ಮಾಜಿ ಮೇಯರ್ ರವಿಕುಮಾರ್ ಹಂತಕರು ಶರಣು!!!? ವಿಡಿಯೋ ನೋಡಿ

0
4423

ತುಮಕೂರು:    ಮಾಜಿ ಮೇಯರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಹತ್ಯೆ ಪ್ರಕರಣ‌.ರೌಡೀಶೀಟರ್ ಸುಜಯ್ ಅಲಿಯಾಸ್ ಸುಜಿ ಪೋಲಿಸರಿಗೆ ಶರಣು.ಗೌರಿಬಿದನೂರು ಗ್ರಾಮಾಂತರ ಪೋಲಿಸ್ ಠಾಣೆಗೆ ತೆರಳಿ ಶರಣು.ಸುಜಯ್ ತನ್ನ ಸಹಚರ ರಘು ಇಬ್ಬರು ಪೋಲಿಸರಿಗೆ ಶರಣು.ಗಡ್ಡರವಿ ಹತ್ಯೆ ಪ್ರಕರಣದಲ್ಲಿ ಸುಜಯ್ ಹೆಸರು ಮುಂಚೂಣಿಯಲ್ಲಿತ್ತು.

 

ಸುಜಯ್ ಹಾಗೂ ಸಹಚರರು ಹತ್ಯೆ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.ಪೋಲಿಸರು ಸುಜಯ್ ನನ್ನ ಎನ್ಕೌಂಟರ್ ಮಾಡುತ್ತಾರೆ ಎಂಬ ಶಂಕೆ ವ್ಯಕ್ತವಾಗಿತ್ತು.ರಾಜಕಾರಣಿ ಗಳ ಒತ್ತಡದಿಂದ ಎನ್ ಕೌಂಟರ್ ಮಾಡಲು ಪೋಲಿಸರು ಸಿದ್ದತೆ ನಡೆಸಿದ್ದಾರೆ ಎಂಬ ಗುಮಾನಿ ಹಬ್ಬಿತ್ತು.

ಪ್ರಾಣಭೀತಿಯಿಂದ ತಲೆ ಮರೆಸಿಕೊಂಡಿದ್ದ ಸುಜಯ್ ಹಾಗೂ ಸಹಚರರು.ಸುಜಯ್ ಗಾಗಿ ಜಿಲ್ಲಾ ಪೋಲಿಸ್ ವಿಶೇಷ ತನಿಖಾ ತಂಡ ಶೋಧ ಕಾರ್ಯ ನಡೆಸುತ್ತಿದ್ದರು.ನೆನ್ನೆ ಜಿಲ್ಲಾ ಕೋರ್ಟ್ ಗೆ ಶರಣಾಗುತ್ತಾರೆ ಎಂದು ಪೋಲಿಸರು ಕಾದಿದ್ದರು.ಇಂದು ಸಹಚರ ರಘು ಜೊತೆ ಗೌರಿಬಿದನೂರು ಗ್ರಾಮಾಂತರ ಪೋಲಿಸ್ ಠಾಣೆಗೆ ಶರಣಾಗಿರುವ ಸುಜಯ್.ಭಾನುವಾರ ಬೆಳಗ್ಗೆ ಮಾಜಿ ಮೇಯರ್ ಗಡ್ಡರವಿ ಹತ್ಯೆಯಾಗಿತ್ತು.ತುಮಕೂರು ನಗರದ ಬಟವಾಡಿ ಸೇತುವೆ ಬಳಿ ಘಟನೆ ನಡೆದಿತ್ತು.

LEAVE A REPLY

Please enter your comment!
Please enter your name here