ಗ್ರಾ.ಪಂ.ಅಧ್ಯಕ್ಷರಾಗಿ ದೇವರಾಜು ಆಯ್ಕೆ

0
20

ತುರುವೇಕೆರೆ

    ತಾಲ್ಲೂಕಿನ ಕೊಂಡಜ್ಜಿ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಡಿ.ಜಿ.ದೇವರಾಜು ಅವಿರೋಧವಾಗಿ ಆಯ್ಕೆಯಾದರು. ಹಿಂದಿನ ಅಧ್ಯಕ್ಷೆ ಕುಸುಮಾ ಜೀವನ್‍ಗೌಡ ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು.

     16 ಸದಸ್ಯರಿರುವ ಕೊಂಡಜ್ಜಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದೊಡ್ಡಗೊರಾಘಟ್ಟ ಕ್ಷೇತ್ರದ ಸದಸ್ಯ ಡಿ.ಜಿ.ದೇವರಾಜು ಮಾತ್ರ ನಾಮಪತ್ರ ಸಲ್ಲಿಸಿದ್ದರು. ತಹಸೀಲ್ದಾರ್ ನಾಗರಾಜು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

      ನೂತನ ಅಧ್ಯಕ್ಷ ಡಿ.ಜಿ.ದೇವರಾಜ್‍ರವರನ್ನು ಪಂಚಾಯ್ತಿಯ ಉಪಾಧ್ಯಕ್ಷೆ ಮಧು ಲೋಕೇಶ್, ಮಾಜಿ ಅಧ್ಯಕ್ಷೆ ಕುಸುಮಾ ಜೀವನ್‍ಗೌಡ, ಸದಸ್ಯರುಗಳಾದ ಗಿರೀಶ್, ಸುರೇಶ್, ಮುನಿಯಪ್ಪ, ತಿಮ್ಮಪ್ಪ, ಶಂಕರಯ್ಯ, ಅಡವೀಶಯ್ಯ, ಮಂಜುನಾಥ್, ಪ್ರೀತಿ, ಲಕ್ಷ್ಮಿ, ಮಹದೇವಮ್ಮ, ಸಣ್ಣಮ್ಮ, ಶೋಭಾ, ಶಾರದಾ, ಬಿಜೆಪಿ ಮುಖಂಡರಾದ ಕೊಂಡಜ್ಜಿ ವಿಶ್ವನಾಥ್ ಮತ್ತಿತರರು ಅಭಿನಂದಿಸಿದ್ದಾರೆ.

    ನೂತನ ಅಧ್ಯಕ್ಷ ಡಿ.ಜಿ.ದೇವರಾಜು ಬಿಜೆಪಿ ಬೆಂಬಲಿಗರಾಗಿದ್ದಾರೆ. ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ಬಿಜೆಪಿ ಮುಖಂಡ ಕೊಂಡಜ್ಜಿ ವಿಶ್ವನಾಥ್‍ರವರಿಗೆ ನೂತನ ಅಧ್ಯಕ್ಷ ಡಿ.ಜಿ.ದೇವರಾಜು ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here