ಮೂರೇ ದಿನಕ್ಕೆ ಹೀನಾಯ ಸ್ಥಿತಿಯಲ್ಲಿ ‘ಗೇಮ್ ಚೇಂಜರ್’ ಗಳಿಕೆ

ತೆಲಂಗಾಣ :

   ‘ಗೇಮ್ ಚೇಂಜರ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಲಿದೆ ಎಂದು ತಂಡದವರು ಅಂದುಕೊಂಡಿದ್ದರು. ಆದರೆ, ಅದು ಸುಳ್ಳಾಗಿದೆ. ಮೊದಲ ದಿನ 51 ಕೋಟಿ ರೂಪಾಯಿ ಗಳಿಸಿದ್ದ ಈ ಸಿನಿಮಾ ಆ ಬಳಿಕ ಅರ್ಧದಷ್ಟು ಗಳಿಸಲು ಸಾಧ್ಯವಾಗಿಲ್ಲ. ಇದೇ ರೀತಿ ಮುಂದುವರಿದರೆ ನಿರ್ಮಾಪಕರು ದೊಡ್ಡ ಮಟ್ಟದಲ್ಲಿ ನಷ್ಟು ಅನುಭವಿಸೋದು ಪಕ್ಕಾ ಎನ್ನಲಾಗುತ್ತಿದೆ.

   ‘ಗೇಮ್ ಚೇಂಜರ್’ ಸಿನಿಮಾದಲ್ಲಿ ರಾಮ್ ಚರಣ್, ಕಿಯಾರಾ ಅಡ್ವಾಣಿ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಶಂಕರ್ ಅವರ ನಿರ್ದೇಶನ ಇದೆ. ಆದರೆ, ಇವರ ನಿರ್ದೇಶನ ಕಳಪೆ ಎನಿಸಿಕೊಂಡಿದೆ. ಸಿನಿಮಾಗೆ ಸಿಕ್ಕ ಹೈಪ್​, ಮುಂಜಾನೆ ಆಯೋಜಿಸಲಾದ ವಿಶೇಷ ಶೋ ಎಲ್ಲಾ ಸೇರಿ ‘ಗೇಮ್ ಚೇಂಜರ್’ ಸಿನಿಮಾ ಮೊದಲ ದಿನ 51 ದಿನ ಕೋಟಿ ರೂಪಾಯಿ ಗಳಿಸಿತ್ತು.

   ಶನಿವಾರ (ಜನವರಿ 11) ‘ಗೇಮ್ ಚೇಂಜರ್’ ಗಳಿಕೆ 21.6 ಕೋಟಿ ರೂಪಾಯಿಗೆ ಇಳಿಯಿತು. ಭಾನುವಾರ (ಜನವರಿ 17) ಕೋಟಿ ರೂಪಾಯಿ ಗಳಿಸಲಷ್ಟೇ ಸಿನಿಮಾ ಶಕ್ಯವಾಗಿದೆ. ಈ ಮೂಲಕ 89.6 ಕೋಟಿ ರೂಪಾಯಿ ಗಳಿಕೆ ಆಗಿದೆ. ಹಿಂದಿ ವಿಭಾಗದಿಂದ ಸಿನಿಮಾಗೆ ಸ್ವಲ್ಪ ಉತ್ತಮ ಗಳಿಕೆ ಆಗುತ್ತಿರುವುದರಿಂದ ಚಿತ್ರ ಕೊಂಚ ಉತ್ತಮ ಹಂತದಲ್ಲಿ ಇದೆ. ಭಾನುವಾರ (ಜನವರಿ 12) ‘ಢಾಕು ಮಹರಾಜ್’ ಸಿನಿಮಾ ರಿಲೀಸ್ ಆಗಿರುವುದರಿಂದ ಚಿತ್ರಕ್ಕೆ ಹಿನ್ನಡೆ ಆಗಿದೆ.

   ಒಂದೊಮ್ಮೆ ಸಿನಿಮಾ ಒಟ್ಟಾರೆ 200 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದರೂ ನಿರ್ಮಾಪಕರಿಗೆ ಹೆಚ್ಚುವರಿಯಾಗಿ 250 ಕೋಟಿ ರೂಪಾಯಿ ನಷ್ಟ ಉಂಟಾಗಲಿದೆ. ‘ಗೇಮ್ ಚೇಂಜರ್’ ಚಿತ್ರವನ್ನು ದಿಲ್ ರಾಜು ನಿರ್ದೇಶನ ಮಾಡಿದ್ದರು. ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಾಣ ಮಾಡೋದು ದಿಲ್ ರಾಜು ಅವರ ಶೈಲಿಯಲ್ಲ. ಹೊಸತನವನ್ನು ಪ್ರಯತ್ನಿಸಲು ಹೋಗಿ ಈಗ ಅವರು ಎಡವಿದ್ದಾರೆ. 

   ‘ಗೇಮ್ ಚೇಂಜರ್’ ಚಿತ್ರ ಅದ್ದೂರಿಯಾಗಿ ಮೂಡಿ ಬಂದಿದೆ. ಈ ಸಿನಿಮಾಗೆ ಬರೋಬ್ಬರಿ 280 ದಿನ ಶೂಟ್ ಮಾಡಲಾಗಿದೆ. ಇಷ್ಟೊಂದು ದಿನ ಶೂಟ್ ಮಾಡಿದ್ದರಿಂದ ಸಿನಿಮಾದ ಬಜೆಟ್ ಹೆಚ್ಚಿದೆ. ನಿರ್ಮಾಪಕರು ದೊಡ್ಡ ನಷ್ಟ ಅನುಭವಿಸುವ ಸೂಚನೆ ಸಿಕ್ಕಿದೆ. ‘ಆಚಾರ್ಯ’ ಸಿನಿಮಾ ಸೋಲಿನಲ್ಲಿ ಇದ್ದ ರಾಮ್ ಚರಣ್ ಅವರಿಗೆ ಮತ್ತೊಂದು ಏಟು ಬಿದ್ದಂತೆ ಆಗಿದೆ.

Recent Articles

spot_img

Related Stories

Share via
Copy link