ಯಾರ ಪಾಲಾಗಲಿದೆ ಕರ್ನಾಟಕದ ಮುಂದಿನ ‘ಮಹಾನಟಿ’ ಕಿರೀಟ……?

 ನವೆಂಬರ್ 8 ಮತ್ತು 9 ರಂದು ಸಂಜೆ 7 ಗಂಟೆಗೆ ಜೀ ಕನ್ನಡದಲ್ಲಿ ಗ್ರ್ಯಾಂಡ್ ಫಿನಾಲೆ!

ಬೆಂಗಳೂರು

    ಸದಾ ಕನ್ನಡದ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ Z ಕನ್ನಡ, ಇದೀಗ ಮಹಾನಟಿ ಸೀಸನ್ 2ರ ಮೂಲಕ ಮತ್ತೊಮ್ಮೆ ಯುವಪ್ರತಿಭೆಗಳಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಯುವನಟಿಯರನ್ನು ಕನ್ನಡ ಸಿನಿರಂಗಕ್ಕೆ ಪರಿಚಯಿಸುವ ವಿಭಿನ್ನ ಕಾರ್ಯಕ್ರಮವೇ ‘ಮಹಾನಟಿ’. ಇತ್ತೀಚಿಗೆ ಸ್ಯಾಂಡಲ್ವುಡ್‌ನ ಪ್ರಖ್ಯಾತ ನಿರ್ದೇಶಕರು ನಿರ್ದೇಶಿಸಿರುವ ಮತ್ತು ಮಹಾನಟಿ ಫೈನಲಿಸ್ಟ್‌ಗಳು ನಟಿಸಿರುವ 5 ಶಾರ್ಟ್ ಫಿಲಂಗಳು ಥಿಯೇಟರ್‌ನಲ್ಲಿ ಪ್ರೀಮಿಯರ್ ಆಗಿದ್ದವು. ಈ ಕಲರ್‌ಫುಲ್ ಪ್ರೀಮಿಯರ್‌ನ ಸಮಾರಂಭದಲ್ಲಿ ಮಹಾನಟಿಯ ಜಡ್ಜಸ್‌ಗಳಾದ ರಮೇಶ್ ಅರವಿಂದ್, ಪ್ರೇಮ, ನಿರ್ದೇಶಕ ತರುಣ್ ಸುಧೀರ್ ಮತ್ತು ನಿಶ್ವಿಕಾ ನಾಯ್ಡು ಉಪಸ್ಥಿತರಿದ್ದರು ಮತ್ತು ಅನುಶ್ರೀ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮ ಕ್ರಿಯೇಟಿವಿಟಿಗೆ ಮತ್ತೊಂದು ಉದಾಹರಣೆ ಆಗಿತ್ತು.

    ಮಹಾನಟಿ ಕಾರ್ಯಕ್ರಮವು Z ಕನ್ನಡದ ಹೊಸ ಪ್ರಯತ್ನವಾಗಿದ್ದು, ಸಿನಿರಂಗ ಪ್ರವೇಶಿಸಲು ಬಯಸುವ ಪ್ರತಿಭಾವಂತ ನಟಿಯರನ್ನು ಪರಿಚಯಿಸುವ ಉದ್ದೇಶದಿಂದ ನಿರ್ಮಿಸಲಾದ ಕನ್ನಡದ ಮೊದಲ ಟೆಲಿವಿಷನ್ ಕಾರ್ಯಕ್ರಮವಾಗಿದೆ. ಇನ್ನು ಮಹಾನಟಿ ಸೀಸನ್ 1 ಅತ್ಯಂತ ಯಶಸ್ವಿ ಆಗಿದ್ದು ಅದರಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಸಿನೆಮಾ ಹಾಗೂ ಕಿರುತೆರೆಯಲ್ಲಿ ಅವಕಾಶಗಳು ಲಭಿಸಿವೆ. ಇನ್ನು ಮಹಾನಟಿ ಸೀಸನ್ 1ರ ಸಕ್ಸಸ್ ಬಳಿಕ ಮತ್ತೆ ಬಂದ ಮಹಾನಟಿ ಸೀಸನ್ 2 ಈಗ ಕೊನೆಯ ಹಂತಕ್ಕೆ ತಲುಪಿದೆ. ಮಾನ್ಯ ರಮೇಶ್, ವರ್ಷಾ ಡಿಗ್ರಜೆ, ವಂಶಿ ರತ್ನಕುಮಾರ್, ಶ್ರೀಯ ಅಗಮ್ಯ ಹಾಗೂ ಭೂಮಿಕ ತಮ್ಮೇಗೌಡ ಅವರು ಫೈನಲಿಸ್ಟ್‌ಗಳಾಗಿದ್ದು ಸ್ಯಾಂಡಲ್ವುಡ್‌ನ ಪ್ರಸಿದ್ಧ ನಿರ್ದೇಶಕರುಗಳಾದ ಹರಿ ಸಂತೋಷ್, ಪನ್ನಗ ಭರಣ, ಕವಿರಾಜ್, ಶ್ರೀನಿಧಿ ಬೆಂಗಳೂರು ಹಾಗೂ ಉಮೇಶ್ ಕೆ. ಕೃಪ ನಿರ್ದೇಶಿಸಿರುವ ಶಾರ್ಟ್ ಮೂವಿಗಳಲ್ಲಿ ನಟಿಸಿದ್ದಾರೆ.

    ಇನ್ನು ಈ ಶಾರ್ಟ್ ಮೂವಿಗಳ ಸ್ಕ್ರೀನಿಂಗ್ ನವೆಂಬರ್ 3ರಂದು ಆಯಿತು. ಇಲ್ಲಿ ಅದ್ಬುತ ನಿರ್ದೇಶಕರ ನಿರ್ದೇಶನಕ್ಕೆ ಫೈನಲಿಸ್ಟ್ ಸ್ಪರ್ಧಿಗಳು ಹೇಗೆ ಜೀವ ತುಂಬಿದರು ಎಂದು ಕಾಣಸಿಕ್ಕಿತು. ಇನ್ನು ಇಲ್ಲಿ ಮಹಾನಟಿ ಫೈನಲಿಸ್ಟ್‌ಗಳ ಕನಸು ನನಸಾಗುವುದರಲ್ಲಿ Z ಕನ್ನಡದ ಪಾತ್ರ ಎದ್ದು ಕಾಣುತ್ತಿತ್ತು. ಮಾಧ್ಯಮ ಪ್ರತಿನಿಧಿಗಳು, ಅಭಿಮಾನಿಗಳು ಮತ್ತು ಚಲನಚಿತ್ರ ಕ್ಷೇತ್ರದ ಸದಸ್ಯರ ಉಪಸ್ಥಿತಿ ಈ ಸಂಭ್ರಮಾಚರಣೆಗೆ ಮತ್ತಷ್ಟು ಮೆರುಗನ್ನು ನೀಡಿತು. ಇನ್ನು ಬೆಳ್ಳಿಪರದೆಯತ್ತ ಮೊದಲ ಹೆಜ್ಜೆಯನ್ನು ಇಡುತ್ತಿರುವ ಫೈನಲಿಸ್ಟ್‌ಗಳಿಗೆ ಇದು ಹೆಚ್ಚಿನ ಉತ್ಸಾಹವನ್ನು ನೀಡಿತು.

   ಕಿರುತೆರೆಯಿಂದ ಸಿಲ್ವರ್ ಸ್ಕ್ರೀನ್‌ಗೆ ಪ್ರತಿಭಾನ್ವಿತ ನಟಿಯರಿಗೆ ಅವಕಾಶ ಕೊಡಿಸುವುದು ಮಹಾನಟಿ ರಿಯಾಲಿಟಿ ಶೋನ ಮುಖ್ಯ ಉದ್ದೇಶ. ಅಷ್ಟೇ ಅಲ್ಲದೇ ಬೇರೆ ಬೇರೆ ರೌಂಡ್ಸ್‌ಗಳ ಮೂಲಕ ಈ ನಟಿಯರಿಗೆ ಸಿಲ್ವರ್ ಸ್ಕ್ರೀನ್‌ನಲ್ಲಿ ಹೇಗೆ ಕಾಣಿಸಬೇಕು, ಹೇಗೆ ನಟಿಸಬೇಕು ಎನ್ನುವುದಲ್ಲದೆ ಬೆಳ್ಳಿತೆರೆಯ ಇನ್ನಷ್ಟು ವಿಷಯಗಳ ಬಗ್ಗೆ ಟ್ರೈನ್ ಮಾಡಲಾಗಿದ್ದು ಇದು ಈ ನಟಿಯರಿಗೆ ಮುಂದಿನ ದಿನಗಳಲ್ಲಿ ಸಹಾಯ ಆಗಲಿದೆ. ಈ ಗ್ರ್ಯಾಂಡ್ ಫಿನಾಲೆ ಇದೇ ನವೆಂಬರ್ 8ರಂದು Z ಕನ್ನಡ ವಾಹಿನಿಯಲ್ಲಿ ಸಂಜೆ 7 ಗಂಟೆಯಿಂದ ಪ್ರಸಾರಗೊಳ್ಳಲಿದೆ.
ಯಾರು ಮಹಾನಟಿ ಸೀಸನ್ 2 ನ ವಿನ್ನರ್ ಎಂದು ತಿಳಿದುಕೊಳ್ಳಲು ತಪ್ಪದೆ ವೀಕ್ಷಿಸಿ Z ಕನ್ನಡ ಇದೇ ನವೆಂಬರ್ 8 ರಂದು ಸಂಜೆ 7 ಗಂಟೆಯಿಂದ

Recent Articles

spot_img

Related Stories

Share via
Copy link