ನಮ್ಮ ಕಾರ್ಗೋ ಸ್ಥಿತಿ ಈಗ ಹೇಗಿದೆ ಗೊತ್ತಾ….?

ಬೆಂಗಳೂರು:

    ಪಾರ್ಸಲ್ ಮತ್ತು ಕೋರಿಯರ್ ಸರ್ವಿಸ್ ಕ್ಷೇತ್ರಕ್ಕೂ ಲಗ್ಗೆಯಿಟ್ಟಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ನಿರೀಕ್ಷಿತ ಪ್ರಮಾಣದ ಆದಾಯ ಗಳಿಸುವಲ್ಲಿ ವಿಫಲವಾಗಿದೆ.

    2025 ರ ವೇಳೆಗೆ 100 ಕೋಟಿ ವಾರ್ಷಿಕ ಆದಾಯ ಗಳಿಸುವುದು ನಿಗಮದ ಗುರಿಯಾಗಿತ್ತು. ಸೇವೆ ಆರಂಭವಾದಾಗ 100 ಲಾರಿಗಳ ಸೇರಿಸುವುದಾಗಿ ತಿಳಿಸಿತ್ತು. ಒಂದು ವರ್ಷದಲ್ಲಿ 500 ಕ್ಕೂ ಲಾರಿಗಳ ಸೇರಿಸಲು ಚಿಂತನೆ ನಡೆಸಿತ್ತು. ಆದಾಗ್ಯೂ, ಖಾಸಗಿ ಕಂಪನಿಗಳ ಕಠಿಣ ಪೈಪೋಟಿಯಿಂದಾಗಿ ಗುರಿ ಸಾಧಿಸುವಲ್ಲಿ ನಿಗಮವು ಹೆಣಗಾಡುವಂತಾಗಿದೆ.

     ಕೆಎಸ್‌ಆರ್‌ಟಿಸಿಯ ಉನ್ನತಾಧಿಕಾರಿಯೊಬ್ಬರು ಮಾತನಾಡಿ, ಕಾರ್ಪೊರೇಷನ್ ಬಸ್‌ಗಳನ್ನು ಬಳಸಿಕೊಂಡು 2021 ರಲ್ಲಿ ನಮ್ಮ ಕಾರ್ಗೋ ಸೇವೆಗಳನ್ನು ಪ್ರಾರಂಭಿಸಿದ್ದೆವು. ಆರಂಭದಲ್ಲಿ ಉತ್ತಮ ಬೆಳವಣಿಗೆಗಳು ಕಂಡುಬಂದಿದ್ದವು. ಈವೇಳೆ 10 ಕೋಟಿ ಆದಾಯ ಗಳಿಸಿದ್ದೆವು. ಬಳಿಕ ಆಂಧ್ರಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯು ಯಶಸ್ವಿಯಾಗಿ ನಡೆಸುತ್ತಿರುವ ಕಾರ್ಗೋ ಸೇವೆಗಳನ್ನು ಅಧ್ಯಯನ ನಡೆಸಿದ್ದೆವು, ಈ ಸಂಸ್ಥೆಯು 150 ಕೋಟಿ ರೂ.ಗಿಂತ ಹೆಚ್ಚು ಆದಾಯವನ್ನು ಗಳಿಸುತ್ತಿದೆ. ಹೀಗಾಗಿ ನಾವೂ ಈ ಸೇವೆ ಆರಂಭಿಸಲು ಮುಂದಾಗಿದ್ದೆವು. ಆರಂಭದಲ್ಲಿ 20 ಲಾರಿಗಳಿಗೆ ಜಿಪಿಎಸ್ ಅಳವಡಿಸಿ, ಸೇವೆ ಆರಂಭಿಸಿದ್ದೆವು.

    ಆದರೆ, ಯೋಜನೆ ನಿರೀಕ್ಷೆಯಂತೆ ಯಶಸ್ವಿಯಾಗಲಿಲ್ಲ. 20 ಲಾರಿಗಳಲ್ಲಿ ಪೈಕಿ 14 ಲಾರಿಗಳು ಬಿಡಿ ಭಾಗಗಳು ಮತ್ತು ಇತರ ಸರಕುಗಳನ್ನು ಸಾಗಿಸಲು ನಿಗಮವು ಬಳಸುತ್ತಿದೆ. ಈ ಹಿಂದೆ ಈ ಸರಕುಗಳನ್ನು ಸಾಗಿಸಲು ನಾವು ಹಳೆಯ ಬಸ್‌ಗಳನ್ನು ಬಳಸುತ್ತಿದ್ದೆವು. ಕಾರ್ಗೋ ವಲಯವು ಹೆಚ್ಚಿನ ಸ್ಪರ್ಧಾತ್ಮಕತೆ ಹೊಂದಿದೆ. ಆದರೆ, ಖಾಸಗಿ ಸಂಸ್ಥೆಯವರು ರಾತ್ರಿಯಿಡೀ ಕಾರ್ಯನಿರ್ವಹಿಸುತ್ತಿದ್ದು, ಪೈಪೋಟಿಯಿದೆ ಎಂದು ಹೇಳಿದ್ದಾರೆ.

   ಈ ವಿಫಲತೆಗೆ ಒಂದು ಕಾರಣವೆಂದರೆ ನಮ್ಮಲ್ಲಿ ಸರಕು ಲೋಡರ್‌ಗಳು ಮತ್ತು ಅನ್‌ಲೋಡರ್‌ಗಳಿಲ್ಲ. ಅಲ್ಲದೆ, ನಾವು ವಿವಿಧ ಕ್ಲಸ್ಟರ್‌ಗಳನ್ನು ಮ್ಯಾಪ್ ಮಾಡಬೇಕು. ಹಣ್ಣುಗಳು, ಖಾಸಗಿ ಸಂಸ್ಥೆ ಒದಗಿಸುವ ಸೇವೆಗಳನ್ನು ನಾವೂ ಒದಗಿಸಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಬೇಕು ಎಂದು ತಿಳಿಸಿದರು.

   ಸೇವೆಯನ್ನು ಸುಧಾರಿಸಲು ನಿಗಮವು ಎಲ್ಲಾ ರೀತಿಯ ಆಯ್ಕೆಗಳನ್ನು ಅನ್ವೇಷಿಸುತ್ತಿದೆ. ಮಾತುಕತೆ ನಡೆಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್ ಹೇಳಿದ್ದಾರೆ.ಮುಂದಿನ ತಿಂಗಳುಗಳಲ್ಲಿ ನಿಗಮದ ಕಾರ್ಗೋ ಸೇವೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap