ಕರ್ನಾಟಕವನ್ನು ಕಾಪಿ ಮಾಡಲು ಮುಂದಾದ ಕಮಲ್‌‌ ನಾಥ್

ಭೋಪಾಲ್ :‌

      ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ, ಅಲ್ಲಿನ ಕಾಂಗ್ರೆಸ್‌  ಪಕ್ಷ ಕರ್ನಾಟಕದ ಕಾಂಗ್ರೆಸ್‌ನ ಮಾದರಿಯನ್ನು ತುಳಿದಿದೆ.ವಿದ್ಯುತ್‌ ಉಚಿತ, ಮಹಿಳೆಯರಿಗೆ ಮಾಸಾಶನ ಮುಂತಾದ ಭರವಸೆಗಳನ್ನು  ಕರ್ನಾಟಕದಿಂದಲೇ ಅನಾಮತ್ತಾಗಿ ಎತ್ತಿಕೊಂಡಿದೆ.

      ಕಾಂಗ್ರೆಸ್‌ ಮರಳಿ ಅಧಿಕಾರಕ್ಕೆ ಬಂದರೆ ಪ್ರತೀ ಮನೆಗೂ 100 ಯುನಿಟ್‌ ವಿದ್ಯುತ್‌ ಉಚಿತ. 200 ಯುನಿಟ್‌ ವರೆಗೆ ಅರ್ಧ ದರದಲ್ಲಿ ಕರೆಂಟ್.‌ ಬಡ ಮಹಿಳೆಯರಿಗೆ ಪ್ರತಿ ತಿಂಗಳೂ 1,500 ರೂ. ಹಣಕಾಸು ನೆರವು. ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿಗೆ. ಇವು ಮಧ್ಯಪ್ರದೇಶ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ ನಾಥ್‌ ಅವರು ಮತದಾರರಿಗೆ ನೀಡಿರುವ ಆಶ್ವಾಸನೆಗಳು.

     ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಮೂರು ಭರವಸೆಗಳನ್ನು ನೀಡಿ ಮತದಾರರ ಗಮನ ಸೆಳೆದು ಅಧಿಕಾರಕ್ಕೆ ಬಂದಿದೆ. ಪ್ರತಿ ಕುಟುಂಬದ ಯಜಮಾನತಿಗೂ ಮಾಸಿಕ 2000 ರೂ., 200 ಯುನಿಟ್‌ನಷ್ಟು ವಿದ್ಯುತ್‌ ಉಚಿತ, ಮಹಿಳೆಯರಿಗೆ ಸರ್ಕಾರಿ ಸಾರಿಗೆಯಲ್ಲಿ ಉಚಿತ ಪ್ರಯಾಣ- ಇವು ಜನಪ್ರಿಯತೆ ಗಳಿಸಿವೆ. ಇದರಲ್ಲಿ ಎರಡು ಅಂಶಗಳನ್ನು ಮಧ್ಯಪ್ರದೇಶ ಕಾಂಗ್ರೆಸ್‌ ಅನುಕರಿಸಿದೆ. ಈ ವರ್ಷದ ಅಂತ್ಯದಲ್ಲಿ ಆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಾಗಲೇ ಇಲ್ಲಿ ವಾರ್ಷಿಕ 2 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ ಮನೆಗಳು ಮಾಸಿಕ 1000 ರೂ. ನೆರವು ಪಡೆಯುತ್ತಿವೆ.

    230 ವಿಧಾನಸಭೆ ಸದಸ್ಯ ಬಲದ ಮಧ್ಯಪ್ರದೇಶದಲ್ಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ 114 ಸ್ಥಾನ ಗಳಿಸಿ ಗೆದ್ದು ಬಂದಿತ್ತು. ಕಮಲ್‌ ನಾಥ್‌ ಮುಖ್ಯಮಂತ್ರಿಯಾಗಿದ್ದರು. ಆದರೆ 2020ರಲ್ಲಿ ಜ್ಯೋತಿರಾದಿತ್ಯ ಸಿಂಧ್ಯಾ ನಾಯಕತ್ವದ ಬಣ ಬಂಡಾಯವೆದ್ದುದರಿಂದ ಕಾಂಗ್ರೆಸ್‌ ವಿಶ್ವಾಸಮತ ಕಳೆದುಕೊಂಡು, ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap