ಜಾರಕಿಹೊಳಿ ಬ್ರದರ್ಸ್ ಕೈ ಬಿಡಲ್ಲ

 ವಿಜಯಪುರ:  Related image

      ಜಾರಕಿಹೊಳಿ ಬ್ರದರ್ಸ್ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ,  ಒಂದು ವೇಳೆ ರಾಜೀನಾಮೆ ನೀಡಿದರೆ ಅವರ ಮನವೊಲಿಕೆ ಮಾಡಲಾಗುವುದು ಎಂದು ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ತಿಳಿಸಿದರು.

      ವಿಜಯಪುರದಲ್ಲಿ ಮಾತನಾಡುತ್ತಿದ್ದ ಅವರು, ಒಂದು ವೇಳೆ ಅವರು ಬಿಜೆಪಿ ಪಕ್ಷ ಸೇರುವುದಾದರೆ, ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಪಟ್ಟು ಹಿಡಿಯುತ್ತಾರೆ.  ಆದರೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಅವರು ಡಿಸಿಎಂ ಹುದ್ದೆ ಪಡೆಯಲ್ಲು ಸಾಧ್ಯ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬುದು ಕನಸಿನ ಮಾತು. ಈ ಹಿನ್ನೆಲೆಯಲ್ಲಿ ಅವರು ಬಿಜೆಪಿ ಸೇರುತ್ತಾರೆ ಎನ್ನುವುದು ಹಸಿ ಸುಳ್ಳು ಎಂದು ಹೇಳಿದರು.

       ಜಾರಕಿಹೊಳಿ ಬ್ರದರ್ಸ್‌ ಅವರ ಅಸಮಾಧಾನಕ್ಕೆ ಸ್ಥಳೀಯವಾಗಿ ಸಣ್ಣಪುಟ್ಟ ಸಮಸ್ಯೆಗಳು ಇರಬಹುದು. ಒಂದು ಕುಟುಂಬದಲ್ಲಿ ಗಂಡ-ಹೆಂಡತಿ ಹಾಗೂ ಅಣ್ಣತಮ್ಮಂದಿರ ಮಧ್ಯೆ ಇರುವ ಹಾಗೆ ಸಮಸ್ಯೆಗಳು ಇರುತ್ತವೆ ಎಂದು ಹೇಳಿದರು.

 

 

Recent Articles

spot_img

Related Stories

Share via
Copy link