ಕರ್ನಾಟಕದಲ್ಲಿ ಪ್ರತ್ಯಕ್ಷ್ಯವಾಯ್ತು ಕೇರಳದ ವೈದ್ಯಕೀಯ ತ್ಯಾಜ್ಯ

ಚಾಮರಾಜನಗರ

 ಕೇರಳದಿಂದ ಗುಂಡ್ಲುಪೇಟೆಗೆ ಅಕ್ರಮವಾಗಿ ಆಸ್ಪತ್ರೆ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ತಂದಿದ್ದ ಲಾರಿಯನ್ನು ಜನರು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಗುಂಡ್ಲುಪೇಟೆ ಪಟ್ಟಣದ ಮಾಡ್ರಹಳ್ಳಿ ರಸ್ತೆಯಲ್ಲಿ ಕೇರಳ ನೋಂದಣಿಯ ಲಾರಿಯೊಂದು ನಿಂತಿದ್ದ ವೇಳೆ ದುರ್ವಾಸನೆ ಬರುತ್ತಿದ್ದನ್ನು ಗಮನಿಸಿದ ಸ್ಥಳೀಯರು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಲಾರಿಯಲ್ಲಿ ಆಸ್ಪತ್ರೆ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯದ ಮೂಟೆಗಳು ಇರುವುದು ಕಂಡು ಬಂದಿದ್ದು ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ.

    ಕರಾವಳಿಯ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣಕ್ಕೆ 840 ಕೋಟಿ ರೂ. ಯೋಜನೆ: ಈಶ್ವರ ಖಂಡ್ರೆ ತ್ಯಾಜ್ಯ ವಿಲೇವಾರಿಗೆ ಕೇರಳದಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಕದ್ದುಮುಚ್ಚಿ ಲಾರಿಗಳಲ್ಲಿ ತುಂಬಿಕೊಂಡು ಬಂದು ಗಡಿ ದಾಟಿಸಲಾಗುತ್ತದೆ. ಗುಂಡ್ಲುಪೇಟೆ ತಾಲೂಕನ್ನು ಪ್ರವೇಶಿಸಿದ ನಂತರ ಸಂಚಾರ ಕಡಿಮೆಯಿರುವ ಪ್ರದೇಶ ಅಥವಾ ಕೇರಳ ರಾಜ್ಯದವರು ಮಾಲೀಕರಾಗಿರುವ ತಾಲೂಕಿನ ನಾನಾ ಕಡೆಗಳ ತೋಟಗಳಲ್ಲಿ ತೋಡುಬಾವಿಗಳಲ್ಲಿ ಅಪಾಯಕಾರಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತದೆ ಎಂಬ ಗಂಭೀರ ಆರೋಪ ಆಗಾಗ ಕೇಳಿ ಬರುವುದಕ್ಕೆ ಕಸ ತುಂಬಿದ ಲಾರಿಗಳು ಕಾಣಿಸಿಕೊಳ್ಳುವುದು ಪುಷ್ಠಿ ನೀಡಿವೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap