ಬೆಂಗಳೂರು:
ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ಇದೇ ಡಿಸೆಂಬರ್ 29ರೊಳಗೆ ಬ್ಯಾನ್ ಮಾಡಬೇಕು ಇಲ್ಲವಾದಲ್ಲಿ ಡಿಸೆಂಬರ್ 31ರಂದು ರಾಜ್ಯ ಬಂದ್‌ಗೆ ಕರೆ ನೀಡುವುದಾಗಿ ಈಗಾಗಲೇ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅಧಿಕೃತ ಘೋಷಣೆ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ‘ ಕರ್ನಾಟಕ ಬಂದ್ ಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಬೆಳಗಾವಿ ಘಟನೆ ಬಗ್ಗೆ ಬಹಳ ಬೇಸರವಾಯಿತು. ಇದು ನಿಜಕ್ಕೂ ಖಂಡನೀಯ. ಮತ್ತೊಬ್ಬರ ಭಾಷೆಗೆ ತೊಂದರೆ ಕೊಟ್ಟರೆ ನಮಗೂ ಹಾಗೆ ಮಾಡುತ್ತಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ದೊಡ್ಡವರು ಏನು ನಿರ್ಧಾರ ಮಾಡುತ್ತಾರೋ ಹಾಗೆ, ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಮ್ಮ ಬೆಂಬಲ ಇರುತ್ತದೆ ಎಂದು ನಟ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.
ಡಿಸೆಂಬರ್ 31 ಕರ್ನಾಟಕ ಬಂದ್ ಗೆ ಬೆಂಬಲ ನೀಡಿರುವ ಸಂಘಟನೆಗಳು
ಆಟೋ ಚಾಲಕರು, ಲಾರಿ ಮಾಲೀಕರು, ಕನ್ನಡ ಚಿತ್ರೋದ್ಯಮ, ಓಲಾ, ಉಬರ್ ಟ್ಯಾಕ್ಸಿ ಮಾಲೀಕರ ಸಂಘ, ವಾಹನ ಮಾಲೀಕರ ಸಂಘ, ಎಐಟಿಯು, ದಲಿತ ಸಂಘರ್ಷ ಸಮಿತಿ, ಬೀದಿಬದಿ ವ್ಯಾಪಾರಿಗಳು, ಗಾರ್ಮೆಂಟ್ಸ್ ನೌಕರರು, ಸಣ್ಣ ಅಂಗಡಿ ಮಾಲೀಕರು, ಕಟ್ಟಡ ಕಾರ್ಮಿಕರ ಸಂಘ ಸೇರಿದಂತೆ ಪ್ರಮುಖ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ.
ಇನ್ನು ಸಾರಿಗೆ ನೌಕರರ ಸಂಘಟನೆ, ಹೋಟೆಲ್ ಮಾಲೀಕರ ಸಂಘ, ಖಾಸಗಿ ಶಿಕ್ಷಣ ಸಂಸ್ಥೆ, ಹೋಟೆಲ್ ಮಾಲೀಕರ ಸಂಘ, ಕರ್ನಾಟಕ ಗಡಿ ಹೋರಾಟ ಸಮಿತಿ ನೈತಿಕ ಬೆಂಬಲ ಸೂಚಿಸಿವೆ. ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟ ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದೆ. ಈ ನಿಟ್ಟಿಯಲ್ಲಿ ಯವುದೇ ವಾಹನ ಸಂಚಾರ ನಡೆಸಲು ಅವಕಾಶ ವಿರಲ್ಲ. ಹೀಗಾಗಿ ಆಟೋ, ಟ್ಯಾಕ್ಸಿ ಸಂಚಾರ, ಬೀದಿ ಬದಿ ಅಂಗಡಿ, ಮದ್ಯ ಮಾರಾಟ, ಹೋಟೆಲ್ ಸೇರಿದಂತೆ ಇತರ ಅಂಗಡಿ ಮುಂಗಟ್ಟುಗಳು ಬಂದ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ