5ಟ್ರಿಲಿಯನ್‌ ಆರ್ಥಿಕತೆ : ಕನಸು ಇನ್ನೂ ದೊಡ್ಡದಿರಬೇಕು : ಕೆಸಿಆರ್

ಹೈದರಾಬಾದ್:

      ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಗುರಿಯನ್ನು “ತಮಾಷೆ” ಮತ್ತು “ಸಿಲ್ಲಿ” ಎಂದು ಕರೆದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಗುರಿ ಇನ್ನೂ ದೊಡ್ಡದಾಗಿರಬೇಕು ಎಂದು ಹೇಳಿದರು.

    ರಾಜ್ಯ ವಿಧಾನಸಭೆಯಲ್ಲಿ ಧನವಿನಿಯೋಗ ಮಸೂದೆಯ ಮೇಲಿನ ಚರ್ಚೆಗೆ ಉತ್ತರಿಸಿದ ಕೆಸಿಆರ್ ಸಂಸತ್ತಿನಲ್ಲಿ ಅದಾನಿ ವಿಷಯದ ಬಗ್ಗೆ ಪ್ರಧಾನಿ ಏನಾದರೂ ಮಾತನಾಡುತ್ತಾರೆ ಎಂದು ಇಡೀ ದೇಶ ನಿರೀಕ್ಷಿಸಿತ್ತು ಆದರೆ ಪ್ರತಿಕ್ರಿಯಿಸದ ಪ್ರಧಾನ ಸೇವಕನನ್ನು ಕಂಡು ನಿರಾಶೆಗೊಂಡಿದೆ ಎಂದು ಹೇಳಿದರು.

    ಇನ್ನು ಬಜೆಟ್‌ ನಂತರ ತಮ್ಮ ಭಾಷಣದಲ್ಲಿ ಪ್ರಧಾನಿಯವರು” 2023-24ರ ವೇಳೆಗೆ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ” ಎಂದರು. 5 ಟ್ರಿಲಿಯನ್ ಆರ್ಥಿಕತೆ ಎಂಬುದು ಒಂದು ಸಿಲ್ಲಿ ಎನ್ನಿಸುತ್ತದೆ. ನಿಜವಾಗಿಯೂ ಮೂರ್ಖತನ. ಕನಿಷ್ಠ ನಮ್ಮ ಗುರಿ ದೊಡ್ಡದಾಗಿರಬೇಕು. ನಾವು ಕನಸು ಕಾಣಲು ಧೈರ್ಯ ಮಾಡಬೇಕು. ಆ 5 ಟ್ರಿಲಿಯನ್ (ಆರ್ಥಿಕತೆಯ ಗುರಿ) ಬಹಳ ಕಡಿಮೆ, ಅದರಲ್ಲಿ ಕೇವಲ 3.5 ಟ್ರಿಲಿಯನ್ ಡಾಲರ್ ಮಾತ್ರ ಸಾಧಿಸಲಾಗಿದೆ” ಎಂದು ಕೆಸಿಆರ್ ಟೀಕಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link