ತುರುವೇಕೆರೆ:
ಪಟ್ಟಣದ ಮುತ್ತೂಟ್ ಪೈನಾನ್ಸ್ ಒಡವೇ ಸಾಲ ನೀಡಿ ಚಕ್ರ ಬಡ್ಡಿ ರೂಪದಲ್ಲಿ ಅಕ್ರಮವಾಗಿ ಹಣ ಉಸೂಲಿ ಮಾಡುತ್ತಿವೆ ಎಂದು ಆರೋಪಿಸಿ ಗ್ರಾಹಕರು ಶಾಖೆ ಬೀಗ ಹಾಕಿಸಿ ಪ್ರತಿಭಟಿಸಿದರು.
ಗ್ರಾಹಕ ಲೋಕೇಶ್ ಮಾತನಾಡಿ 26-10-2017ರಲ್ಲಿ 46.6 ಗ್ರಾಮ ಚಿನ್ನದ ಓಡವೆಯನ್ನು ಇಟ್ಟು 95 ಸಾವಿರ ಸಾಲವನ್ನು ಪಡೆದಿದ್ದೆನು ಆದರೆ ಈಗ 34.692 ರೂ ಬಡ್ಡಿ ಹಾಗಿದೆ ಎಂದು ನೋಟೀಸ್ ನೀಡಿದ್ದು ಇದರಲ್ಲಿ ಹಾನಿ ಸಂಭವ ಬಡ್ಡಿ ಎಂದು 12744 ರೂಗಳನ್ನು ಹಾಕಲಾಗಿದೇ ಇದೇ ರೀತಿ ಹೆಚ್ಚುವರಿ ಬಡ್ಡಿಯನ್ನು ವಿದಿಸಿ ಹಣವನ್ನು ಲೂಟಿ ಮಾಡುತ್ತಿದ್ದಾರೆ ಆರ್.ಬಿ.ಐ ನಿರ್ದೇಶನದಂತೆ ಬಡ್ಡಿ ವಿದಿಸದೇ ಮುತ್ತೂಡ್ ಪೈನಾನ್ಸ್ ಮನೋಸೋ ಇಚ್ಚೇ ಬಡ್ಡಿ ವಿದಿಸುತ್ತಿದೆ ಎಂದು ಆರೋಪಿಸಿದರು.
ಗ್ರಾಹಕ ಡಿ.ಕೆ. ಶಂಕರ್ ಮಾತನಾಡಿ 26-2-18ರಲ್ಲಿ 81.7 ಗ್ರಾಮ ಚಿನ್ನದ ಓಡವೆಯನ್ನಿಟ್ಟು 1ಲಕ್ಷದ 64 ಸಾವಿರ ಸಾಲ ಪಡೆದು ಈಗ 54.670 ರೂಗಳು ಬಡ್ಡಿಹಾಗಿದೆ ಕೂಡಲೇ ಪಾವತಿಸಬೇಕು ಇಲ್ಲವಾದರೇ ಓಡವೆಯನ್ನು ಹರಾಜು ಎಂದು ನೋಟೀಸ್ ನೀಡಿದ್ದಾರೆ ಇದಲ್ಲದೇ ಚಕ್ರ ಬಡ್ಡಿಯ ರೂಪದಲ್ಲಿ 20.194 ರೂಗಳನ್ನು ವಿದಿಸಿ ಹಗಲು ದರೋಡೆ ಮಾಡುತ್ತಿದ್ದಾರೆ ಇದೇ ರೀತಿ ಸಾವಿರಾರು ಗ್ರಾಹಕರಿಂದ ಲP್ಪ್ಷಂತಾರ ರೂಗಳು ದೋಚುತ್ತಿದ್ದಾರೆ ಎಂದು ಆರೋಪಿಸಿದರು.
ಎನ್. ಹರೀಶ್ ಮಾತನಾಡಿ ಮುತ್ತೂಡ್ ಪೈನಾನ್ಸ್‍ನಲ್ಲಿ 5 ಸಾವಿರ ಹಣ ಕಟ್ಟಿ ಅಂಗಡಿಗೆ ವಿಮೆ ಮಾಡಿಸಲಾಗಿತ್ತು ಕಳ್ಳತನ ,ಬೆಂಕಿ ಅವಘಡಗಳು ಸಂಭವಿಸಿದರೆ ಸುಮಾರು 2.50ಸಾವಿರವರೆಗೆ ನಷ್ಟದ ಹಣವನ್ನು ಬರಿಸಲಾಗುವುದು ಎಂದು ತಿಳಿಸಿದ್ದರು. 2018ರಲ್ಲಿ ವಿದ್ಯುತ್ ಅವಘಡದಿಂದ ನನ್ನ ಅಂಗಡಿ ಬೆಂಕಿ ಅವಘಡದಲ್ಲಿ ಸುಟ್ಟು ಹೋಗಿತ್ತು ಮುತ್ತೋಡ್ ಪೈನಾನ್ಸ್ ಅಧಿಕಾರಿಗಳು ಪರಿಶೀಲಿಸಿ ಪೋಟೋ ಸಮೇತ ಸೂಕ್ತ ದಾಖಲೆಗಳನ್ನು ನೀಡಿ ಒಂದು ವರ್ಷವಾದರೂ ಇನ್ನು ಸಹ ನನಗೆ ಬರಬೇಕಿದ್ದ ವಿಮೆ ಹಣ ಬಂದಿಲ್ಲ ಮ್ಯಾನೇಜರ್ ಕೇಳಿದರೆ ಇಂದು ನಾಳೆ ಎಂದು ಸಭೂಬು ಹೇಳುತ್ತಾರೆ ಕೂಡಲೇ ವಿಮೆ ಹಣವನ್ನು ನೀಡಬೇಕು ಎಂದು ಒತ್ತಾಯಿಸಿದರು.ನಮ್ಮ ಎಲ್ಲರ ಸಮಸ್ಯೆಗಳನ್ನು ಬಗೆ ಹರಿಸುವರೆಗೂ ಮುಚ್ಚುವಂತೆ ಶಾಖೆಗೆ ಬೀಗ ಹಾಕಿಸಲಾಯಿತು. ನಂತರ ತಹಶೀಲ್ದಾರ್‍ಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಬದಲ್ಲಿ ಹಲವಾರು ಗ್ರಾಹಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ