ರಾಮನಗರ:
ಮೈತ್ರಿ ಸರ್ಕಾರದ ಆಪದ್ಭಾಂಧವ ಡಿ.ಕೆ.ಶಿವಕುಮಾರ್ ವಿರುದ್ಧ ಇಡಿ ಎಫ್ಐಆರ್ ದಾಖಲಿಸಿದ್ದು ಡಿಕೆಶಿಗೆ ಬಂಧನದ ಭೀತಿ ಎದುರಾಗಿರುವ ಬೆನ್ನಲ್ಲೇ ಆರೋಗ್ಯವೂ ಹದಗೆಟ್ಟಿದೆ.
ಡಿಕೆಶಿಗೆ ಫುಡ್ಪಾಯ್ಸನ್ನಿಂದ ವಿಪರೀತ ವಾಂತಿಯಾಗುತ್ತಿದ್ದು ಕನಕಪುರದ ತಮ್ಮ ನಿವಾಸದಲ್ಲೇ ಮೂವರು ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಇಬ್ಬರೂ ಕನಕಪುರ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಇದಕ್ಕೂ ಮೊದಲು ಹೈದರಾಬಾದ್ನಿಂದ ಬೆಂಗಳೂರಿಗೆ ಬರುವಾಗ ಉಪಹಾರ ಸೇವಿಸಿದ್ದ ಸಚಿವರಿಗೆ ಫುಡ್ಪಾಯ್ಸನ್ ಆಗಿದ್ದು ಆರೋಗ್ಯ ಹದಗೆಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ