ಬೆಂಗಳೂರು :
ಜೇಬಿನಲ್ಲಿದ್ದ ಹೊಸ ಮೊಬೈಲ್ ಸ್ಫೋಟಗೊಂಡು ಯುವಕನ ಎಡಗಾಲಿಗೆ ಬಹುತೇಕ ಭಾಗ ಛಿದ್ರಗೊಂಡಿರುವ ಘಟನೆ ಕೋಲಾರದಲ್ಲಿ ಬೆಳಕಿಗೆ ಬಂದಿದೆ.
ಕೆ.ಆರ್. ಗಂಗಾಧರ್ (25), ಏ. 18 ರಂದು ಮತ ಚಲಾಯಿಸಲು ದ್ವಿಚಕ್ರ ವಾಹನದಲ್ಲಿ ಹೊಸಕೋಟೆ-ಚಿಂತಾಮಣಿ ರಸ್ತೆಯ ತರಬಹಳ್ಳಿ ಗೇಟ್ ಬಳಿ ಹೋಗುತ್ತಿದ್ದ ಸಂದರ್ಭದಲ್ಲಿ ಪ್ಯಾಂಟಿನ ಎಡಜೇಬಿನಲ್ಲಿ ಇಟ್ಟಿದ್ದ. ಏ. 17 ರಂದು ಖರೀದಿಸಿದ್ದ ಪ್ರಖ್ಯಾತ ಸಂಸ್ಥೆಯ ಮೊಬೈಲ್ ನಿಂದ ಹೊಗೆ ಬರುತ್ತಿರುವುದು ಕಂಡು ಬಂದಿದ್ದು, ಕೂಡಲೇ ವಾಹನವನ್ನು ನಿಲ್ಲಿಸಲೆತ್ನಿಸಿದ್ದಾನೆ. ಅಷ್ಟರಲ್ಲಿ ಮೊಬೈಲ್ ಸ್ಪೋಟಗೊಂಡಿದೆ.
ಸ್ಫೋಟದಿಂದಾಗಿ ಗಂಗಾಧರನ ಕಾಲು ಮುರಿದಿದ್ದು, ಎಡಗಾಲಿನ ಬಹುತೇಕ ಭಾಗ ಛಿದ್ರಗೊಂಡಿದೆ. ಅವರ ತಾಯಿಗೂ ಗಾಯಗಳಾಗಿವೆ. ನಗರದ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಅವರು ಮೊಬೈಲ್ ಅಂಗಡಿ ಮ್ಯಾನೇಜರ್ ಹಾಗೂ ಮೊಬೈಲ್ ಕಂಪನಿ ವಿರುದ್ಧ ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ