ಜಗಜೀವನ್ ರಾಂ ಅವರದ್ದು ಅಪರೂಪದ ನಾಯಕತ್ವ ಹಾಗೂ ವ್ಯಕ್ತಿತ್ವ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು:

ಬೆಂಗಳೂರು, ಏಪ್ರಿಲ್ 05: ಜಗಜೀವನ್ ರಾಂ ಅವರದ್ದು ಅಪರೂಪದ ನಾಯಕತ್ವ ಹಾಗೂ ವ್ಯಕ್ತಿತ್ವ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಇಂದು ಬಾಬು ಜಗಜೀವನ್ ರಾಂ ಅವರ 115ನೇ ಜನ್ಮದಿನಾಚಾರಣೆ ಅಂಗವಾಗಿ ವಿಧಾನಸೌಧದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದರು.

ಬಿಹಾರದ ಕಡುಬಡತನದ ಮನೆತನದಲ್ಲಿ ಹುಟ್ಟಿ, ಬಹಳಷ್ಟು ಅವಮಾನ, ಅಪಮಾನಗಳನ್ನು ಸಹಿಸಿಕೊಂಡು ಬೆಳೆದ ಅವರು ಮುಂದೆ ಭಾರತನ ಉಪಪ್ರಧಾನಿಯಾಗಿ ಬೆಳೆದರು.ನೋವುಂಡರೂ ಅಧಿಕಾರ ಬಂದಾಗ ಸಮಸ್ತ ಭಾರತದ ಕಲ್ಪನೆಯಲ್ಲಿ ಕೆಲಸ ಮಾಡಿದರು. ಅವರಿಗೆ ವಹಿಸಿದ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಸ್ವತಂತ್ರ ಪೂರ್ವದ ನಾಯಕ.

ಅಮೀರ್ ಖಾನ್ ‘PK’ ಹಿಂದಿಕ್ಕಿ ಗಳಿಕೆಯಲ್ಲಿ ದಾಖಲೆ ಬರೆದ ‘RRR’: 10 ದಿನಗಳಲ್ಲಿ 900 ಕೋಟಿ ರೂ. ಕಲೆಕ್ಷನ್

ದೀನದಲಿತರ ಅಭಿಮಾನದ, ಸ್ವಾಭಿಮಾನದ ಸಂಕೇತದೀನದಲಿತರ ಧ್ವನಿಯಾಗಿ ಅವರಿಗೆ ನ್ಯಾಯ ಒದಗಿಸಲು ಅವರು ಪಟ್ಟ ಪರಿಶ್ರಮ ದೊಡ್ಡದು. ದೀನದಲಿತರ ಅಭಿಮಾನದ, ಸ್ವಾಭಿಮಾನದ ಸಂಕೇತವಾಗಿದ್ದರು. ಕೃಷಿ ಸಚಿವರಾಗಿ ಅವರು ಮಾಡಿದ ಹಸಿರು ಕ್ರಾಂತಿ ಭಾರತ ದೇಶವನ್ನು ಸ್ವಾಭಿಮಾನಿ ರಾಷ್ಟ್ರವನ್ನಾಗಿ ಬೆಳೆಸಿದೆ. ಒಂದು ಕಾಲದಲ್ಲಿ ವಿದೇಶದಿಂದ ಆಹಾರ ಧ್ಯಾನಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇತ್ತು.

”ಕೆಜಿಎಫ್​ 2” ಸಿನಿಮಾ ತೆರೆಗೆ ಬರಲು ಸಜ್ಜು: ಯಶ್​ ಕಟೌಟ್ ​ಗೆ ಬರುತ್ತಿದೆ ಭಾರೀ ಬೇಡಿಕೆ

ವಿಜ್ಞಾನದಿಂದ ಹಸಿರು ಕ್ರಾಂತಿಯಾಗಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯಾದ ಮೇಲೆ ನಮ್ಮದು ಸ್ವಾವಲಂಬಿ ದೇಶವಾಗಿದೆ. ಅದಕ್ಕೆ ಜಗಜೀವನ್ ರಾಮ್ ಅವರೇ ಕಾರಣೀಭೂತರು. ರಕ್ಷಣಾ ಮಂತ್ರಿಯಾಗಿ ರಾಷ್ಟ್ರದ ಸುರಕ್ಷತೆಗಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿಯೂ ಪ್ರಸಿದ್ದಿ ಪಡೆದಿದ್ದರು. ಅವರ ವಿಚಾರಗಳು ನಮಗೆ ಪ್ರೇರಣೆ. ಅವರ ತತ್ವ ಆದರ್ಶಗಳನ್ನು ಇಟ್ಟುಕೊಂಡು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಹೆಚ್ಚಿನ ಅವಕಾಶಗಳನ್ನು ನೀಡುವ ಮೂಲಕ ಜಗಜೀವನ್ ರಾಂ ಅವರಿಗೆ ನಿಜವಾದ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇವೆ. ದಲಿತರ ಪ್ರೇರಣಾ ದಿನ ಎಂದು ಭಾವಿಸಿ ನಾವು ಕೆಲಸ ಮಾಡಬೇಕು ಎಂದರು.

ಆಯಂಕರ್ ಅನುಶ್ರೀ ತಂದೆ ವಿಚಾರ ಮಾಧ್ಯಮದವರಿಗೆ ನೀಡಿದ್ದಕ್ಕೆ ಬೇಸರ..!

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಏಪ್ರಿಲ್ 16 ರಿಂದ ಪ್ರತಿಭಟನೆ ಮಾಡುವುದಾಗಿ ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಪ್ರತಿಭಟಿಸುವ ಹಕ್ಕಿದೆ. ಆದರೆ ಆಧಾರರಹಿತವಾದ ಹೇಳಿಕೆಗೆ ನಾನು ಉತ್ತರಿಸುವುದಿಲ್ಲ. ಬಿ.ಜೆ.ಪಿ ರಾಷ್ಟ್ರೀಯ ಪಕ್ಷ. ಕರ್ನಾಟಕ ಜನತೆಯ ಆಶೀರ್ವಾದ ಇದೆ. ಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಆಡಳಿತ ನೀಡುವ ವಿಶ್ವಾಸವಿದೆ. ಹೇಳಿಕೆಗಳಿಂದ ಸಮಸ್ಯೆ ಇತ್ಯರ್ಥವಾಗುವುದಿಲ್ಲ. ಹಲವಾರು ವಿಚಾರಗಳು ಹಿಂದಿರುವ ವಿಚಾರ. 2001, 2002 ರ ಆದೇಶಗಳು. ನಾವು ಯಾವುದೇ ಹೊಸ ಆದೇಶವನ್ನು ಹೊರಡಿಸಿಲ್ಲ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.

ಬಿಎ, ಬಿಕಾಂಗೂ ಎಂಟ್ರೆನ್ಸ್ ಎಕ್ಸಾಂ: ಪಿಯು ಅಂಕವಿನ್ನು ಲೆಕ್ಕಕ್ಕಿಲ್ಲ; ಪದವಿ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷೆ

ಆಜಾನ್: ಎಲ್ಲರನ್ನು ವಿಶ್ವಾಸಕ್ಕೆ ಪಡೆಯಲಾಗುವುದು

ಆಜಾನ್ ಬಗ್ಗೆ ಈಗಾಗಲೇ ಉಚ್ಚನ್ಯಾಯಾಲಯದ ಆದೇಶವಿದೆ. ಆದೇಶ ಅನುಷ್ಠಾನ ಏಕಾಗಿಲ್ಲ ಎಂದು ಮತ್ತೊಂದು ಆದೇಶವಿದೆ. ಎಷ್ಟು ಡೆಸಿಬಲ್ ಇರಬೇಕು ಎಂದು ಸೂಚಿಸಲಾಗಿದೆ. ಡೆಸಿಬಲ್ ಮೀಟರ್ ಗಳನ್ನು ಜಿಲ್ಲಾ ಮಟ್ಟದಲ್ಲಿ ಖರೀದಿಸಲು ಆದೇಶವಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡುವ ಕೆಲಸವಿದು. ಒತ್ತಾಯಪೂರ್ವಕವಾಗಿ ಮಾಡುವಂಥದ್ದಲ್ಲ. ಕ್ಷೇತ್ರ ಮಟ್ಟದಲ್ಲಿ ಹಲವಾರು ಸಂಘಟನೆಗಳ ಜೊತೆಗೆ ಪೊಲೀಸ್ ಠಾಣೆಯಿಂದ ಹಿಡಿದು ಜಿಲ್ಲಾ ಮಟ್ಟದಲ್ಲಿ ಹಿಂದೆಯೇ ಮಾಡಲಾಗಿದೆ. ಮುಂದೂ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಪೊಲೀಸರು ಮೊಬೈಲ್ ಕಿತ್ತುಕೊಳ್ಳುವಂತಿಲ್ಲ; ಕಮಲ್ ಪಂಥ್

ಸಚಿವ ಸಂಪುಟ ವಿಸ್ತರಣೆ

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇದುವರೆಗೂ ಯಾವುದೇ ಚರ್ಚೆ ಯಾಗಿಲ್ಲ. ಅಮಿತ್ ಷಾ ಮತ್ತು ಜೆ.ಪಿ.ನಡ್ಡಾ ಅವರನ್ನು ಭೇಟಿ ಯಾದ ಸಂದರ್ಭದಲ್ಲಿ ವಿಚಾರ ಪ್ರಸ್ತಾಪ ವಾಗುವ ನಿರೀಕ್ಷೆ ಇದೆ ಎಂದರು.

ಕೆ.ಟಿ.ರಾಮರಾವ್ ಟ್ವೀಟ್ ಹಾಸ್ಯಾಸ್ಪದ

ಆಂಧ್ರಪ್ರದೇಶದ ಐ.ಟಿ. ಬಿ.ಟಿ ಸಚಿವ ಕೆ.ಟಿ.ರಾಮರಾವ್ ಅವರು ಮಾಡಿರುವ ಟ್ವೀಟ್ ಅತ್ಯಂತ ಹಾಸ್ಯಾಸ್ಪದವಾಗಿದೆ. ಇಡೀ ಜಗತ್ತಿನ ಜನ ಬೆಂಗಳೂರಿಗೆ ಬರುತ್ತಿದ್ದಾರೆ. ಹೆಚ್ಚಿನ ಯೂನಿಕಾರ್ನ್ ಮತ್ತು ಸ್ಟಾರ್ಟ್ ಅಪ್ ಗಳು ಬೆಂಗಳೂರಿನಲ್ಲಿವೆ ಎಂದರು.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap