ಅಯೋಧ್ಯೆ ಧಾಮ ರೈಲಿಗೆ ಬೆಂಕಿ : ಬೆದರಿಕೆ ಹಾಕಿದ ಅನ್ಯಕೋಮಿನ ಯುವಕರು …..!

ವಿಜಯನಗರ : 

    ಟ್ರೈನ್​ಗೆ ಬೆಂಕಿ ಹಚ್ಚುತ್ತೇನೆ ಎಂದು ಅನ್ಯಕೋಮಿನ ಯುವಕ ಬೆದರಿಕೆ ಹಾಕಿದ್ದಾನೆ ಎನ್ನುವ ಕಾರಣಕ್ಕೆ ಮೈಸೂರು- ಅಯೋಧ್ಯೆ ಧಾಮ ರೈಲು 2 ಗಂಟೆ ಸ್ಥಗಿತಗೊಂಡ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.

   ಮೈಸೂರು- ಅಯೋಧ್ಯಾ ಧಾಮ ರೈಲಿನಲ್ಲಿ ಅನ್ಯಕೋಮಿನ ಯುವಕರು ರೈಲು ಬೋಗಿಗಳನ್ನು ಸುಟ್ಟುಹಾಕುವುದಾಗಿ ಬೆದರಿಸಿದರು ಎಂದು ಆರೋಪಿಸಿ ಪ್ರಯಾಣಿಕರು ಹೊಸಪೇಟೆ ರೈಲು ನಿಲ್ಧಾಣದಲ್ಲಿ ಪ್ರತಿಭಟನೆ ಮಾಡಿದರು.

    ಅನ್ಯಕೋಮಿನ ಯುವಕ ರೈಲಿಗೆ ಬೆಂಕಿ ಹಚ್ಚುತ್ತೇನೆ ಎಂದಿದ್ದಲ್ಲದೇ ಪದೇ ಪದೇ ಚೈನ್ ಎಳೆದ ಕಾರಣ ರೈಲು ಸುಮಾರು ಎರಡು ಘಂಟೆಗಳ ಕಾಲ ತಡವಾಗಿ ಚಲಿಸಿದೆ. ಮೈಸೂರು-ಅಯೋಧ್ಯಾ ಧಾಮ ರೈಲಿನಲ್ಲಿ ನೂರಾರು ರಾಮ ಭಕ್ತರು ಪ್ರಯಾಣಿಸಲು ಸಜ್ಜಾಗಿದ್ದರು.

    ಮೈಸೂರು- ಅಯೋಧ್ಯೆ ಧಾಮ ರೈಲಿನಲ್ಲಿ 1500 ರಾಮ ಭಕ್ತರು ಪ್ರಯಾಣ ಮಾಡುತ್ತಿದ್ದರು. ಈ ವೇಳೆಯಲ್ಲಿ ರಾಮ ಭಕ್ತರು ಮಾರ್ಗದುದ್ದಕ್ಕೂ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದಾರೆ. ಇದರಿಂದ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ, ಸುಮಾರು 4 ಜನ ಅನ್ಯ ಕೋಮಿನ ಯುವಕರು ರಾಮ ಭಕ್ತರ ಜೊತೆಯಲ್ಲಿ ವಾಗ್ವಾದ ಆರಂಭ ಮಾಡಿದ್ದಾರೆ.

    ಈ ವೇಳೆಯಲ್ಲಿ ಹಿಂದೂ ಹಾಗೂ ಅನ್ಯಕೋಮಿನ ಯುವಕನ ಜೊತೆಯಲ್ಲಿ ವಾಗ್ವಾದ ಆರಂಭವಾಗಿದೆ. ಹಿಂದೂ ಕಾರ್ಯಕರ್ತರು ಹಾಗೂ ಅನ್ಯಕೋಮಿನ ಯುವಕರು ಪದೇ ಪದೇ ಚೈನ್ ಎಳೆದ ಕಾರಣ ಟ್ರೈನ್ ಮುಂದೆ ಸಾಗಲು ತೊಂದರೆಯಾಗಿದೆ. ಹಿಂದೂಪರ ಸಂಘಟನೆಗಳು ಬೆದರಿಕೆ ಹಾಕಿದ ಕಿಡಿಗೇಡಿಯನ್ನು ಬಂಧಿಸುವಂತೆ ಪಟ್ಟು ಹಿಡಿದರು.

    ಅಯೋಧ್ಯೆ ಧಾಮ ರೈಲಿಗೆ ಬೆಂಕಿ ಹಚ್ಚುತ್ತೇನೆ ಎಂದು ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ನಿಲ್ದಾಣದಲ್ಲಿ ಓರ್ವನನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಅನ್ಯಕೋಮಿನ ನಾಲ್ವರು ಯುವಕರು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

    ಸ್ಥಳಕ್ಕೆ ವಿಜಯನಗರ ಎಸ್ಪಿ ಶ್ರೀಹರಿಬಾಬು ಭೇಟಿ ನೀಡಿದ್ರು. ಎಲ್ಲರನ್ನೂ ಸಮಾಧಾನ ಮಾಡಿ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಸತತ 11ನೇ ದಿನದಿಂದ ಅಯೋಧ್ಯೆಗೆ ಈ ರೈಲು ಸಂಚಾರ ಮಾಡುತ್ತಿದೆ. ನಿನ್ನೆ ಬೋಗಿಗಳ ಜೊತೆಗೆ ರೈಲ್ವೇ ಪೊಲೀಸರು ಮತ್ತು ಲೋಕಲ್ ಪೊಲೀಸರನ್ನು ಭದ್ರತೆ ದೃಷ್ಟಿಯಿಂದ ಕಳಿಸಿಕೊಡಲಾಯ್ತು.

Recent Articles

spot_img

Related Stories

Share via
Copy link
Powered by Social Snap