ಬೀದರ್:
ವಕ್ಫ್ ಆಸ್ತಿ ಯತ್ನಾಳ್ ಅವರ ತಂದೆಯ ಆಸ್ತಿಯೂ ಅಲ್ಲ ಅಥವಾ ನಮ್ಮ ತಂದೆಯ ಆಸ್ತಿನೂ ಅಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ಸಚಿವ ಜಮೀರ್ ಅಹಮ್ಮದ್ ತಿರುಗೇಟು ನೀಡಿದ್ದಾರೆ. ಬೀದರ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಆಸ್ತಿ ರದ್ದು ಪಡಿಸಬೇಕು ಎಂದು ಯತ್ನಾಳ್ ಪ್ರಧಾನಿಗೆ ಪತ್ರ ಬರೆದ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.
ಈ ವೇಳೆ ವಕ್ಫ್ ಆಸ್ತಿ ಜನರು ಹಾಗೂ ದಾನಿಗಳು ದಾನ ಮಾಡಿರುವ ಆಸ್ತಿಯಾಗಿದೆ. ಈ ರೀತಿ ಮುಸಲ್ಮಾನರ ಬಗ್ಗೆ ಮಾತನಾಡಿದ್ರೆ ಬೇರೆಯವರು ಖುಷಿಯಾಗ್ತಾರೆ ಎಂದು ಯತ್ನಾಳ್ ತಿಳಿದುಕೊಂಡಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಯತ್ನಾಳ್ʼಗೆ ಹಿಂದೂಗಳು ಬೇಕಿಲ್ಲ, ಯಾವ ಮುಸಲ್ಮಾನರು ಬೇಕಿಲ್ಲ. ಅವರಿಗೆ ಬರೀ ರಾಜಕೀಯ ಮಾತ್ರ ಬೇಕು. ಇದು ಕಂದಾಯ ಇಲಾಖೆ ನೀಡಿದ ಆಸ್ತಿಯಲ್ಲ, ಇದನ್ನು ಯತ್ನಾಳ್ ಮೊದಲು ಅರ್ಥ ಮಾಡಿಕೊಳ್ಫಬೇಕು. ಇದು ಸರ್ಕಾರ ನೀಡಿದ್ದರೆ ವಾಪಸ್‍ಗೆ ಅವಕಾಶ ಇರುತ್ತದೆ. ಸಮಾಜಕ್ಕೆ, ಬಡವರಿಗೆ ಒಳ್ಳೆಯದಾಗಲಿ ಎಂದು ದಾನಿಗಳು ಈ ಜಾಗವನ್ನು ಕೊಟ್ಟಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ 37 ಸಾವಿರ ಎಕರೆ ವಕ್ಫ್ ಜಮೀನಿದ್ದು, ಅದರಲ್ಲಿ 4570 ಎಕರೆ ಜಮೀನು ಒತ್ತುವರಿಯಾಗಿದೆ. ಹೀಗಾಗಿ ನಾನು ಬೀದರ್‍ನಿಂದ ರಾಜ್ಯಾದ್ಯಂತ ವಕ್ಫ್ ಅದಾಲತ್ ಮಾಡುತ್ತಿದ್ದೇನೆ. ಯತ್ನಾಳ್ ತಮಗೆ ಕಾನೂನು ಗೊತ್ತಿದೆ, ನಾನು ಬಹಳ ಬುದ್ದಿವಂತ ಎಂದು ತಿಳಿದುಕೊಂಡಿದ್ದಾರೆ. 1956ರಲ್ಲಿ ನೆಹರು ವಕ್ಫ್ ಕಾಯ್ದೆ ಜಾರಿ ಮಾಡಿದ್ದು, ಪ್ರಧಾನಿಗೆ ಪತ್ರ ಬರೆದರೂ, ಅದನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ