ ನಡೆದಿದೆ.

    ಗೋಕುಲಂ ಮೂರನೇ ಹಂತದಲ್ಲಿ ಬಾಡಿಗೆ ಮನೆಯಲ್ಲಿದ್ದ ಯೋಗ ಶಿಕ್ಷಕಿ ಮಲ್ಲಿಕಾ (47) ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನವರಾದ ಮಲ್ಲಿಕಾ ಅವರಿಗೆ ಆರೇಳು ವರ್ಷಗಳ ಹಿಂದೆ ವಿಚ್ಛೇದನವಾಗಿದ್ದು, ಮೂರು ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದರು. ಯೋಗ ಶಿಕ್ಷಕಿಯಾಗಿ ಜೀವನ ನಡೆಸುತ್ತಿದ್ದರಾದರೂ ಕುಟುಂಬ ಹಾಗೂ ಸಂಬಂಧಿಕರಿಂದ ದೂರವಿದ್ದ ಕಾರಣ ನೋವಿನಲ್ಲಿದ್ದರು.

    ಶನಿವಾರ ಬೆಳಗ್ಗೆ 9:30ರ ಸಮಯದಲ್ಲಿ ಕಸದ ಡಬ್ಬಿಯನ್ನು ಮನೆಯ ಹೊರಗೆ ಇಟ್ಟಿದ್ದನ್ನು ನೆರೆ ಹೊರೆಯವರು ಗಮನಿಸಿದ್ದಾರೆ. ಆದರೆ ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ನಿತ್ಯ ಯೋಗಾಭ್ಯಾಸಕ್ಕೆ ಬರುತ್ತಿದ್ದ ವಿದ್ಯಾರ್ಥಿಗಳು ಬಂದು ಎಷ್ಟು ಬಾಗಿಲು ತಟ್ಟಿದರೂ ಬಾಗಿಲು ತೆರೆದಿಲ್ಲ. ಇದರಿಂದ ಅನುಮಾನಗೊಂಡು 112ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap