6000 ಕಾರುಗಳನ್ನು ಹಿಂಪಡೆದ ವೋಲ್ವೋ…!!

0
37

ಬೀಜಿಂಗ್

     ಸುರಕ್ಷತಾ ಕಳವಳಕ್ಕೆ ಸಂಬಂಧಿಸಿ ವೋಲ್ವೋ ಆಟೋಮೊಬೈಲ್ ಸೇಲ್ಸ್ (ಶಾಂಘೈ) ಕಂಪೆನಿ, 6,223 ಕಾರುಗಳನ್ನು ವಾಪಸ್‍ ಪಡೆದಿದೆ ಎಂದು ಚೀನಾದ ಗುಣಮಟ್ಟ ನಿಗಾ ಸಂಸ್ಥೆಯೊಂದು ಹೇಳಿದೆ.

     2014 ರ ಆಗಸ್ಟ್ 27ರಿಂದ  2016 ರ  ಏಪ್ರಿಲ್ 24 ನಡುವೆ ಉತ್ಪಾದನೆಗೊಂಡು ಆಮದು ಮಾಡಲಾದ ಎಕ್ಸ್ ಸಿ 90 ಕಾರುಗಳನ್ನು ವಾಪಸ್ ಪಡೆಯಲಾಗಿದೆ ಎಂದು ಮಾರುಕಟ್ಟೆ ನಿಯಂತ್ರಣ ಆಡಳಿತ  ತಿಳಿಸಿದೆ.

     ಎಂಜಿನ್ ಕೂಲಿಂಗ್ ವ್ಯವಸ್ಥೆಯಲ್ಲಿನ ದೋಷದಿಂದ ಕೂಲೆಂಟ್‍ ಸೋರಿಕೆಯಾಗುವ ಸಾಧ್ಯತೆ ಇದ್ದು, ಇದರಿಂದ ಎಂಜಿನ್‍ ಗೆ  ಬೆಂಕಿ ಹೊತ್ತಿಕೊಳ್ಳುವ ಅಪಾಯವಿದೆ ಎಂದು ಪ್ರಕಟಣೆ ತಿಳಿಸಿದೆ.ಕಂಪನಿಯು ದೋಷಪೂರಿತ ಭಾಗಗಳ ಬದಲಾಗಿ ಗುಣಮಟ್ಟದ ಭಾಗಗಳನ್ನು ಉಚಿತವಾಗಿ ಬದಲಿಸಿಕೊಡಲಿದೆ.ವಾಪಸ್‍ ಪಡೆಯುವಿಕೆ ಜೂನ್ 19 ರಿಂದ ಪ್ರಾರಂಭವಾಗುತ್ತದೆ.

      ಕಳೆದ ತಿಂಗಳು ಚೀನಾದಲ್ಲೇ ಇದೇ ರೀತಿ ಜರ್ಮನಿ ಮೂಲದ ವೋಲ್ಸ್ ವಾಗನ್ ಕಂಪೆನಿ, ಡೋರ್ ಗಳಲ್ಲಿನ ದೋಷದಿಂದ 33 ಸಾವಿರಕ್ಕೂ ಹೆಚ್ಚು  ಕಾರ್ ಗಳನ್ನು ವಾಪಸ್‍ ಪಡೆದಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

LEAVE A REPLY

Please enter your comment!
Please enter your name here