ತುಮಕೂರು:
ಬೆಳ್ಳಂಬೆಳಗ್ಗಯೇ ನಗರ ಪಾಲಿಕೆಯ ಮಾಜಿ ಮೇಯರ್ ಒಬ್ಬರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ತುಮಕೂರಿನ ಬಟವಾಡಿ ಬ್ರಿಡ್ಜ್ ಬಳಿ ನಡೆದಿದೆ.
ನಗರ ಪಾಲಿಕೆ 32 ನೇ ವಾರ್ಡ್ ಜೆಡಿಎಸ್ ಸದಸ್ಯ ಎಚ್.ರವಿಕುಮಾರ್ ಕೊಲೆಯಾದ ದುರ್ದೈವಿ.
ಇಂದು ಬೆಳಿಗ್ಗೆ 8.45ರ ಸುಮಾರಿಗೆ ಮನೆ ಸಮೀಪದ ಕ್ಯಾಂಟೀನ್‌ನಲ್ಲಿ ಟೀ ಕುಡಿಯುತ್ತಿದ್ದ ವೇಳೆ ಟಾಟಾ ಏಸ್‌ನಲ್ಲಿ ಬಂದ 7 ಮಂದಿ ದುಷ್ಕರ್ಮಿಗಳು ರವಿಕುಮಾರ್ ಕಣ್ಣಿಗೆ ಕಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಏಳು ಮಂದಿ ಹಂತಕರ ಪೈಕಿ ಇಬ್ಬರು ವಾಹನದಲ್ಲಿ ಕುಳಿತಿದ್ದರು. ಐವರು ಇಳಿದು ಬಂದು ತಲೆ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ. ಎನ್ನಲಾಗಿದೆ.