ಅಭ್ಯರ್ಥಿಗಳು ಸಲ್ಲಿಸುವ ಆದಾಯದ ವಿವರಗಳ ಮೇಲೆ ಕಣ್ಣಿಟ್ಟ ಐ ಟಿ..!!

ಬೆಂಗಳೂರು:
 
        ಪ್ರಸ್ತುತ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಆಸ್ತಿ ವಿವರ ಘೋಷಣೆ ಸಂದರ್ಭದಲ್ಲಿ ಜಾಗರೂಕರಾಗಿರಬೇಕು. ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸುವ ಅಫಿಡವಿಟ್ಟನ್ನು ಆದಾಯ ತೆರಿಗೆ ಇಲಾಖೆಯು ಸಲ್ಲಿಕೆ ದಾಖಲೆಗಳ ಜೊತೆ ಪರಿಶೀಲಿಸಲನೆ ನಡೆಸಲಿದೆ ಎಂದು ತಿಳಿಸಿದೆ.
       ಕರ್ನಾಟಕ ಮತ್ತು ಗೋವಾ ಪ್ರಾಂತ್ಯದ ಆದಾಯ ತೆರಿಗೆ ಇಲಾಖೆಯ ಪ್ರಧಾನ ಮುಖ್ಯ ಚುನಾವಣಾಧಿಕಾರಿ ಬಿ ಆರ್ ಬಾಲಕೃಷ್ಣ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ತನ್ನದೇ ಗುಪ್ತಚರ ಸಿಬ್ಬಂದಿ ಮೂಲಕ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಏನಾದರೂ ನಗದು ಮತ್ತು ವಸ್ತುಗಳ ವಿಲೇವಾರುಯಾಗುತ್ತದೆಯೇ ಎಂದು ಗಮನಿಸಲಿದ್ದಾರೆ ಎಂದು ಹೇಳಿದರು.
       ಇಲ್ಲಿಯವರೆಗೆ ರಾಜ್ಯದಲ್ಲಿ ಮೂರು ಕಡೆ ಶೋಧ ಕಾರ್ಯಗಳನ್ನು ನಡೆಸಿದ್ದು ಸುಮಾರು  2.37 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಒಂದು ನಮ್ಮದೇ ಗುಪ್ತಚರ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಾಗಿದ್ದು 1.67 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap