ಎ.ಟಿ.ಎಂ ಸೆಂಟರ್ ಗಳಲ್ಲಿ ಮಹಾ ವಂಚನೆ

 ಸಾರ್ವಜನಿಕರ ಡೆಬಿಟ್ ಕಾರ್ಡ್‌ಗಳನ್ನು ಬದಲಾಯಿಸುತ್ತಿದ್ದ ಆರೋಪಿಯ ಬಂಧನ.
ಬೆಂಗಳೂರು : ಸಾರ್ವಜನಿಕರು ಎ.ಟಿ.ಎಂ ಸೆಂಟರ್‌ಗಳಿಗೆ ಹಣ ಪಡೆಯಲೆಂದು ಹೋದಾಗ ಅವರಿಗೆ ಸಹಾಯಮಾಡುವ ನೆಪದಲ್ಲಿ ಡೆಬಿಟ್‌ ಕಾರ್ಡ್‌ಗಳನ್ನು ಬದಲಿಸಿ ಎಟಿಎಂ ಕೇಂದ್ರಗಳ ಬಳಿ ಪಿನ್ ನಂಬರ್‌ ಅನ್ನು ತಿಳಿದುಕೊಂಡು ವಂಚಿಸುತ್ತಿದ್ದ ವ್ಯಕ್ತಿಯನ್ನು ಬೆಂಗಳೂರು ನಗರದ ಈಶಾನ್ಯ ವಿಭಾಗದ ಸಿ.ಇ.ಎನ್ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ : ಮಂಜುನಾಥ್ ಎಂಬ ವ್ಯಕ್ತಿ ಹೊಸದಾಗಿ ಬ್ಯಾಂಕ್ ಖಾತೆಯನ್ನು ತೆರೆದು, ಒಂದು ಡೆಬಿಟ್ ಕಾರ್ಡ್‌ವನ್ನು ಪಡೆದುಕೊಂಡಿದ್ದು, ಹಣ ಪಡೆಯಲು ಎ.ಟಿ.ಎಂ ಯಲಹಂಕ ನ್ಯೂಟೌನ್‌ನಲ್ಲಿರುವ ಕೆನರಾ ಬ್ಯಾಂಕ್ ಎ.ಟಿ.ಎಂ ಸೆಂಟರ್‌ಗೆ ಹೋಗಿದ್ದು, ಎ.ಟಿ.ಎಂ ಕಾರ್ಡ್ ಹೊಸದಾಗಿ ಇದ್ದಕಾರಣ ಪಿನ್ ಅನ್ನು ಜನರೇಟ್ ಮಾಡಲು ಪ್ರಯತ್ನಿಸುತ್ತಿದ್ದು, ಅಲ್ಲಿಯೇ ಎ.ಟಿ.ಎಂ.ನ ಬಾಗಿಲ ಬಳಿ ಗಮನಿಸುತ್ತಿದ್ದ ಒಬ್ಬ ಅಪರಿಚಿತ ವ್ಯಕ್ತಿಯು ಇವರ ಬಳಿ ಬಂದು ಸಹಾಯ ಮಾಡುವ ನೆಪದಲ್ಲಿ ಎ.ಟಿ.ಎಂ ಕಾರ್ಡ್‌ ಅನ್ನು ಪಡೆದು ಪಿನ್ ಜನರೆಟ್ ಮಾಡಿ ನಂತರ  ಅದೇ ರೀತಿಯ ಬೇರೆ ಎ.ಟಿ.ಎಂ, ಕಾರ್ಡ್‌ವನ್ನು ನೀಡಿ ಕಳುಸಿದ್ದಾನೆ. ಸುಮಾರು ಒಂದು ವಾರದ ನಂತರ
 ಹಣದ ಅವಶ್ಯಕತೆ ಇದ್ದ ಕಾರಣ ಎ.ಟಿ.ಎಂ ನಲ್ಲಿ ಹಣ ಪಡೆಯಲು ಪ್ರಯತ್ನಿಸಿದ್ದು, ಆದರೆ ಯಾವುದೇ ಹಣ ಬರದ್ದಿದಾಗ ಬ್ಯಾಂಕಿಗೆ ಹೋಗಿ ವಿಚಾರ ಮಾಡಲಾಗಿ ಖಾತೆಯಲ್ಲಿ 8,51,534 ರೂಗಳ ಹಣ ಡ್ರಾ ಆಗಿರುವುದು ಕಂಡು ಶಾಕ್ ಆಗಿದ್ದಾರೆ. ಹಾಗೂ ಬ್ಯಾಂಕ್‌ನವರು ಆ ಡೆಬಿಟ್ ಕಾರ್ಡ್‌ ಸಂಬಂಧಿಸಿದ್ದಲ್ಲವೆಂದು ತಿಳಿಸಿದ್ದು, ಮಂಜುನಾಥ್ ಮೋಸ ಹೋಗಿರುವುದಾಗಿ ತಿಳಿದು ಸಿ.ಇ.ಎನ್ ಪೊಲೀಸ್ ಠಾಣೆ ಯಲಹಂಕಗೆ ಬಂದು ದೂರುನ್ನು ನೀಡಿದ್ದಾರೆ.
ಈ ಪ್ರಕರಣದ ಆರೋಪಿಯನ್ನು ಯಲಹಂಕದಲ್ಲಿ ಪತ್ತೆಮಾಡಿ ವಶಪಡಿಸಿಕೊಂಡಿದ್ದಾರೆ. ಆರೋಪಿಯು ಈ ಮೋಸದ ಹಣದಿಂದ ಚಿನ್ನವನ್ನು ಖರೀದಿಮಾಡಿದ್ದು, ಆರೋಪಿ ಬಳಿಯಿಂದ 4 ಚಿನ್ನದ ಸರಗಳನ್ನು, 3 ಚಿನ್ನದ ಉಂಗುರಗಳನ್ನು ಒಟ್ಟು 75 ಗಾಂ ತೂಕದ ಚಿನ್ನದ ವಡವೆಗಳನ್ನು ಹಾಗೂ ಒಂದು ಮೊಬೈಲ್ ಫೋನ್‌ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರ ಮಾಹಿತಿಗಾಗಿ
1) ಎ.ಟಿ.ಎಂ ಸೆಂಟರ್‌ನಲ್ಲಿ ಹಣ ಪಡೆಯಲು ತೊಂದರೆ ಉಂಟಾದಾಗ ಸ್ಥಳದಲ್ಲಿ ಇರುವಂತಹ ಅಪರಿಚಿತ ವ್ಯಕ್ತಿಗಳು ನಿಮಗೆ ಸಹಾಯ ಮಾಡುವ ನೆಪದಲ್ಲಿ ನಿಮ್ಮ ಪಿನ್ ಕದ್ದು ನಿಮಗೆ ತಿಳಿಯದಂತೆ ಡೆಬಿಟ್ ಕಾರ್ಡ್‌ಗಳನ್ನು ಬದಲಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಪರಿಚಿತ ವ್ಯಕ್ತಿಗಳನ್ನು ಸಹಾಯಕ್ಕೆ ಕರೆಯಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.
 2) ಎ.ಟಿ.ಎಂ. ಮೆಷಿನ್‌ನಲ್ಲಿ ಏನ್‌ ದಾಖಲಿಸುವಾಗ ಅಪರಿಚಿತ ವ್ಯಕ್ತಿಗಳು ನಿಮ್ಮ ಹಿಂದೆ. ಅಕ್ಕ-ಪಕ್ಕ ನಿಂತು ಪಿನ್ ನಂಬರ್ ಅನ್ನು ನೋಡಿ ನೀವು ಎ.ಟಿ.ಎಂ ಕಾರ್ಡ್‌ವನ್ನು ಮೆಷಿನ್‌ನಿಂದ ಪಡೆಯುವ ವೇಳೆ ನಿಮಗೆ ಕೆಳಗೆ ನಿಮ್ಮ ಹಣ ಬಿದ್ದಿದೆ ಎಂದು ಹೇಳಿ ಅಥವಾ ನಿಮಗೆ ಡಿಕ್ಕಿ ಹೊಡೆದು ನಿಮ್ಮ ಗಮನವನ್ನು ಬೇರೆಡೆ ಸೇಳೆದು ನಿಮ್ಮ ಕಾರ್ಡ್‌ ಅನ್ನು ಬದಲಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಕ್ಕ-ಪಕ್ಕ ಮತ್ತು ನಿಮ್ಮ ಹಿಂದೆ ನಿಂತಿರುವ ಅಪರಿಚಿತ ವ್ಯಕ್ತಿಗಳ ಬಗ್ಗೆ ಗಮನವಿರಲಿ ಎಂದು ಎಚ್ಚರಿಕೆ ನೀಡಿದರು.
 3) ಎ.ಟಿ.ಎಂ ಮೆಷಿನ್‌ನಲ್ಲಿ ಅಥವಾ ಸೆಂಟರ್‌ನಲ್ಲಿ ನಿಮ್ಮ ಪಿನ್ ಕದಿಯಲು ಕ್ಯಾಮಾರಗಳನ್ನು ಅಳವಡಿಸಿರುವ ಸಾಧ್ಯತೆಗಳು ಇರುವುದರಿಂದ ಪಿನ್‌ ದಾಖಲಿಸುವಾಗ ನಿಮ್ಮ ಒಂದು ಅಂಗೈಯನ್ನು ಮುಚ್ಚಿಕೊಂಡು ಪಿನ್ ಅನ್ನು ದಾಖಲಿಸುವುದು,
4) ಎ.ಟಿ.ಎಂ ಸೆಂಟರ್‌ಗಳ ಬಳಿ ನಿಮಗೆ ಡಿಕ್ಕಿ ಹೊಡೆದು ಅಥವಾ ಜನಸಂದಣಿಯಂತೆ ಕೃತಕವಾಗಿ ಸೃಷ್ಟಿಸಿ ನೂಕುನುಗ್ಗಲನ್ನು ಉಂಟುಮಾಡಿ ನಿಮ್ಮ ಎ.ಟಿ.ಎಂ ಕಾರ್ಡ್‌ ಅನ್ನು ಬಿಳಿಸಿ ನಿಮಗೆ ಸಹಾಯಮಾಡುವ ರೀತಿಯಲ್ಲಿ ಎ.ಟಿ.ಎಂ ಕಾರ್ಡ್‌ಗಳನ್ನು ಬದಲಿಸಿ ಮೋಸ ಮಾಡುವ ಸಾಧ್ಯತೆ ಇರುವುದರಿಂದ ನಿಮ್ಮ ಕಾರ್ಡ್‌ಗಳನ್ನು ಭದ್ರವಾಗಿ ಇಟ್ಟುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು : 
ಪ್ರಕರಣದ ಪತ್ತೆ ಕಾರ್ಯಕ್ಕೆ  ಐ.ಪಿ.ಎಸ್ ಡಾ. ಅನೂಪ್ ಶೆಟ್ಟಿ, ಉಪ ಪೊಲೀಸ್ ಆಯುಕ್ತರು, ಈಶಾನ್ಯ ವಿಭಾಗ, ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ ಈಶಾನ್ಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯ ಅಧಿಕಾರಿ/ಸಿಬ್ಬಂದಿಗಳಾದ ಸಂತೋಷ ರಾಮ್.ಆರ್ ಪೊಲೀಸ್ ಇನ್ಸ್ ಪೆಕ್ಟರ್, ಪಿ.ಎಸ್.ಐ ರಮನಗೌಡ, ಎ.ಎಸ್‌.ಐ ರಮೇಶ್.ಆರ್ ಹೆಚ್.ಸಿ. ಸಂತೋಷ್ ಸಿ, ಓಬಳೇಶ್, ಪಿ.ಸಿ.ಬಸವನಗೌಡ, ಮತ್ತು ಪಿ.ಸಿ. ಅಮಿತ್‌ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

Recent Articles

spot_img

Related Stories

Share via
Copy link
Powered by Social Snap