ಕೇಂದ್ರ ಸರ್ಕಾರ ಅಕ್ಕಿಯ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ : ಸಿಎಂ

ಬೆಂಗಳೂರು:

      ಅನ್ನಭಾಗ್ಯ ಯೋಜನೆ ಜಾರಿಗೆ 2.38 ಲಕ್ಷ ಟನ್ ಅಕ್ಕಿ ಕೊರತೆ ಎದುರಾಗಿದೆ. ನೆರೆ ರಾಜ್ಯಗಳಿಂದಲೂ ಅಕ್ಕಿ ಪಡೆಯಲು ಸಾಧ್ಯವಾಗುತ್ತಿಲ್ಲ. ಛತ್ತೀಸ್‌ಗಢ ರಾಜ್ಯದಲ್ಲಿ ದಾಸ್ತಾನು ಇದೆ. ಆದರೆ, ಅದಕ್ಕೆ ಸಾಗಾಣೆ ವೆಚ್ಚ ಹೆಚ್ಚಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಛತ್ತೀಸ್‌ಗಢದಿಂದ ಅಕ್ಕಿ ನೀಡುವಂತೆ ಮಾಡಲಾಗಿದೆ. ಆದರೆ, ತೆಲಂಗಾಣ ಮನವಿಯನ್ನು ತಿರಸ್ಕರಿಸಿದೆ, ಆಂಧ್ರಸರ್ಕಾರ ಕೂಡ ಮುಂದೆ ಬಂದಿಲ್ಲ. ಛತ್ತೀಸ್‌ಗಢ ಸರ್ಕಾರವು ಸುಮಾರು 1.5 ಲಕ್ಷ ಟನ್‌ಗಳಷ್ಟು ಅಕ್ಕಿಯನ್ನು ಪೂರೈಸುವುದಾಗಿ ಭರವಸೆ ನೀಡಿದೆ, ಆದರೆ ಸಾಗಣೆಯ ವೆಚ್ಚವು ಹೆಚ್ಚಾಗುತ್ತದೆ ಎಂದು ಹೇಳಿದರು.
    ರೈತರಿಂದೇಕೆ ಅಕ್ಕಿ ಖರೀದಿ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಯಚೂರಿನಲ್ಲಿ ಮಾತ್ರ ಹೆಚ್ಚಿನ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಆದರೆ, ಅಲ್ಲಿ ಅಕ್ಕಿ ದುಬಾರಿಯಾಗಿದೆ, ಕೆಜಿಗೆ 55 ರೂ.ಗೆ ನೀಡಬೇಕಿದೆ. ಆದರೆ ಭಾರತೀಯ ಆಹಾರ ನಿಗಮದ ಅಕ್ಕಿ ಕೆಜಿಗೆ 34 ರೂ ಆಗಿದೆ ಎಂದು ತಿಳಿಸಿದರು.
     ವಿದ್ಯುತ್ ದರ ಏರಿಕೆ ವಿರೋಧಿಸಿ ಕೈಗಾರಿಕೆ ಸಂಘಗಳು ಪ್ರತಿಭಟನೆ ನಡೆಸಲು ಮುಂದಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಧಿಕಾರಿಗಳು ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap