ಗುತ್ತಲ:
ಇಂದಿನ ದಿನ ಮಾನದಲ್ಲಿ ಸರಕಾರದ ಹತ್ತು ಹಲವು ಯೋಜನೆಯ ರುವಾರಿಯಾಗಿರುವ ಆಧಾರ ಕಾರ್ಡ ಸಾರ್ವಜನಿಕರಿಗೆ ಮುಟ್ಟುವಲ್ಲಿ ಕುಂಟಿತವಾಗಿ ಜನರು ಅನೇಕ ಸೌಲಭ್ಯದಿಂದ ವಂಚಿತವಾಗಿರುವುದು ಮಾತ್ರ ಸತ್ಯ. ಮಗುವಿಂದ ಹಿಡಿದು ಪ್ರತಿಯೊಬ್ಬರಿಗೂ ಅತ್ಯಅವಶ್ಯವಾಗಿರುವ ಆಧಾರ ಇಲ್ಲದೆ ಹೋದರೆ ಪ್ರಾಥಮಿಕ ಹಂತವಾದ ಶಾಲೆಯಿಂದ ಹಿಡಿದು ಸರಕಾರಿ ಕಛೇರಿ, ಬ್ಯಾಂಕ್, ಪಡಿತರ, ವಿದ್ಯುತ್ ಸಂಪರ್ಕ ಹೀಗೇ ದೊಡ್ಡ ಪಟ್ಟಯೇ ಇದ್ದು, ಸರ್ವರಿಗೂ ಆಧಾರ್ ಅವಶ್ಯವಾಗಿದೆ. ಆದಿಲ್ಲದಿದ್ದರೆ ಸರಕಾರದಿಂದ ಸಿಗುವ ಹಲವಾರು ಸೌಲಭ್ಯಗಳೂ ಸ್ಥಗಿತಗೊಳ್ಳುತ್ತವೆ. ಇದನ್ನು ಅರಿತ ಎಷ್ಟೋ ಜನರು ಆಧಾರ್ ಕಾರ್ಡ ಮಾಡಿಸುಕೊಳ್ಳುವವರು ಇದ್ದಾರೆ.
ಆಧಾರ್ ಕಾರ್ಡ ಹೊಂದಿಯು ತಿದ್ದುಪಡಿಗಾಗಿ ಸುಮಾರು ದಿನಗಳು ಅಲೆದಾಡಿ ಬೇಸತ್ತವರೂ ಸಾಕಷ್ಟು ಜನರಿದ್ದಾರೆ. ಇನ್ನೊಂದಡೆ ಆಧಾರ್ ಮಾಡಿಸಿಕೊಂಡು ಕಾರ್ಡ ಬಾರದೆ ಇರುವವರು ಇದ್ದಾರೆಈ ರೀತಿಯ ಸಮಸ್ಯೆಯಿಂದ ಬೇಸತ್ತು ಆಧಾರ್ ಸಹವಾಸವೇ ಬೇಡ ಎನ್ನು ಮನೋ ಭಾವನೆಯನ್ನು ಹೊಂದುವಂತೆ ಮಾಡಿದೆ ಆಧಾರ್ ಕಾರ್ಡ ಸಮಸ್ಯೆ.
ಸಮೀಪದ ಕಂಚಾರಗಟ್ಟಿ ಗ್ರಾಮದ ಶಾಂತಪ್ಪ ಮೈಲಾರ ಎಂಬುವರು ಸುಮಾರು 10 ರಿಂದ 12 ಬಾರಿ ಆಧಾರ್ ಕಾರ್ಡ ಪಡೆಯಲು ಅಲೆದಾಡಿದರು. ಕಾರ್ಡ ಮಾತ್ರ ದೊರೆತಿಲ್ಲಾ. ಇದರಿಂದ ಸರಕಾರದಿಂದ ದೊರೆಯುವ ಸೌಲಭ್ಯಗಳಿಂದ ವಂಚಿತಗೊಂಡು ಇದೀಗ ದಿಕ್ಕೂತೋಚದಂತಾಗಿದೆ. ಈ ಆಧಾರ್ ಕಾರ್ಡಗಾಗಿ ಹಾವೇರಿ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ ಹೀಗೆ ಹಲವಾರು ಕಚೇರಿಗಳಿಗೆ ಮತ್ತು ಆಧಾರ್ ಕಾರ್ಡ ವಿವಿಧ ಕೇಂದ್ರಗಳಿಗೆ ಅಲೆದಾಡಿದರೂ ದೊರೆತಿದ್ದು ಮಾತ್ರ ರಶೀದಿಯೇ ಹೊರೆತು ಆಧಾರ್ ಕಾರ್ಡ ಮಾತ್ರ ಬಂದಿಲ್ಲಾ.
ಕೃಷಿಕನಾಗಿ ಜೀವನ ಸಾಗಿಸುತ್ತಿರುವ ಈ ಕುಂಟುಂಬದ ಸದಸ್ಯೆ ಆಧಾರ್ ಕಾರ್ಡಗಾಗಿ ದಿನ ಕೃಷಿ ಕೆಲಸವನ್ನು ಬಿಟ್ಟು ಅಲೆದಾಡಿದರು ಕಾರ್ಡ ಸಿಕ್ಕಲ್ಲಾ, ಇದರಿಂದ ಪಡಿತರ ಚೀಟಿ ಹಾಗೂ ಬೆಳೆವಿಮೆಗಳಂತಹ ಸರಕಾರಿ ಸೌಲಭ್ಯಗಳಿಗೆ ಈಗ ಆಧಾರ್ ಕಂಡಾಯವಾಗಿರುವುದರಿಂದ ಅವುಗಳು ಸ್ಥಗಿವಾಗಿವೆ. ಸಿಲಂಡರ್, ಬ್ಯಾಂಕ್ ಸಾಲ ಸಾಲ ಸಿಗುತ್ತಿಲ್ಲಾ ಹಾಗೂ ಮಕ್ಕಳ ಶಿಕ್ಷಣದ ಯೋಜನೆಗಳಿಗೂ ಮತ್ತು ಇನ್ನಿತರೆ ಕೆಲಸಗಳಿಗೆ ಆಧಾರ್ ಕಾರ್ಡ ಕೇಳುತ್ತಾರೆ. ಹೆಂಡತಿ ಸರಕಾರದ ಸೌಲಭ್ಯಗಳನ್ನು ಪಡೆಯಬೇಕಾದರು ಗಂಡನ ಆಧಾರ್ ಕಾರ್ಡ ಕೇಳುತ್ತಾರೆ. ಹೀಗೆ ಹಲವಾರು ಸಮಸ್ಯೆಗಳಿಂದಾಗಿ ಇದೀಗ ಆಧಾರ್ ಕಾರ್ಡ ಬಾರದೆ ಸರಕಾರದ ಸೌಲಭ್ಯಗಳು ಸ್ಥಗಿತಗೊಂಡಿವೆ ಎನ್ನುತ್ತಾರೆ.
ಈ ಹಿಂದೆ ಸರಕಾರದವರು ಆಧಾರ್ ಕಾರ್ಡ ಮಾಡಲು ಪ್ರತಿ ಗ್ರಾಮ ಪಂಚಾಯಿತಿಗೆ ಬಂದಾಗ ಅವರ ಬಳಿ ಮಾಡಿಸಿದಾಗ ರಶೀದಿ ನೀಡಿದ್ದರು. ಆದರೆ ಅವರು ರಶೀದಿ ನೀಡಿ ಸುಮಾರು ತಿಂಗಳಾದರು ಕಾರ್ಡ ಬರಲಿಲ್ಲಾ. ಹಾಗಾಗಿ ಬೇರೆಡೆಗೆ ಕಾರ್ಡ ಮಾಡುವರ ಬಳಿ ಹೋಗಿ ಕೇಳಿದಾಗ ಇದು ರದ್ದಾಗಿದೆ ಮೊತ್ತೊಮ್ಮೆ ಮಾಡಿಸಿ ಎಂಬ ಉತ್ತರ ನೀಡಿದರು. ಅಲ್ಲಿಯೂ ಕಾರ್ಡ ಮಾಡಿಸಿ ಕೆಲ ತಿಂಗಳು ಕಳೆದರು ಕಾರ್ಡ ಮಾತ್ರ ಬರಲಿಲ್ಲಾ. ಹೀಗಾಗಿ ಮೊತ್ತೊಡೆ ತೆರಳಿದರು ಈ ಉತ್ತರವೇ ದೊರೆಯಿತು. ಕಾರ್ಡ ಅವಶ್ಯವಿರುವುದರಿಂದ ಕಾರ್ಡಗಾಗಿ ಗುತ್ತಲ, ನೆಗಳೂರು, ಹೊಸರಿತ್ತಿ, ಹಾವೇರಿಗಳಿಗೂ ಅಲೆದಾಡಿ ಆಧಾರ್ ಕಾರ್ಡ ಮಾಡಿಸಿದರು ರಶೀದಿ ದೊರೆಯುತ್ತೆ ಹೊರೆತು ಕಾರ್ಡ ಮಾತ್ರ ಬರುತ್ತಿಲ್ಲಾ. ಗುತ್ತಲದಲ್ಲಿ ಆಧಾರ್ ಕಾರ್ಡ ಮಾಡಲು ಪ್ರಾರಂಭಿಸಬೇಕು ಎನ್ನುತ್ತಾರೆ ಶಾಂತಪ್ಪ ಮೈಲಾರ.
ಇಂತಹ ಆಧಾರ್ ಕಾರ್ಡ ಸಮಸ್ಯೆಯನ್ನು ಹೊತ್ತು ಬಳಷ್ಟು ಜನ ರೋಸಿ ಹೋಗಿದ್ದಾರೆ. ಆದರೆ ಏನು ಅರಿಯದ ಮುಗ್ದ ಜನ ಮಾತ್ರ ಸರಕಾರಿ ಸೌಲಭ್ಯದಿಂದ ವಂಚಿತವಾಗಿದ್ದಾರೆ ಎಂದರೆ ತಪ್ಪಾಗುದೊಲ್ಲಾ.
ಈ ಕೃಷಿಕನ ಆಧಾರ್ ಕಾರ್ಡ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಿ ಇವರ ಈ ಸಮಸ್ಯೆಗೆ ಮುಕ್ತಿ ದೊರೆಕಿಸುವುರಾ ಎಂಬ ನೀರಿಕ್ಷೆಯಲ್ಲಿ ಕಾದು ಕುಳಿತ ರೈತ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
