ಎ’ಗೆ 5.25%, ‘ಬಿ’ಗೆ 5.25%, ‘ಸಿ’ಗೆ 4.50% : ಒಳಮೀಸಲಾತಿ ಜಾರಿ

ದಲಿತ ಸಮುದಾಯಗಳ ದಶಕಗಳ ಕನಸು ನನಸು : ಸಂಪುಟದ ಮಹತ್ವದ ನಿರ್ಧಾರ – ಮಹತ್ವದ ಹೆಜ್ಜೆ

ಸರ್ಕಾರದ ಐತಿಹಾಸಿಕ ನಿರ್ಣಯ : ಎಸ್‌ಸಿ, ಅಲೆಮಾರಿಗಳಿಗೂ ಬಂಪರ್ ಕೊಡುಗೆ 


ಬೆಂಗಳೂರು: ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ಸಿದ್ದರಾಮಯ್ಯ ಸರ್ಕಾರ ನಿರ್ಣಾಯಕ ತೀರ್ಮಾನ ಕೈಗೊಂಡಿದೆ. ಪರಿಶಿಷ್ಟ ಜಾತಿಗಳಿಗೆ ಲಭ್ಯವಿರುವ ಶೇ.15 ರಷ್ಟು ಮೀಸಲಾತಿಯಲ್ಲಿ ದಲಿತ ಎಡಗೈ ಸಮುದಾಯಕ್ಕೆ ಶೇ. 5.25, ಬಲಗೈ ಸಮುದಾಯಕ್ಕೆ ಶೇ. 5.25 ಮತ್ತು ಇತರರಿಗೆ ಶೇ. 4.5ರಷ್ಟು ಹಂಚಿಕೆಗೆ ನಿರ್ಧರಿಸಲಾಗಿದೆ. ಇದರೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವ ಕ್ರಾಂತಿಕಾರಿ ನಿರ್ಣಯ ಕೈಗೊಂಡಿದೆ. ಎಸ್‌ಸಿ ಒಳಮೀಸಲಾತಿ ಸಂಬAಧ ಶುಕ್ರವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ‘ಎ’ಗೆ 5.25%, ‘ಬಿ’ಗೆ 5.25%, ‘ಸಿ’ಗೆ 4.50% ಒಳ ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ.

ಶೇ.17ರ ಎಸ್‌ಸಿ ಒಳಮೀಸಲಾತಿ ಅನ್ವಯ ಎಸ್‌ಸಿಯನ್ನು ಎ (ಬಲ), ಬಿ (ಎಡ) ಮತ್ತು ಸಿ (ಸ್ಪöÈಶ್ಯರು) ಎಂದು ಮೂರು ವರ್ಗೀಕರಣ ಮಾಡಲಾಗಿದೆ. ಅದರಂತೆ ಒಳಮೀಸಲಾತಿ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ.

ಈ ಕುರಿತು ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಶೇ.17ರ ಎಸ್‌ಸಿ ಒಳಮೀಸಲಾತಿ ಅನ್ವಯ ‘ಎ’ಗೆ 5.25%, ‘ಬಿ’ಗೆ 5.25%, ‘ಸಿ’ಗೆ 4.50% ಒಳ ಮೀಸಲಾತಿ ನೀಡಲು ತೀರ್ಮಾನಿಸಿದ್ದೇವೆ. ಒಳಮೀಸಲಾತಿ ಬಗ್ಗೆ ಸಾಕಷ್ಟು ಹೋರಾಟ ನಡೆಯುತ್ತಿದೆ. 1-8-2024ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ ಒಳಮೀಸಲಾತಿ ಮಾಡಬಹುದು ಎಂದು ಹೇಳಿತ್ತು. ಬಳಿಕ ನಾವು ನಾಗಮೋಹನ ದಾಸ್ ನೇತೃತ್ವದಲ್ಲಿ ಆಯೋಗ ರಚನೆ ಮಾಡಿದೆವು. ಅವರ ವರದಿಯನ್ನು ಸಂಪುಟದ ಮುಂದೆ ಇಟ್ಟು ಅನುಮೋದನೆ ನೀಡಲಾಗಿದೆ. ಸಂಪುಟ ಸಭೆಯಲ್ಲಿ 6:6:5ರಂತೆ ಒಳ ಮೀಸಲಾತಿ ನೀಡಲು ತೀರ್ಮಾನಿಸಲಾಗಿತ್ತು. ಈ ಸಂಬAಧ ಕಾನೂನು ಮಾಡಲಾಯಿತು. ಕಾನೂನು ಮಾಡಿದ ಬಳಿಕ ರೋಸ್ಟರ್‌ನಲ್ಲಿ ಗೊಂದಲ ಉಂಟಾಯಿತು. ಇತ್ತ ಅಲೆಮಾರಿಯವರು ಕೋರ್ಟ್ಗೆ ಹೋದರು. ಕೋರ್ಟ್ನಲ್ಲಿ ಮೀಸಲಾತಿ 50% ಮೀರಬಾರದು ಎಂದು ತೀರ್ಪು ನೀಡಿತು. ಎಸ್‌ಸಿ (17%), ಎಸ್ ಟಿ (7%)ರಂತೆ 24% ಮೀಸಲಾತಿ ಹಿನ್ನೆಲೆಯಲ್ಲಿ ಒಟ್ಟು ಮೀಸಲಾತಿ 56% ಗೆ ಹೋಯಿತು. ಹೈಕೋರ್ಟ್ ಒಟ್ಟು ಮೀಸಲಾತಿ ಪ್ರಮಾಣ 50% ಮೀರಬಾರದು ಎಂದು ಹೇಳಿತು. ಮಾ.27ರಂದು ವಿಶೇಷ ಸಂಪುಟ ಸಭೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ನೀತಿ ಸಂಹಿತೆ ಇದ್ದ ಕಾರಣ ಸಭೆ ಸಾಧ್ಯವಾಗಿರಲಿಲ್ಲ” ಎಂದರು.

“ಕಳೆದ ಸಂಪುಟ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಲು ತೀರ್ಮಾನಿಸಲಾಗಿತ್ತು. ಅವರು ಇಂದು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ವರದಿ ನೀಡಿದರು. ಒಳಮೀಸಲಾತಿ ಕಾಯ್ದೆಯ ಪ್ರಕಾರ 6:6:5ರಂತೆ ಒಳಮೀಸಲಾತಿ ನೀಡಲಾಗಿತ್ತು. ಈಗ 15% ಎಸ್‌ಸಿ ಒಳಮೀಸಲಾತಿಯಡಿ 5.3, 5.3 ಮತ್ತು 4.4ರಂತೆ ಮಾಡುವ ಸಂಬAಧ ಚರ್ಚಿಸಲಾಯಿತು” ಎಂದು ಹೇಳಿದರು.

“ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸರ್ವಾನುಮತದಿಂದ ಈ ಬಗ್ಗೆ ತೀರ್ಮಾನವಾಗಿದೆ. ಇದಕ್ಕೆ ಮುನಿಯಪ್ಪ, ತಿಮ್ಮಾಪೂರ, ಪ್ರಿಯಾಂಕ್ ಖರ್ಗೆ, ಮಹದೇವಪ್ಪ, ಸತೀಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ಯಾವುದೇ ಅಪಸ್ವರ ಇಲ್ಲದೇ ತೀರ್ಮಾನಕ್ಕೆ ಬರಲಾಗಿದೆ” ಎಂದು ಸಿಎಂ ತಿಳಿಸಿದರು.

“ಹೈಕೋರ್ಟ್ ತೀರ್ಮಾನದವರೆಗೆ 6% ಬ್ಯಾಕ್ ಲಾಗ್ ಆಗಿ ಪರಿಗಣಿಸಲಾಗುವುದು. ಹೈಕೋರ್ಟ್ ತೀರ್ಮಾನದ ಬಳಿಕ ಇದನ್ನು ತೀರ್ಮಾನಿಸಲು ನಿರ್ಧರಿಸಲಾಗಿದೆ. ಈ ಹಿಂದಿನ 6:6:5 ಒಳಮೀಸಲಾತಿ ಅಧಿಸೂಚನೆ ವಾಪಸ್ ಪಡೆದು ಇಂದಿನ ತೀರ್ಮಾನದಂತೆ 5.25, 5.25, 4.50ರ ಅಧಿಸೂಚನೆ ಹೊರಡಿಸಲಾಗುವುದು” ಎಂದು ಮಾಹಿತಿ ನೀಡಿದರು.

“ಬಜೆಟ್‌ನಲ್ಲಿ 56,432 ನೇಮಕಾತಿ ಮಾಡುವ ಘೋಷಣೆ ಮಾಡಲಾಗಿದೆ. ಈ ಸಂಬAಧ ತುರ್ತು ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಿದ್ದೇವೆ. ಈ ನೇಮಕಾತಿಯಲ್ಲಿ ಒಳಮೀಸಲಾತಿ ನೀಡಲಾಗುವುದು. ಸಿ ವರ್ಗಕ್ಕೆ ಲಭ್ಯವಾಗುವ ಹುದ್ದೆಗಳಲ್ಲಿ ಸುಮಾರು 20% 59 ಅಲೆಮಾರಿ ಸಮುದಾಯಕ್ಕೆ ಮೀಸಲಾಗಿಡಬೇಕು ಎಂದು ತೀರ್ಮಾನಿಸಲಾಗಿದೆ. ಅಂದರೆ ಸಿ ವರ್ಗದ 4 ಹುದ್ದೆಗಳಲ್ಲಿ 1 ಹುದ್ದೆ ಅಲೆಮಾರಿ ಸಮುದಾಯಕ್ಕೆ ಮೀಸಲಿಡಲಾಗುವುದು” ಎಂದರು.

“ನೇಮಕಾತಿ ಕೂಡಲೇ ಆರಂಭವಾಗಲಿದೆ. ನಮ್ಮ ಪಕ್ಷದ ನಿಲುವು ಸಮ ಪಾಲು, ಸಮಬಾಳು ಅನ್ನೋದು. ಯಾರಿಗೂ ಅನ್ಯಾಯ ಆಗಬಾರದು ಎಂಬುದು ನಮ್ಮ ಉದ್ದೇಶ. ನಾವು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ದಲಿತ ಸಂಘಟನೆಗಳು ಇದನ್ನು ಒಪ್ಪಿಕೊಳ್ಳುವ ವಿಶ್ವಾಸವಿದೆ” ಎಂದು ಸಿಎಂ ಹೇಳಿದ್ದಾರೆ.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಳಗ ಪೈಕಿ ಅವಕಾಶ ವಂಚಿತ ಉಪಜಾತಿಗಳಿಗೆ ಒಳಮೀಸಲು ಕಲ್ಪಿಸಬೇಕೆಂಬ ಸುಮಾರು ದಶಕಗಳ ಹಕ್ಕೋತ್ತಾಯ ಹಾಗೂ ಹೋರಾಟಗಳು ನಡೆದಿದ್ದು, ಇದೀಗ ಈ ಸಂಬAಧ ಸಿದ್ದರಾಮಯ್ಯ ಸರ್ಕಾರ, ಅಳೆದು ತೂಗಿ ಕೊನೆಗೂ ಮಹತ್ವದ ನಿರ್ಣಯ ಕೈಗೊಂಡು ಒಳಮೀಸಲಾತಿ ಜಾರಿಗೆಗೆ ತೀರ್ಮಾನಿಸಿದೆ.

ರಾಷ್ಟçಕ್ಕೆ ಮಾದರಿ ಆಗಬಲ್ಲ ತೀರ್ಮಾನ
ವಿಶೇಷ ಸಂಪುಟ ಸಭೆ ಬಳಿಕ ಕಾನೂನು ಸಚಿವ ಎಚ್??ಡಿ ಪಾಟೀಲ್ ಪ್ರತಿಕ್ರಿಯಿಸಿ, ಒಳಮೀಸಲಾತಿ ವಿಚಾರಕ್ಕೆ ಸಂಬAಧಿಸಿದAತೆ ಹಲವಾರು ವಾರಗಳಿಂದ ಚರ್ಚೆ ನಡೆದಿತ್ತು. ರಾಷ್ಟçಕ್ಕೆ ಮಾದರಿ ಆಗಬಲ್ಲ ಮಹತ್ವವಾದ ಜನರ ಬದುಕಿಗೆ ವಿಶೇಷ ತಿರುವನ್ನು ನೀಡುವ ತೀರ್ಮಾನ ತೆಗೆದುಕೊಂಡಿದೆ. ರೋಸ್ಟರ್ ವಿಚಾರದಲ್ಲಿ ಗೊಂದಲ ಸೃಷ್ಡಿ ಆಗಿತ್ತು. ಸೂಕ್ತವಾದ ಪರಿಪೂರ್ಣ ಪರಿಹಾರ ಕಂಡು ಮಾರ್ಗದರ್ಶನ ಮಾಡಿ ಪರಿಹಾರ ಕಂಡುಕೊಳ್ಳಲು ಸಿಎಂ ಯಶಸ್ವಿಯಾಗಿದ್ದಾರೆ ಎಂದರು.

ಮೀಸಲಾತಿಯೊಂದಿಗೆ ನೇಮಕಾತಿ

ವಿಶೇಷ ಸಚಿವ ಸಂಪುಟ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಂತಿಮವಾಗಿ ನಾವು ಸಂಪುಟದಲ್ಲಿ ಒಂದು ನಿರ್ಧಾರ ಕೈಗೊಂಡಿದ್ದೇವೆ. ಪ್ರವರ್ಗ ಎ-5.25, ಬಿ-5.25, ಸಿ-4.5 ಎಂದು ನಿರ್ಧಾರ ಮಾಡಿದ್ದು,ವಿಶೇಷ ಸಂಪುಟ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಕೊಳ್ಳಲಾಗಿದೆ. ಯಾವುದೇ ಅಪಸ್ವರ ಇಲ್ಲದೆಯೇ ಸಂಪುಟದಲ್ಲಿ ಒಪ್ಪಿಕೊಳ್ಳಲಾಗಿದೆ. ನ್ಯಾಯಾಲಯದ ಮುಂದಿನ ಆದೇಶದವರೆಗೆ ಇದೇ ಅನುಪಾತ ಅನ್ವಯವಾಗಲಿದ್ದು, ನೇಮಕಾತಿ ವೇಳೆ ಪ್ರವರ್ಗ ಎ-5.25, ಬಿ-5.25, ಸಿ-4.5 ಮೀಸಲಾತಿಯೊಂದಿಗೆ ಅಧಿಸೂಚನೆಯನ್ನು ಮತ್ತೊಮ್ಮೆ ಪ್ರಕಟ ಮಾಡುತ್ತೇವೆ. ಬಜೆಟ್ನ ಲ್ಲಿ 56,432 ಹುದ್ದೆಗಳ ಭರ್ತಿ ಮಾಡುವುದಾಗಿ ಘೋಷಿಸಿದ್ದೇವೆ. ಈ 56,432 ಹುದ್ದೆಗಳ ಭರ್ತಿ ವೇಳೆ ಇದೇ ಮೀಸಲಾತಿ ಅನುಪಾತ ಅನ್ವಯವಾಗಲಿದೆ. ವಿಶೇಷ ಸಂಪುಟ ಸಭೆಯಲ್ಲಿ ನಿರ್ಧರಿಸಿದ ಅನುಪಾತ ಮುಂದುವರಿಯಲಿದೆ ಎಂದು ಮಾಹಿತಿ ಎಂದು ಸ್ಪಷ್ಟಪಡಿಸಿದರು.

ಹಂತ ಹಂತವಾಗಿ ಹುದ್ದೆ ಭರ್ತಿ

ಖಾಲಿ ಇರುವ ಹುದ್ದೆಗಳನ್ನ ಹಂತ ಹಂತವಾಗಿ ಭರ್ತಿ ಮಾಡುತ್ತೇವೆ. ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಈಗ ನಿರ್ಧಾರ ಆಯಿತಲ್ಲ, ಇನ್ಮುಂದೆ ಶುರು ಮಾಡುತ್ತೇವೆ. ನಮ್ಮ ಪಕ್ಷದ ನಿಲುವು ಸಮಬಾಳು-ಸಮಪಾಲು. ಯಾರಿಗೂ ಅನ್ಯಾಯವಾಗಬಾರದು ಎಂಬುವುದು ನಮ್ಮ ನಿಲುವು. ನಾವು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಎಲ್ಲ ದಲಿತ ಸಂಘಟನೆಗಳು ಒಪ್ಪಿಕೊಳ್ಳುತ್ತವೆ ಎಂಬ ವಿಶ್ವಾಸವಿದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

Recent Articles

spot_img

Related Stories

Share via
Copy link