ನಿಮ್ಮ ಭಾಷಣ ಕೇವಲ ಸದನಕ್ಕೆ ಅಷ್ಟೇ ಸೀಮಿತವಾಗದಿರಲಿ : ಯು ಟಿ ಖಾದರ್

ಬೆಂಗಳೂರು :

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ವಿವರಣೆ ಪಡೆಯಲು ಕಾಂಗ್ರೆಸ್ ಮುಂದಾದಾಗ, ವಿವರಣೆ ಪಡೆಯಲು ಅವಕಾಶ ನೀಡಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಿರಾಕರಿಸಿದರು.

    ನಾನು ಕೇವಲ ಇಬ್ಬರಿಗೆ ಮಾತ್ರ ವಿವರಣೆ ಪಡೆಯಲು ಅವಕಾಶ ಕೊಡುತ್ತೇನೆ ಎಂದು ಸ್ಪೀಕರ್ ಹೇಳಿದರು. ಸ್ಪೀಕರ್ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಅವರು, ಸಭಾಧ್ಯಕ್ಷರ ನಿಲುವು ಖಂಡಿಸಿ ಸಭಾತ್ಯಾಗ ಮಾಡುತ್ತೇನೆ ಎಂದು ಹೇಳಿ ಸಭಾತ್ಯಾಗ ಮಾಡಿದರು.

ಕಾಂಗ್ರೆಸ್ ಸದಸ್ಯರ ಸಭಾತ್ಯಾಗ :

   ಇದೇ ವೇಳೆ ಸಿಎಂ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ಉಪನಾಯಕ ಯು.ಟಿ.ಖಾದರ್, ನಿಮ್ಮ ಭಾಷಣ ಕೇವಲ ಸದನಕ್ಕೆ ಅಷ್ಟೇ ಸೀಮಿತವಾಗದಿರಲಿ. ಬಡವರಿಗೆ ರೇಷನ್ ಕಾರ್ಡ್ ನೀಡಲು ಇನ್ನೂ ಆಗಿಲ್ಲ. ಹೊರಗಡೆ ಜನರು ಏನು ಮಾತನಾಡುತ್ತಿದ್ದಾರೆ ಎಂಬುದನ್ನು ತಿಳಿಯಿರಿ. ನಿಮ್ಮ ಪಕ್ಷದ ಶಾಸಕರಿಗೆ ಜನರ ಆಕ್ರೋಶ ಗೊತ್ತಾಗುತ್ತಿದೆ. ಮೀನುಗಾರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಕಡಲು ಕೊರೆತ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಕೆರಿಯರ್ ಗೈಡೈನ್ಸ್ ತರಬೇತಿ ಕೇಂದ್ರಗಳಿಗೆ ದಾಳಿಯಾಗಿದೆ.

   ಸಮಾಜ ವಿರೋಧಿ ಶಕ್ತಿಗಳು ಈ ರೀತಿ ವರ್ತನೆ ಮಾಡ್ತಿದೆ. ಸರ್ಕಾರ ಇಂತಹ ಯಾವುದೇ ಕೆಲಸಕ್ಕೂ ಅವಕಾಶ ಕೊಡಬಾರದು. ಸರ್ಕಾರ ಯಾವುದೇ ರೀತಿಯಲ್ಲೂ ಸೂಕ್ತ ಕ್ರಮ ಕೈಗೊಂಡಿಲ್ಲ.
ಜನರ ಬಗ್ಗೆ ಯಾವುದೇ ಕಾಳಜಿ ಈ ಸರ್ಕಾರಕ್ಕೆ ಇಲ್ಲ ಎಂದು ಸಿಎಂ ಭಾಷವಣನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

   ಇದಕ್ಕೂ ಮುನ್ನ ಮಾತನಾಡಿದ ಸಿಎಂ, 10 ಲಕ್ಷ ರೇಷನ್ ಕಾರ್ಡ ಗಳನ್ನು ಕೊಡಲು ವ್ಯವಸ್ಥೆ ಮಾಡಲಾಗಿದೆ. ಕಡಲ ಕೊರೆತ ಕಾಮಗಾರಿ ಶೀಘ್ರ ಆರಂಭಿಸಲಾಗುವುದು. ಅಡಿಕೆ ರೋಗ ತಡೆಯಲು ಸಂಶೋಧನೆ ಮಾಡಲು 25 ಲಕ್ಷ ರೂ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಕುರಿತು ಖಾದರ್ ಬಹಳ ಸಲ ಹೇಳ್ತಾರೆ. ಪೊಲೀಸರಿಗೆ ನಿಖರ ಮಾಹಿತಿ ಅನ್ವಯ ದಾಳಿ ಮಾಡ್ತಾರೆ ಎಂದರು.

   ಮೊನ್ನೆ ಕಾಂಗ್ರೆಸ್ ನವರು ಕಿವಿ ಮೇಲೆ ಹೂವು ಇಟ್ಕೊಂಡು ಬಂದಿದ್ರು. ಅವರು ತಿರುಗಾಡಿ ಬಂದ ಮೇಲೆ ಗೊತ್ತಾಗಿದೆ. ರಾಜ್ಯದ ಜನ ಇವರಿಗೆ ಕಿವಿ ಮೇಲೆ ಹೂವು ಇಡ್ತಾರೆ ಅಂತ ಗೊತ್ತಾಗಿದೆ. ಇವರು ಕೇವಲ ಸುಳ್ಳು ಹೇಳ್ತಾರೆ. ಕಾಂಗ್ರೆಸ್ ನವರು ಸುಳ್ಳಿನ ಸುಳಿಯಲ್ಲಿ ಸಿಲುಕಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ನಮ್ಮನ್ನು ಜೈಲಿಗೆ ಕಳುಹಿಸುತ್ತೇವೆ ಅಂತ ಹೇಳಿದ್ದಾರೆ. ನಾನು ಅವರಿಗೆ ಸವಾಲು ಹಾಕ್ತೇನೆ. ನೀವು ದೂರು ಕೊಡಿ..

   ನಾವು ದೂರು ಕೊಡ್ತೇವೆ. ನಾವು ಈಗಾಗಲೇ ತಿರ್ಮಾನ ಮಾಡಿದ್ದೇವೆ. ಎಲ್ಲಾ ದೂರಿನ ಕುರಿತು ತನಿಖೆಗಾಗಿ ಲೋಕಾಯುಕ್ತಕ್ಕೆ ಶಿಫಾರಸ್ಸು ಮಾಡ್ತೇವೆ ಎಂದು ಹೇಳಿದರು. ಜನರ ಮುಂದೆ ರಿಪೋರ್ಟ್ ಕಾರ್ಡ್ ಇಟ್ಟುಕೊಂಡು ಹೋಗುತ್ತೇವೆ. ಮತ್ತೊಮ್ಮೆ ಸಕಾರಾತ್ಮಕ ಮತದೊಂದಿಗೆ ಮರಳಿ ಬರುತ್ತೇವೆ. ಸದನದಲ್ಲಿ ಸಿಎಂ ಘೋಷಣೆ ಮಾಡಿದರು.

   ಉದ್ಯಮ ಸ್ನೇಹಿ ಕೈಗಾರಿಕಾ ನೀತಿಯನ್ನು ಜಾರಿಗೆ ತಂದಿರುವುದರಿAದ ಕೋವಿಡ್ ಸಂಕಷ್ಟದ ನಡುವೆಯೂ ರಾಜ್ಯಕ್ಕೆ ಬಂಡವಾಳ ಹರಿದು ಬರುತ್ತಿದೆ. ಜಾಗತಿಕ ಹೂಡಿಕೆದಾರರ ಸಮಾವೇದಲ್ಲಿ 9 ಲಕ್ಷ ಕೋಟಿ ಹೂಡಿಕೆಯ ಒಡಂಬಡಿಕೆಯಾಗಿದೆ ಎಂದರು.

   ಕೃಷಿ, ಶಿಕ್ಷಣ, ಸಮಾಜ ಕಲ್ಯಾಣ (ಪರಿಶಿಷ್ಟರ ಕಲ್ಯಾಣ), ಆರೋಗ್ಯ ಹಾಗೂ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ನಗರಗಳ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಲು ಸ್ಪಷ್ಟ- ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕರಾವಳಿ ನಿಯಂತ್ರಣ ವಲಯ ಕಾಯ್ದೆಯ (ಸಿಆರ್ಝಡ್) ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಸಡಿಲಿಸಿದ ಪರಿಣಾಮ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಮರೀನಾ (ಮೀನು ಪ್ರವಾಸೋದ್ಯಮ) ಯೋಜನೆ ಜಾರಿಗೆ ತರಲಾಗಿದೆ. ಉಡುಪಿ ಜಿಲ್ಲೆ

   ಬೈಂದೂರಿನಲ್ಲಿ ಕರ್ನಾಟಕದ ಮೊದಲ `ಮರೀನಾ’ ತಲೆ ಎತ್ತಲಿದೆ ಎಂದು ಸಿಎಂ ತಿಳಿಸಿದರು .ನಂತರ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸದನದಲ್ಲಿ ಅಂಗೀಕಾರಗೊಂಡಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ