ಪುಲ್ವಾಮ ದಾಳಿಯ ಹಿಂದೆ ಪಾಕ್ ಪಾತ್ರ ಒಪ್ಪಿಕೊಂಡ ಪಾಕ್ ಸಂಸದ …!!!

ಇಸ್ಲಾಮಾಬಾದ್:
 
      ಪಾಕಿಸ್ತಾನ ಹೇಳುವಂತೆ ನಾವು ಶಾಂತಿ ಪ್ರಿಯ ದೇಶ ಎಂಬ ಮುಖವಾಡವನ್ನು ಅವರದೇ ದೇಶದ ಸಂಸದನೋರ್ವ ಬಯಲು ಮಾಡಿಬಿಟ್ಟಿದ್ದಾನೆ, ಪುಲ್ವಾಮ ಉಗ್ರ ದಾಳಿಯ ಹಿಂದೆ ಪಾಕಿಸ್ತಾನ ಸರ್ಕಾರದ ಕೈವಾಡವಿದೆ ಎಂದು ಹೆಮ್ಮೆಯಿಂದ ಹೇಳುವ ಮೂಲಕ ಪಾಕಿಸ್ತಾನದ ಮರ್ಯಾದೆಯನ್ನು ಮೂರುಕಾಸಿಗೆ ಹರಾಜು ಹಾಕಿದ್ದಾನೆ .

     44 ಮಂದಿ ಯೋಧರ ಸಾವಿಗೆ ಕಾರಣವಾಗಿದ್ದ ಪುಲ್ವಾಮ ಉಗ್ರ ದಾಳಿಯಲ್ಲಿ ಪಾಕಿಸ್ತಾನ ಸರ್ಕಾರದ ನೇರ ಹಸ್ತಕ್ಷೇಪ ಮಾಡಿರುವುದು  ಇದೀಗ ಅವರದೇ ದೇಶದ ಸಂಸದನಿಂದ ಬಯಲಿಗೆ ಬಂದಿದೆ , ಪುಲ್ವಾಮ ದಾಳಿ ಇಮ್ರಾನ್ ಖಾನ್ ಸರ್ಕಾರದ ಮಹತ್ವದ ನಡೆಯಾಗಿದೆ ಎಂದು ಸಂಸದ ಬಣ್ಣಿಸಿದ್ದಾನೆ.

       ಇಸ್ಲಾಮಾಬಾದ್‌ ರಣತಂತ್ರ ಅಧ್ಯಯನ ಸಂಸ್ಥೆ(ಐಎಸ್‌ಎಸ್‌ಐ) ಏರ್ಪಡಿಸಿದ ಪಾಕಿಸ್ತಾನ-ಚೀನಾ ಸಂಸ್ಥೆ ಹಾಗೂ ವಿದೇಶಾಂಗ ವ್ಯವಹಾರಗಳ ಸಮಿತಿ ಸಭೆಯಲ್ಲಿ ಮಾತನಾಡಿದ ಪಾಕಿಸ್ತಾನ ಮುಸ್ಲಿಂ ಲೀಗ್‌ ಪಕ್ಷದ ಸದಸ್ಯರಾದ ಹುಸೇನ್‌ ಅವರು, ‘ಪುಲ್ವಾಮಾ ದಾಳಿ ಬಳಿಕ ವಾಯುದಾಳಿಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕಚ್ಚಾಟದ ಸಂದರ್ಭದಲ್ಲಿ ಇಡೀ ದೇಶವೇ ಒಂದಾಗಿತ್ತು. ಇದರಿಂದಾಗಿಯೇ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಗೆಲುವು ಸಿಕ್ಕಿತು,’ ಎಂದು ಪ್ರತಿಪಾದಿಸಿದರು.
           ಮುಂದುವರಿದ ಅವರು, ನಾವು ಸರಿಯಾದ ಸಂದರ್ಭದಲ್ಲಿ ಸರಿಯಾದ ನಿರ್ಧಾರ ಕೈಗೊಂಡೆವು. ಇದರಿಂದಾಗಿಯೇ ಅಂತಾರಾಷ್ಟ್ರೀಯ ಮತ್ತು ದೇಶದ ಜನತೆ ನಮ್ಮ ಪರ ಧ್ವನಿಯೆತ್ತುವಂತಾಯಿತು. 1998ರಲ್ಲಿ ಪರಮಾಣು ಪರೀಕ್ಷೆ ನಡೆಸಿದ 20 ವರ್ಷದ ಬಳಿಕ ಪುಲ್ವಾಮಾ ದಾಳಿಯು ಪಾಕಿಸ್ತಾನದ ಅತ್ಯುತ್ತಮ ನಡೆಯಾಗಿದೆ ಎಂದು ಸಂಸದ ಮುಷಾಹಿದ್‌ ಹುಸೇನ್‌ ಸಯದ್‌ ಹೇಳಿದ್ದಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap