ಇಂಡಿಯಾ ಬುಕ್ ಆಫ್ ರೆಕಾಡ್ರ್ಗೆ ಬೆಂಗಳೂರಿನ ಬಾಲಕ

5 ನಿಮಿಷದಲ್ಲಿ 498 ಶಬ್ದಗಳನ್ನು ಓದುವ ಮೂಲಕ ಸಾಧನೆ

ಬೆಂಗಳೂರು : ಪೋಷಕರ ಬೆಂಬಲ ಇದ್ದರೆ ಮಕ್ಕಳು ಏನು ಬೇಕಾದರೂ ಸಾಧನೆ ಮಾಡಬಲ್ಲರು ಎಂಬುದಕ್ಕೆ ಈ ಬಾಲಕ ಕುಶಾಲ್ ಸಾಯಿ ಸಾಕ್ಷಿ. ಈ ಬಾಲಕ ತನ್ನ ಅಸಾಮಾನ್ಯ ಬುದ್ಧಿಯಿಂದ ಇಡೀ ದೇಶವೇ ಮೆಚ್ಚುವಂತಾಗಿದ್ದು. ಕರುನಾಡಿನ ಕೀರ್ತಿಯನ್ನು ಎಲ್ಲೆಡೆ ಪಸರಿಸಿದ್ದಾನೆ.

ನಗರದ ಕ್ವೀನ್ಸ್ ರಸ್ತೆಯ ನಿವಾಸಿ ಬಾಲಕ ಕುಶಾಲ್ ಸಾಯಿ ತನ್ನ ಅದ್ಬುತ ಬುದ್ಧಿವಂತಿಕೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ನ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾನೆ.

ಶಾಲೆಯ ಮೆಟ್ಟಿಲು ಹತ್ತದೇ ಪ್ರಶಸ್ತಿಗಳ ಗರಿ : ಬಾಲಕ ಕುಶಲ್ ಸಾಯಿ ಇನ್ನೂ ಶಾಲೆಯ ಮೆಟ್ಟಿಲುಗಳನ್ನು ಹತ್ತಿಲ್ಲ, ಆದರೆ ಅವನ ಸಾಧನೆಗೆ ಪ್ರಶಸ್ತಿಗಳು ಹರಿದು ಬಂದಿವೆ ಈ ಬಾಲಕನ ಮನೆಯಲ್ಲಿ ಎಲ್ಲಿ ನೋಡಿದರೂ ಅವಾರ್ಡ್ ಗಳೇ ಕಾಣುತ್ತಿದ್ದು, ಪೆÇೀಷಕರು ಸಂತೋಷ ವ್ಯಕ್ತಪಡಿಸಿದರು.

ಬಾಲಕನ ಸಾಧನೆ : ಕಲಿಕೆ ಮತ್ತು ಸಾಧನೆಗೆ ವಯಸ್ಸಿನ ಮಿತಿ ಇಲ್ಲ, ಮನಸ್ಸಿದ್ದರೆ ಯಾವ ವಯಸ್ಸಿನಲ್ಲೂ ಕೂಡ ಸಾಧನೆಯನ್ನು ಮಾಡಬಹುದು. ಈ ಬಾಲಕನ ಸಾಧನೆಗೆ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾನೆ. ಇಂಗ್ಲೀಷ್ ಪದಗಳನ್ನು ಓದುವುದರಲ್ಲಿ ಸಾಧನೆ ಮಾಡಿದ್ದಾನೆ. 5 ನಿಮಿಷದಲ್ಲಿ 438 ಶಬ್ದಗಳನ್ನು ಓದುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್, ಏಷ್ಯ ಬುಕ್ ಆಫ್ ರೆಕಾರ್ಡ್, ಡಾಕ್ಟರ್ ಕಲಾಂ ವಲ್ರ್ಡ್ ರೆಕಾರ್ಡ್, ಕರ್ನಾಟಕ ಸ್ಟೇಟ್ ರೆಕಾರ್ಡ್ ನ ಸಾಧಕರ ಪಟ್ಟಿಯಲ್ಲಿ ಈ ಬಾಲಕ ಸಾಧನೆಯನ್ನು ಸೇರಿಸಿದ್ದಾರೆ. ಈ ಬಾಲಕನ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಸದಸ್ಯ ಗೂಗಲ್ ನಲ್ಲಿ ಬಾಲಕ ಕುಶಲ್ ಸಾಯಿ ಮಿಂಚುತ್ತಿದ್ದಾನೆ.

Recent Articles

spot_img

Related Stories

Share via
Copy link
Powered by Social Snap