ರಾಜ್ಯಸಭೆಯ ಉಪಸಭಾಪತಿಯಾಗಿ ಹರಿವಂಶ ನಾರಾಯಣಸಿಂಗ್

ನವದೆಹಲಿ : ರಾಜ್ಯಸಭೆಯ ಉಪಸಭಾಪತಿಯಾಗಿ ಹರಿವಂಶ ನಾರಾಯಣಸಿಂಗ್ ಅವರು ಸತತ ಮೂರನೇ ಬಾರಿಗೆ ಅವಿರೋಧವಾಗಿ ಇಂದು ಆಯ್ಕೆಯಾಗಿದ್ದಾರೆ.

ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ವಿರೋಧ ಪಕ್ಷಗಳು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಹರಿವಂಶ್ ನಾರಾಯಣ ಸಿಂಗ್ ಅವರ ಆಯ್ಕೆ ಅವಿರೋಧವಾಯಿತು.

ರಾಜ್ಯಸಭೆಯ ಉಪಸಭಾಪತಿಯಾಗಿದ್ದ ಹರಿವಂಶ ನಾರಾಯಣಸಿಂಗ್ ಅವರ ಅವಧಿ ಏಪ್ರಿಲ್ ೯ ರಂದು ಮುಗಿದಿತ್ತು. ನಂತರ ಅವರನ್ನು ಮತ್ತೆ ರಾಜ್ಯಸಭೆಗೆ ನಾಮಕರಣ ಮಾಡಲಾಗಿತ್ತು. ರಾಜ್ಯಸಭೆಯ ಸಭಾಪತಿಗಳಾದ ಉಪರಾಷ್ಟ್ರಪತಿ ರಾಧಾಕೃಷ್ಣನ್ ಅವರು ರಾಜ್ಯಸಭೆಗಳ ಕಪಾಲಗ ೭ರ ಅಡಿಯಲ್ಲಿ ಚುನಾವಣೆ ದಿನಾಂಕವನ್ನು ನಿಗದಿಪಡಿಸಿ ಇಂದು ೧೨ ಗಂಟೆಯೊಳಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ವಿರೋಧ ಪಕ್ಷಗಳು ಈ ಚುನಾವಣೆಯನ್ನು ಬಹಿಷ್ಕರಿಸಿದ್ದವು. ಹಾಗಾಗಿ ಉಪಸಭಾಪತಿಯಾಗಿ ಹರಿವಂಶ ನಾರಾಯಣ ಸಿಂಗ್ ಅವರು ಅವಿರೋಧವಾಗಿ ಆಯ್ಕೆಯಾದರು.

Recent Articles

spot_img

Related Stories

Share via
Copy link