ತಂದೆಯ ವಿರುದ್ಧವೇ ದೂರು ದಾಖಲಿಸಿದ ಯೋಗೀಶ್ವರ್‌ ಪುತ್ರ….!

ಬೆಂಗಳೂರು:

    ಉಪ ಚುನಾವಣೆ ಫಲಿತಾಂಶ ಬರುವ ಮುನ್ನವೇ ಕಾಂಗ್ರೆಸ್​ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರಿಗೆ ಸಂಕಷ್ಟ ಶುರುವಾಗಿದೆ. ತನ್ನ ಸಹಿ ನಕಲು ಮಾಡಿದ್ದಾರೆಂದು ಆರೋಪಿಸಿ ಪುತ್ರ ಶ್ರವಣ್ ತಂದೆಯ ವಿರುದ್ಧವೇ ದೂರು ದಾಖಲಿಸಿದ್ದಾರೆ.

    ಪುತ್ರ ಶ್ರವಣ್ ಯೋಗೇಶ್ವರ್ ನೀಡಿದ ದೂರಿನ ಅನ್ವಯ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಬೆಂಗಳೂರಿನ ಮನೆಗೆ ಸಂಬಂಧಿಸಿದ ವಿಚಾರ ಇದಾಗಿದ್ದು, ಶ್ರವಣ್ ಸಹಮತ ಇಲ್ಲದೇ, ಅವರ ಅನುಪಸ್ಥಿತಿಯಲ್ಲಿ ಯೋಗೇಶ್ವರ್ ಸಹಿ ಮಾಡಿರುವ ಆರೋಪ ಕೇಳಿ ಬಂದಿದೆ. ಸಿಪಿ ಯೋಗೇಶ್ವರ ಅವರ ಮೊದಲ ಪತ್ನಿ ಮಂಜುಳಾ ಮತ್ತು ಪುತ್ರ ಶ್ರವಣ್​ ಅವರು ಎರಡೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಮನೆ ಖರೀದಿಸಿದ್ದರು. ಈ ಮನೆ ಸಿಪಿ ಯೋಗೇಶ್ವರ್ ಮೊದಲ ಪತ್ನಿ ಹಾಗೂ ಶ್ರವಣ್ ಹೆಸರಲ್ಲಿದೆ. ಶ್ರವಣ್ ಹಾಗೂ ಆತನ ತಾಯಿ ಮಂಜುಳಾ ಇಬ್ಬರೂ ಸೇರಿ ಮನೆಯನ್ನು ನಿಶಾ ಯೋಗೇಶ್ವರ್ ಗೆ ಉಡುಗೊರೆಯಾಗಿ ನೀಡಿದ್ದರು.

    ಅಮ್ಮ ಮತ್ತು ನಾನು ಯಾವುದೇ ತಕರಾರು ಇಲ್ಲದೇ ಮನೆಯನ್ನು ನಿಶಾಗೆ ಗಿಫ್ಟ್ ನೀಡಿದ್ದೇವು. ಅದಾದ ನಂತರ 2024 ಅಕ್ಟೋಬರ್​ ನಲ್ಲಿ ನಮ್ಮ ತಂದೆಯ ಪಿಎ ಮೂಲಕ ನನಗೆ ಒಂದು ಡ್ರಾಪ್ಟ್​​ ಬಂತು. ಅದು ಆ ಮನೆಯ ಭಾಗಕ್ಕೆ ವಿಚಾರಕ್ಕೆ ಸಂಬಂಧಿಸಿದ್ದಾಗಿತ್ತು. ಆ ಮನೆಯ ಭಾಗ ಕೇಳಿ ನಾನೇ ನನ್ನ ತಾಯಿ ಮತ್ತು ಸಹೋದರಿ ನಿಶಾ ವಿರುದ್ಧ ಕೇಸ್​ ಹಾಕುವುದಕ್ಕೆ ಸಂಬಂಧಿಸಿದ್ದಾಗಿತ್ತು. ನಾನು ಯಾವುದೇ ಗಿಫ್ಟ್ ನೀಡಿಲ್ಲ, ಅದರಲ್ಲಿ ನನಗೆ ಪಾಲು ಬೇಕು ಎಂದು ಬರೆಯಲಾಗಿತ್ತು.

   ಇದಕ್ಕೆ ನಾನು ಒಪ್ಪಿರಲಿಲ್ಲ. ಅಲ್ಲದೇ ತಂದೆಗೂ ಕೂಡ ನನ್ನ ಅನುಮತಿ ಇಲ್ಲ ಎಂದು ಹೇಳಿದ್ದೆ. ಆಗ ತಂದೆ ಯೋಗೇಶ್ವರ್​ ನಾನು ನೋಡಿಕೊಳ್ತೇನೆ ಬಿಡು ಎಂದಿದ್ದರು. ಇದೀಗ ನನ್ನ ತಂದೆಯವರೇ ಆ ಡ್ರಾಪ್ಟ್ ಗೆ ಸಹಿ ಮಾಡಿ ನಾನು ಪಾಲು ಕೇಳಿರುವಂತೆ ಕೇಸ್​ ದಾಖಲಿಸಿದ್ದಾರೆ. ಅಂದರೆ ನನ್ನ ಹೆಸರಿನಲ್ಲಿ ಅಮ್ಮ ಮತ್ತು ಸಹೋದರಿ ವಿರುದ್ಧ ಕೇಸ್​ ದಾಖಲಿಸಿದ್ದಾರೆ. ಇದರ ವಿರುದ್ಧ ನಾನು ಕೋರ್ಟ್ ಮೊರೆ ಹೋಗಿದ್ದೇನೆ. ನಾನು ಯಾವುದೇ ಸಹಿ ಮಾಡಿಲ್ಲ. ಮನೆಯಲ್ಲಿ ಭಾಗವನ್ನೂ ಕೇಳಿಲ್ಲ ಎಂದು ದೂರಿದ್ದಾರೆ.

Recent Articles

spot_img

Related Stories

Share via
Copy link
Powered by Social Snap