ಬೆಂಗಳೂರು:

ಅರ್ಕಾವತಿ ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಿಂದ ಸಿಎಂ ಕುಮಾರಸ್ವಾಮಿ ಅವರ ಹೆಸರನ್ನು ಕೈಬಿಡಲಾಗಿದೆ.
ಕುಮಾರಸ್ವಾಮಿ ಅವರು ತಮ್ಮ ಹೆಸರು ಕೈಬಿಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಬಿ.ವಿ.ಪಾಟೀಲ ಮನವಿ ಪುರಸ್ಕರಿಸಿ, ಕುಮಾರಸ್ವಾಮಿ ಅವರ ಹೆಸರು ಕೈಬಿಟ್ಟಿದೆ. ಜೊತೆಗೆ ಐವರು ಆರೋಪಿಗಳ ಪೈಕಿ ಇನ್ನೂ ಮೂವರು ಆರೋಪಿಗಳಾದ ಜ್ಯೋತಿ ರಾಮಲಿಂಗಂ ರೆಡ್ಡಿ, ಜಮೀನಿನ ಮಾಲೀಕರಾದ ಎ.ವಿ.ರವಿಪ್ರಕಾಶ್, ಎ.ವಿ. ಶ್ರೀರಾಮ್ ಹೆಸರನ್ನೂ ಕೈಬಿಟ್ಟಿದೆ.
2007ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಮಾಡಿದ್ದ ಆರೋಪ ಎದುರಾಗಿತ್ತು. ಥಣಿಸಂದ್ರ ಬಳಿ 3 ಎಕರೆ 24 ಗುಂಟೆ ಜಾಗವನ್ನು ರವಿಪ್ರಕಾಶ್ ಮತ್ತು ಶ್ರೀರಾಮ್ ಎಂಬುವರಿಗೆ ಕುಮಾರಸ್ವಾಮಿ ಅವರು ಡಿನೋಟಿಫೈ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








