ಚಂಡೀಗಢ ಮೇಯರ್‌ ಆಯ್ಕೆ: ಕಣ್ಣೇದುರೇ ಮೋಸ ನಡೆದಿದೆ :ಅರವಿಂದ್ ಕೇಜ್ರಿವಾಲ್

ನವದೆಹಲಿ: 

    ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಕಣ್ಣೇದುರೇ ಮೋಸ ನಡೆದಿದೆ ಮತ್ತು ಈಗ ಮೋಸ ಮಾಡಿದವರು ಮುಂದೆ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಹಂತಕ್ಕೂ ಹೋಗಬಹುದು ಎಂದು ದೆಹಲಿ ಮುಖ್ಯಮಂತ್ರಿ, ಆಪ್ ರಾಷ್ಟ್ರಿಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮಂಗಳವಾರ ಕಿಡಿ ಕಾರಿದ್ದಾರೆ.

    ಇಂದು ನಡೆದ ಚಂಡೀಗಡ ಮೇಯರ್ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಭಾಗವಾಗಿ ಕಣಕ್ಕಿಳಿದಿದ್ದ ಆಮ್ ಆದ್ಮಿ ಪಕ್ಷದ(ಎಎಪಿ) ಅಭ್ಯರ್ಥಿ ವಿರುದ್ಧ ಭಾರತೀಯ ಜನತಾ ಪಕ್ಷದ(ಬಿಜೆಪಿ) ಅಭ್ಯರ್ಥಿ ಮನೋಜ್ ಸೊಂಕಾರ್ ಅವರು ಜಯಭೇರಿ ಬಾರಿಸಿದ್ದಾರೆ.

     ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ದೆಹಲಿ ಸಿಎಂ, ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಕಣ್ಣೇದುರೇ ಮೋಸ ಮಾಡಿರುವ ರೀತಿ ಅತ್ಯಂತ ಕಳವಳಕಾರಿಯಾಗಿದೆ. ಮೇಯರ್ ಚುನಾವಣೆಯಲ್ಲಿ ಇಷ್ಟು ಕೆಳಮಟ್ಟಕ್ಕೆ ಇಳಿದವರು ಲೋಕಸಭೆ ಚುನಾವಣೆಯಲ್ಲೂ ಅವರು ಯಾವುದೇ ಮಟ್ಟಕ್ಕೆ ಇಳಿಯಬಹುದು. ಇದು ಅತ್ಯಂತ ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ.

    ಮೇಯರ್ ಚುನಾವಣೆಯಲ್ಲಿ ಒಟ್ಟು ಚಲಾವಣೆಯಾದ 36 ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ಸೊಂಕಾರ್ 16 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಬೆಂಬಲಿತ ಎಎಪಿ ಅಭ್ಯರ್ಥಿ ಕುಲದೀಪ್ ಕುಮಾರ್ ಅವರು 12 ಮತಗಳನ್ನು ಪಡೆದಿದ್ದಾರೆ. ಸಂಸದೆ ಹಾಗೂ ವಿಶೇಷ ಸದಸ್ಯೆ ಕಿರಣ್ ಖೇರ್ ಅವರೂ ಮತ ಚಲಾಯಿಸಿದ್ದರು.

    ಆದರೆ ಈ ಫಲಿತಾಂಶ ನಾಟಕೀಯ ತಿರುವು ಪಡೆದುಕೊಂಡಿದೆ. ಎಂಟು ಮತಗಳನ್ನು ಅಸಿಂಧು ಎಂದು ಘೋಷಿಸಿದ್ದು, ಇದರ ವಿರುದ್ಧ ಎಎಪಿ ಮತ್ತು ಕಾಂಗ್ರೆಸ್ ಕೌನ್ಸಿಲರ್‌ಗಳು ಪ್ರತಿಭಟನೆ ನಡೆಸಿದರು.

    ಬಿಜೆಪಿ 14 ಸದಸ್ಯರನ್ನು ಹೊಂದಿದ್ದು, ಆಮ್ ಆದ್ಮಿ ಪಕ್ಷ 13 ಕೌನ್ಸಿಲರ್‌ಗಳು ಹಾಗೂ ಕಾಂಗ್ರೆಸ್‌ 7 ಕೌನ್ಸಿಲರ್‌ಗಳನ್ನು ಹೊಂದಿವೆ. ಆದರೆ ಮತಗಳು ಅಸಿಂಧುಗೊಂಡ ಪರಿಣಾಮ ಬಿಜೆಪಿ ಅಭ್ಯರ್ಥಿ ಗೆಲುವು ಸುಗಮವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap