
ಗುಬ್ಬಿ: ಮುದಿಗೆರೆ ಗೇಟ್ ಬಳಿಯಿಂದ ಪ್ರಾರಂಭವಾಗಿ ಪತ್ರೆ ಮತ್ತಿಘಟ್ಟದವರೆಗೆ ಸುಮಾರು 7 ಕಿಮಿಯವರೆಗೆ ನೆಡೆಯುತ್ತಿರುವ ವೈಟ್ ಟ್ಯಾ ಪಿಂಗ್ ಕಾಮಗಾರಿ ಕಳೆದ ಆರು ತಿಂಗಳುಗಳಿಂದ ಕುಂಟುತ್ತಾಸಾಗಿದೆ
ಗುತ್ತಿಗೆದಾರರು ಯಾರು ಕಾಮಗಾರಿ ಎಲ್ಲಿಂದ ಎಲ್ಲಿಯವರೆಗೆ ಇದಕ್ಕೆ ಎಷ್ಟು ಹಣ ಬಿಡುಗಡೆಯಾಗಿದೆ ನಿಗದಿತ ಸಮಯ ಎಷ್ಟು ಎಂಬುದರ ಬಗ್ಗೆ ಸಾರ್ವಜನಿಕವಾಗಿ ಒಂದು ನಾಮಪಲಕವನ್ನು ಹಾಕಿಲ್ಲ ಜೊತೆಗೆ ಗುಬ್ಬಿ ಪಟ್ಟಣದ ಒಳಗೆ ಒಂದು ಕಡೆ ಈಗಾಗಲೇ ರಸ್ತೆ ನಿರ್ಮಾಣ ಮಾಡಿ ಎರಡು ತಿಂಗಳುಗಳು ಕಳೆದರು ಇನ್ನು ರಸ್ತೆಯ ಪಕ್ಕಕ್ಕೆ ಮಣ್ಣು ಬರ್ತಿ ಮಾಡಿ ಸಂಚಾರ ಮುಕ್ತಗೊಳಿಸಿಲ್ಲ

ಈಗ ಒಂದೇ ಕಡೆ ಎರಡೂ ಕಡೆಯ ವಾಹನ ಸಂಚಾರ ಮಾಡುವುದರಿಂದ ಆಗಾಗ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ
ರಸ್ತೆ ನಿರ್ಮಾಣಕ್ಕೆಂದು ಬೀದಿ ದೀಪಗಳ ವೈರ್ ಗಳ ಸಂಪರ್ಕ ಕಡಿತ ಗೊಳಿಸಿದ್ದು ರಾತ್ರಿಯ ಹೊತ್ತು ರಸ್ತೆಯಲ್ಲಿ ಕಾರ್ಗತ್ತಲು ಕವಿದಿರುತ್ತದೆ ಇಷ್ಟಲ್ಲೆಲ್ಲಾ ಆದರೂ ಸಂಬಂದಪಟ್ಟ ಅಧಿಕಾರಿಗಳು ಕಿಂಚಿತ್ತೂ ಗಮನಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ನಿತ್ಯ ಸಾರ್ವಜನಿಕರು ಸಂಚಾರ ದಟ್ಟಣೆಯಲ್ಲಿ ಹೈರಾಣಾಗುತ್ತಿದ್ದಾರೆ.








