ಗುಬ್ಬಿ:
ಗುಬ್ಬಿ ರೈಲ್ವೆ ನಿಲ್ದಾಣದಲ್ಲಿ ಸೆಲ್ಫಿಗರ ಹಾವಳಿ ಕಂಡೂ ಕಾಣ ದಂತಿರುವ ರೈಲ್ವೆ ಇಲಾಖೆ,
ಇತ್ತೀಚೆಗೆ ಗುಬ್ಬಿ ರೈಲ್ವೆ ನಿಲ್ದಾಣದ ಬಳಿ ಕಾಲೇಜ್ ವಿದ್ಯಾರ್ಥಿಗಳು ಚಲಿಸುತ್ತಿರುವ ರೈಲುಗಳ ಮುಂದೆ ವಿಡೀಯೋ ಹಾಗೂ ಫೋಟೋ ತೆಗೆದುಕೊಳ್ಳುವ ಹುಚ್ಚಾಟ ಶುರುವಾಗಿದೆ ಬಾನುವಾರ ಸುಮಾರು 12-30 ರ ಸಮಯದಲ್ಲಿ ವಂದೇ ಭಾರತ್ ರೈಲಿನ ಮುಂದೆ ಸೆಲ್ಫಿ ತೆಗೆದುಕೊಂಡ ಮೂರು ಜನ ವಿಧ್ಯಾರ್ಥಿಗಳು ನಂತರ ಬಂದ ಸಿದ್ದಗಂಗಾ ಎಕ್ಸ್ ಪ್ರೆಸ್ ರೈಲಿನ ಮುಂದೆ ಫೋಟೋ ತೆಗೆಯಲು ಹೋಗಿ ಕೂದಲೆಳೆಯ ಅಂತರ ದಿಂದ ಪಾರಾದ ಘಟನೆ ನೆಡೆದಿದೆ ಈ ಘಟನೆಯಿಂದ ರೈಲಿಗಾಗಿ
ಕಾದು ಕುಳಿತಿದ್ದ ಪ್ರಯಾಣಿಕರು ದಂಗಾಗಿದ್ದರೆ,
ಕಂಡು ಕಾಣದಂತಿರುವ ರೈಲ್ವೆ ಇಲಾಖೆಯ ಜಾಣ ಮೌನ ಏಕೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ, ತಾಲೂಕು ಕೇಂದ್ರವಾಗಿರುವ ಗುಬ್ಬಿಯಲ್ಲಿ ರೈಲ್ವೆ ಪೊಲೀಸ್ ಇಲ್ಲದಿರುವುದು ವಿಷಾದಕರ ಸಂಗತಿಯಾಗಿದೆ,ಇದರಿಂದ ರೈಲ್ವೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ರಕ್ಷಣೆ ಇಲ್ಲದಂತಾಗಿದೆ, ಇಲ್ಲಿ ಮೂಲ ಭೂತ ಸೌಕರ್ಯವೂ ಇಲ್ಲದಂತಾಗಿದೆ ಇಲ್ಲಿನ ಶೌಚಾಲಯಗಳಿಗೆ ಬೀಗ ಹಾಕಲಾಗಿದೆ,








