ಆಯುಷ್ಮಾನ್ ದಿನಸ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಆನ್‌ಲೈನ್ ಭಾಷಣ

ಬೆಂಗಳೂರು :

ಇಂದು ಆಯುಷ್ಮಾನ್ ದಿನಸ – ಆರೋಗ್ಯ ಮಂಥನ ದಿನದ (ಏಪ್ರಿಲ್ 30) ಅಂಗವಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಎಲ್ಲಾ 6085 ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಇತರೆ ವೈದ್ಯಕೀಯ ವೃತ್ತಿಪರರಿಗೆ ಪ್ರತಿಜ್ಞಾವಿಧಿಯನ್ನು ಆನ್ ಲೈನ್ ವೇದಿಕೆ ಮೂಲಕ ಭೋದಿಸಲಿದ್ದಾರೆ. ಜೊತೆಗೆ ಪ್ರಗತಿ ಸಾಧಿಸಿದ ಜಿಲ್ಲೆಗಳಿಗೆ ಪ್ರಶಸ್ತಿಯನ್ನು ನೀಡಲಿದ್ದಾರೆ. ಈ ವೇಳೆ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆ, ಟಿಲಿ ಸಮಾಲೋಚನೆ, ಆರೋಗ್ಯ ಮತ್ತು ಕ್ಷೇಮ ಕ್ರೇಂದ್ರ ಸೇವೆಗಳು, ಎನ್.ಸಿ.ಡಿ ಕಾರ್ಯಕ್ರಮ ಮತ್ತು ಜನೌಷಧಿ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಗುಣ್ಮಾತ್ಮಕವಾಗಿ ತಲುಪುತ್ತಿರುವ ಬಗ್ಗೆ ಸಿಬ್ಬಂದಿ ಹಾಗೂ ಫಲಾನುಭವಿಗಳೊಂದಿಗೆ ಆನ್ ಲೈನ್ ಮೂಲಕ ಸಂವಾದವನ್ನು ನಡೆಸಲಿದ್ದಾರೆ.
ಇನ್ನೂ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ರೋಗಿಗಳನ್ನು ಹೆಚ್ಚುವರಿ ಆಸ್ಪತ್ರೆಗಾಗಿ ಉನ್ನತ ಮಟ್ಟದ ಸರ್ಕಾರಿ ಆಸ್ಪತ್ರೆ ಅಥವಾ ಎಸ್ಎಎಸ್ಟಿ ನೋಂದಾಯಿತ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಲು ‘ಅಂತರ್ಜಾಲ ರೆಫರಲ್ ವ್ಯವಸ್ಥೆ’ ಜಾರಿ ತರಲಾಗಿದೆ.

ದ್ವಿತೀಯ ಮತ್ತು ತೃತೀಯ ಹಂತದ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಸಕಾಲದಲ್ಲಿ ಮೇಲ್ಪಟ್ಟದ ಉನ್ನತ ಚಿಕಿತ್ಸಾ ಆಸ್ಪತ್ರೆಗೆ ನಿರ್ದೇಶಿಸುವುದು ಆಭಾ-ಆಕ ಯೋಜನೆಯ ಪ್ರಮುಖ ಅಂಶವಾಗಿದೆ. ಈವರೆಗೆ , ರೆಫರಲ್ ಅನ್ನು ಹಸ್ತಪ್ರತಿ ಚೀಟಿಗಳಲ್ಲಿ ಮಾಡುತ್ತಿದ್ದು, ಇದು ರೆಫರ್ ಮಾಡುವ ವೈದ್ಯರಿಗೆ ಹಾಗೂ ರೋಗಿಗಳಿಗೆ ಶ್ರಮದಾಯಕವಾಗುತ್ತಿತ್ತು. ಹೊಸ ಅತರ್ಜಾಲ ರೆಫರಲ್ ವ್ಯವ್ಸ್ಥೆಯಲ್ಲಿ, ಚಿಕಿತ್ಸೆ ನೀಡುವ ವೈದ್ಯರು ಮತ್ತು ಆಸ್ಪತ್ರೆಯ ನೋಡಲ್ ಅಧಿಕಾರಿಗಳು ತಮ್ಮ ಬಳಕೆದಾರರ ಗುರುತಿನ ಚೀಟಿಯ ಮೂಲಕ ಅಂತರ್ಜಾಲ ಪ್ರವೇಶಿಸಿ ರೋಗಿಗಳನ್ನು ಉನ್ನತ ಆಸ್ಪತ್ರೆಗೆ ರೆಫರ್ ಮಾಡುತ್ತಾರೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಈ ಕುರಿತು ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಈ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಿಂದ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯುವುದರ ಜೊತೆಗೆ ಇಡೀ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರಲಿದೆ. ಎಲ್ಲಾ ರೋಗಿಗಳು, ಕುಟುಂಬದವರು ಹಾಗೂ ವೈದ್ಯರಿಗೆ ಇದರಿಂದ ಅನುಕೂಲವಾಗಲಿದೆ. ವಂಚನೆ, ದುರುಪಯೋಗವನ್ನೂ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link