ಕರ್ನಾಟಕದಲ್ಲಿ ಆರ್ಥಿಕ ದಬ್ಬಾಳಿಕೆ : ಡಾ. ರಾಧಾಮೋಹನ್ ದಾಸ್ ಅಗ್ರವಾಲ್

ಬೆಂಗಳೂರು: ಕರ್ನಾಟಕದಲ್ಲಿ ಡಿಕೆ, ರಾಮಲಿಂಗಾರೆಡ್ಡಿ, ಹಾಗೂ ಕೃಷ್ಣಬೈರೇಗೌಡ ಅವರು ಆರ್ಥಿಕ ದಬ್ಬಾಳಿಕೆ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಕೇಂದ್ರವಾಗಿ ಬೆಂಗಳೂರು ಹೊರಹೊಮ್ಮಿದೆ. ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ, ಯಾವುದೇ ಮೂಲಭೂತ ಸೌಕರ್ಯ ತಲುಪಿಸುವ ಯೋಜನೆಯಿಲ್ಲ. ಇದು ಬ್ರಾ÷್ಯಂಡ್ ಅಲ್ಲ ಬ್ಯಾಡ್ ಬೆಂಗಳೂರು ಎಂದು ಕರ್ನಾಟಕ ರಾಜ್ಯ ಉಸ್ತುವಾರಿ ಮತ್ತು ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಡಾ. ರಾಧಾಮೋಹನ್ ದಾಸ್ ಅಗ್ರವಾಲ್ ಅವರು ಟೀಕಿಸಿದರು.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಕ್ತಿ ಕೇಂದ್ರ ಪ್ರಮುಖರ ಸಭೆಯು ಜಕ್ಕೂರು ಏರೊಡ್ರೋಮ್ ಬಳಿ ಇಂದು ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 2028ಕ್ಕೆ ಬ್ಯಾಟರಾಯನುಪುರ ಕ್ಷೇತ್ರ ಭಾರತೀಯ ಜನತಾ ಪಕ್ಷ ಗೆಲ್ಲಬೇಕು. ನಮ್ಮ ಶಕ್ತಿ ಕೇಂದ್ರದ ಎಲ್ಲಾ ಮುಖಂಡರು ಹೆಚ್ಚಿನ ಶ್ರಮವಹಿಸಿ ಸಂಘಟನೆ ಕೆಲಸವನ್ನು ಮಾಡಿ ಮುಂದಿನ 2028ರ ಚುನಾವಣೆಯಲ್ಲಿ ಬ್ಯಾಟರಾಯನಪುರ ಗೆಲ್ಲುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸಹ-ಉಸ್ತುವಾರಿ ಸುಧಾಕರ ರೆಡ್ಡಿ ಅವರು ಮಾತನಾಡಿ, ಕರ್ನಾಟಕದಲ್ಲಿ ಭ್ರಷ್ಟಾಚಾರ ನಡೆಸುತ್ತಿರುವ ಸರ್ಕಾರ ಬಂದಿದೆ. ಮುಂದಿನ ದಿನದಲ್ಲಿ ಜನ ತಕ್ಕ ಪಾಠ ಕಲಿಸುವ ಕೆಲಸ ಮಾಡುತ್ತಾರೆ. ದೇಶದಲ್ಲಿ ನರೇಂದ್ರ ಮೋದಿ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ 2028ಕ್ಕೆ ಬಿಜೆಪಿ ಸರ್ಕಾರ ಬರುತ್ತದೆ. ಅದರಲ್ಲಿ ಬ್ಯಾಟರಾಯನಪುರ ಗೆಲ್ಲಬೇಕು ಎಂದು ನುಡಿದರು.
ರಾಜ್ಯ ಕಾರ್ಯದರ್ಶಿ ಹೆಚ್.ಸಿ.ತಮ್ಮೇಶ್ ಗೌಡ ಅವರು ಮಾತನಾಡಿ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರು ಮನೆ ಮನೆ ಸಂಪರ್ಕ ಮಾಡಿ ಸಂಘಟನೆಯನ್ನು ಬಲಪಡಿಸುವ ಕೆಲಸ ನಡೆಯುತ್ತಿದೆ. ಜೊತೆಗೆ ಜಿಬಿಎ ಚುನಾವಣೆ ಹಾಗೂ ಯಾವುದೇ ಸಂದರ್ಭದಲ್ಲಿ ವಿಧಾನಸಬಾ ಚುನಾವಣೆ ಬಂದರು ಕೂಡ ಗೆಲ್ಲುವ ಸಾಮಥ್ರ÷್ಯ ಬಿಜೆಪಿ ಸಂಘಟನೆಗೆ ಇದೆ. ಅಭಿವ್ರದ್ಧಿ ಮಾಡದ ಶಾಸಕರ ವಿರುದ್ಧ ದೊಡ್ಡ ಆಂದೋಲನ ಪ್ರಾರಂಭ ಆಗಲಿದ್ದು ಬ್ಯಾಟರಾಯನಪುರ ಜನಜಾಗೃತಿ ಅಭಿಯಾನವನ್ನು ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ, ಬಿಎಲ್‌ಎ-1 ಮಧುಸೂದನ್, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಅವರು ಭಾಗವಹಿಸಿದ್ದರು.

 

Recent Articles

spot_img

Related Stories

Share via
Copy link