
ಬೆಂಗಳೂರು: ಇಷ್ಟು ದಿನಗಳ ಕಾಲ ಬಿಜೆಪಿಯು ಮತಗಳ್ಳತನ ಮಾಡುತ್ತಿತ್ತು. ಇದೀಗ ಸ್ಥಾನ ಕಳ್ಳತನ (ಸೀಟ್ ಚೋರಿ) ಮಾಡಲು ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಬಿ.ಕೆ.ಹರಿಪ್ರಸಾದ್ ಅವರು ಕಾಂಗ್ರೆಸ್ ಕಚೇರಿಗೆ ಆಗಮಿಸಿ ಕಾರ್ಯಕರ್ತರನ್ನು ಭೇಟಿ ಮಾಡಿದರು. ಬಳಿಕ ಪತ್ರಿಕಾಗೋಷ್ಠಿ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹರಿಪ್ರಸಾದ್, ಮಧ್ಯಪ್ರದೇಶ ಕಾಂಗ್ರೆಸ್??ನಿAದ ರಾಜ್ಯಸಭಾ ಆಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕöÈತಗೊಂಡಿದೆ. ಇಷ್ಟು ದಿನಗಳ ಕಾಲ ಮತಗಳ್ಳತನ ಮಾಡುತಿದ್ದ ಬಿಜೆಪಿಯು ಇದೀಗ ಸೀಟ್ ಚೋರ್ ಮಾಡುವ ಮೂಲಕ ಕೀಳುಮಟ್ಟಕ್ಕೆ ಇಳಿದಿದೆ. ಹರಿಯಾಣ ಕಾಂಗ್ರೆಸ್ ಉಸ್ತುವಾರಿ ಆಯ್ಕೆ ಸಂದರ್ಭದಲ್ಲಿಯೂ ಬಿಜೆಪಿಯು ನಮಗೆ ದೊರೆಯಬೇಕಿದ್ದ ಸ್ಥಾನವನ್ನು ಬಿಜೆಪಿಯು ಕಸಿದುಕೊಂಡಿತ್ತು ಎಂದು ಆರೋಪಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಜೆ.ಸಿ.ಚಂದ್ರಶೇಖರ್ ಮಾತನಾಡಿ, ಹಿರಿಯ ಹಾಗೂ ರಾಜಕೀಯ ಮುತ್ಸದಿಯಾಗಿರುವ ಬಿ.ಕೆ.ಹರಿಪ್ರಸಾದ್ ಅವರನ್ನು ಕಾಂಗ್ರೆಸ್?? ಪಕ್ಷದ ರಾಜ್ಯ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ. ಇದೇ ತಿಂಗಳು 21ರಂದು ಅರಮನೆ ಮೈದಾನದಲ್ಲಿ ಪದಗ್ರಹಣ ಮಾಡಲಿದ್ದು, ಅಧಿಕೃತವಾಗಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಪಕ್ಷದ ಬಾವುಟ ನೀಡಿ ಜವಾಬ್ದಾರಿಯನ್ನು ಹಸ್ತಾಂತರ ಮಾಡಲಿದ್ದಾರೆ. ಶಿವಕುಮಾರ್ ಹಾಗೂ ಹರಿಪ್ರಸಾದ್ ಅವರು ಅನುಭವಿ ಜೋಡಿಯಾಗಿದ್ದು, ಇವರ ಹಿಂದೆ ಸಿದ್ದರಾಮಯ್ಯ ಅವರ ಮಾರ್ಗದರ್ಶನ ಇರಲಿದೆ. 2028ರ ವಿಧಾನಸಭಾ ಚುನಾವಣೆಯನ್ನ ಮೂವರ ನೇತೃತ್ವದಲ್ಲಿ ಎದುರಿಸಿ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೂನ್ 18ರಂದು 24 ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆ ನಡೆಯಲಿದೆ. 10 ರಾಜ್ಯಗಳಿಂದ ಹಲವು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಜ್ಯದಿಂದ ನಾಲ್ಕು ರಾಜ್ಯಸಭೆ ಸ್ಥಾನಗಳು ತೆರವಾಗಲಿವೆ. ಆ ಪೈಕಿ ಕಾಂಗ್ರೆಸ್ ಸಂಖ್ಯಾಬಲದAತೆ 3 ಸ್ಥಾನ ಲಭಿಸಲಿದ್ದು, ಬಿಜೆಪಿಗೆ ಒಂದು ಸ್ಥಾನ ಸಿಗಲಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ನಿAದ ರಾಜ್ಯಸಭೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮನ್ಸೂರ್ ಅಲಿ ಖಾನ್ ಹಾಗೂ ಪವನ್ ಖೇರಾ ಕಣಕ್ಕಿಳಿದಿದ್ದಾರೆ. ಹಾಗೆಯೇ, ಬಿಜೆಪಿಯಿಂದ ಪ್ರೊ ಎಂ.ನಾಗರಾಜ್ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಲಾಗಿದೆ.
ಹಾಗೆಯೇ, ಮೀನಾಕ್ಷಿ ನಟರಾಜನ್ ಅವರನ್ನು ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆಗೆ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಆದರೆ, ಅವರ ನಾಮಪತ್ರ ತಿರಸ್ಕöÈತಗೊಂಡಿದೆ. ಇದರಿಂದ ಬಿಜೆಪಿ ಅಭ್ಯರ್ಥಿಗೆ ಗೆಲುವು ಸುಲಭವಾಗಿದೆ.
ಮೀನಾಕ್ಷಿ ನಟರಾಜನ್ ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ಪ್ರಕರಣವೊಂದರ ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲ ಎಂದು ಆರೋಪಿಸಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕೊಠಾರಿ ಆಕ್ಷೇಪಣೆ ಸಲ್ಲಿಸಿದ್ದರು. ತೆಲಂಗಾಣದ ಹೈದರಾಬಾದ್ನ ನ್ಯಾಯಾಲಯದಲ್ಲಿ ಮೀನಾಕ್ಷಿ ವಿರುದ್ಧ ಪ್ರಕರಣ ಬಾಕಿ ಇದೆ. ತಮ್ಮ ನಾಮಪತ್ರ ದಾಖಲೆಗಳಲ್ಲಿ ಅದರ ವಿವರಗಳನ್ನು ನೀಡಿಲ್ಲ ಎಂದು ಆರೋಪಿಸಲಾಗಿತ್ತು.
ಈ ಆರೋಪಗಳನ್ನು ಕಾಂಗ್ರೆಸ್ ತಳ್ಳಿಹಾಕಿದ್ದು, ನಾಮನಿರ್ದೇಶನದ ಬಗ್ಗೆ ಗೊಂದಲ ಹರಡಲಾಗಿದೆ ಎಂದು ಹೇಳಿದೆ. ಮೀನಾಕ್ಷಿ ನಟರಾಜನ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ. ಅವರಿಗೆ ಕೋರ್ಟ್ನಿಂದ ಕೇವಲ ನೋಟಿಸ್ ನೀಡಲಾಗಿದೆ. ಮೀನಾಕ್ಷಿ ಪರ ವಕೀಲರು ಈ ನೋಟಿಸ್ಗೆ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಎಫ್ಐಆರ್ ದಾಖಲಿಸಲಾಗಿಲ್ಲ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ವಿವೇಕ್ ತಂಖಾ ಹೇಳಿದ್ದಾರೆ.








