
ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಎರಡು ತಿಂಗಳು ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ 19 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಲೋಕಭನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು 19 ಶಾಸಕರಿಗೆ ಸಚಿವರಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಡಾ.ಅಜಯ್ ಧರಂ ಸಿಂಗ್, ಎಚ್.ಡಿ. ಬಾಲಕೃಷ್ಣ, ಕೆ.ಎಸ್. ಬಸವಂತಪ್ಪ, ಬಸವರಾಜ ರಾಯರೆಡ್ಡಿ, ಎನ್. ಚೆಲುವರಾಯ ಸ್ವಾಮಿ, ಲಕ್ಷ÷್ಮಣ ಸವದಿ, ಮಧು ಬಂಗಾರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್, ಬಿ. ನಾಗೇಂದ್ರ, ಎಂ.ಪಿ. ನರೇಂದ್ರ ಸ್ವಾಮಿ, ಸಿ. ಪುಟ್ಟರಂಗ ಶೆಟ್ಟಿ, ಟಿ. ರಘು ಮೂರ್ತಿ, ರಿಜ್ಞಾನ್ ಅರ್ಷದ್, ರುದ್ರಪ್ಪ ಮಾನಪ್ಪ ಲಮಾಣಿ, ಸಂತೋಷ್ ಲಾಡ್, ಶಿವಲಿಂಗೇಗೌಡ, ಶಿವರಾಜ್ ತಂಗಡಗಿ, ವಿಜಯಾನಂದ ಕಾಶಪ್ಪನರ್, ಜಮೀರ್ ಅಹ್ಮದ್ ಖಾನ್ ಸಚಿವರಾಗಿ ಪದಗ್ರಹಣ ಮಾಡಿದರು.
ಚುನಾವಣಾ ತಕರಾರು ಅರ್ಜಿಯಲ್ಲಿ ನ್ಯಾಯಾಲಯದ ಆದೇಶದಂತೆ ವಿಧಾನಪರಿಷತ್ ಗೆ ಆಯ್ಕೆಯಾಗಿದ್ದ ಗಾಯಿತ್ರಿ ಶಾಂತೇಗೌಡ ಅವರನ್ನು ಮಂತ್ರಿಮAಡಲಕ್ಕೆ ಸೇರ್ಪಡೆ ಮಾಡಿಕೊಳ್ಳುವ ನಿರೀಕ್ಷೆ ಇತ್ತಾದರೂ, ಕೊನೆಗಳಿಗೆಯಲ್ಲಿ 19ಮಂದಿ ಮಾತ್ರ ಮಂತ್ರಿಮAಡಲಕ್ಕೆ ಸೇರಿದ್ದಾರೆ. ಡಿ.ಕೆ. ಶಿವಕುಮಾರ್ ನೇತೃತ್ವದ ಇದು ಮಹಿಳೆಯರಿಲ್ಲದ ಮಂತ್ರಿಮAಡಲವಾಗಿದೆ.
ಪಿ.ಎಂ.ನರೇAದ್ರಸ್ವಾಮಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಗಂಗಾದರ ಅಜ್ಜಯ್ಯ ಮತ್ತು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಡಾ. ಅಜಯ್ ಧರಂ ಸಿಂಗ್, ಹೆಚ್. ಸಿ. ಬಾಲಕೃಷ್ಣ, ಶಿವರಾಜ್ ತಂಗಡಗಿ, ರುದ್ರಪ್ಪ ಲಮಾಣಿ, ಬಿ. ನಾಗೇಂದ್ರ, ಟಿ. ರಘುಮೂರ್ತಿ, ಮಧು ಬಂಗಾರಪ್ಪ, ಪುಟ್ಟರಂಗಶೆಟ್ಟಿ, ಎಸ್. ಎಸ್. ಮಲ್ಲಿಕಾರ್ಜುನ್, ಎನ್. ಚಲುವರಾಯ ಸ್ವಾಮಿ, ಕೆ. ಎಂ. ಶಿವಲಿಂಗೇಗೌಡ, ವಿಜಯಾನಂದ ಕಾಶಪ್ಪನವರ್, ಲಕ್ಷ÷್ಮಣ ಸವದಿ ದೇವರ ಹೆಸರಿನಲ್ಲಿ, ಬಿ. ಝಡ್. ಜಮೀರ್ ಅಹಮದ್ ಖಾನ್ ಅವರು ಅಲ್ಲಾ ಹಾಗೂ ಅವರ ತಾಯಿಯ ಹೆಸರಿನಲ್ಲಿ, ಸಂತೋಷ್ ಲಾಡ್, ರಿಜ್ವಾನ್ ಅರ್ಷದ್, ಬಸವರಾಜ್ ರಾಯರೆಡ್ಡಿ, ಶ್ರದ್ಧಾಪೂರ್ವಕವಾಗಿ ಪ್ರಮಾಣ ವಚನ ಸ್ವೀಕರಿಸಿದರು
ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಬಿ.ಕೆ. ಹರಿ ಪ್ರಸಾದ್, ಸೇರಿದಂತೆ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಹಿರಿಯ ನಾಯಕರು ಹಾಗೂ ವಿವಿಧ ಇಲಾಖೆಯ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.
ಬಾಕ್ಸ್
ಸಮಾರಂಭಕ್ಕೆ ಸಿದ್ದರಾಮಯ್ಯ ಬರಲಿಲ್ಲ : ಚರ್ಚೆ
ಲೋಕಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಗೈರು ಎದ್ದು ಕಂಡಿತು. ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದ್ದರೂ, ಅದರಲ್ಲಿ ಭಾಗವಹಿಸದೇ ತಮ್ಮ ಅಧಿಕೃತ ಕಾವೇರಿ ನಿವಾಸದಲ್ಲೇ ಉಳಿದುಕೊಂಡಿದ್ದರು. ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಹಲವು ಶಾಸಕರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಇದರ ಮಧ್ಯೆಯೇ, ಸಿದ್ದರಾಮಯ್ಯ ಅವರ ಈ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ನೂತನ ಸಚಿವರ ಪದಗ್ರಹಣಕ್ಕೆ ಮಾಜಿ ಸಿಎಂ ಗೈರಾಗಿರುವುದು ಕಾಂಗ್ರೆಸ್ ಪಕ್ಷದ ಆಂತರಿಕ ಅಸಮಾಧಾನದ ಫಲಶೃತಿಯೇ ಎಂಬ ಚರ್ಚೆ ಹುಟ್ಟುಹಾಕಿದೆ.
ಬಾಕ್ಸ್
ನನ್ನನ್ನು ಕೈಬಿಡಲು ಕಾರಣವೇ ಇಲ್ಲ: ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್ ಅಸಮಾಧಾನ ಇನ್ನೊಂದೆಡೆ ಸಂಪುಟ ವಿಸ್ತರಣೆ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ ನಾಯಕ ಹಾಗೂ 6 ಬಾರಿಯ ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸ್ಥಾನ ಸಿಗದ ಕಾರಣ ತಮ್ಮ ತೀವ್ರ ನಿರಾಶೆಯನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ನಲ್ಲಿ ವ್ಯಕ್ತಪಡಿಸಿ, ನನ್ನ ರಾಜಕೀಯ ಜೀವನದುದ್ದಕ್ಕೂ ಕರ್ನಾಟಕದ ಜನರ ಸೇವೆ ಮಾಡುವ ಅವಕಾಶ ದೊರೆತಿರುವುದಕ್ಕೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ. ಶಾಸಕನಾಗಿ ಹಾಗೂ ಸಚಿವನಾಗಿ ಕಾರ್ಯನಿರ್ವಹಿಸುತ್ತಾ, ಜನರ ಜೀವನದಲ್ಲಿ ಬದಲಾವಣೆ ತರಬಹುದಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಆರು ಬಾರಿ ಶಾಸಕನಾಗಿ ಆಯ್ಕೆಯಾಗಿರುವುದು ಜನರು ನನ್ನ ಮೇಲೆ ನಿರಂತರವಾಗಿ ತೋರಿದ ವಿಶ್ವಾಸದ ಸಂಕೇತ ಎಂದು ಉಲ್ಲೇಖಿಸಿ, ತಮ್ಮನ್ನು ಸಂಪುಟದಿAದ ಹೊರಗಿಡಲು ಸೂಕ್ತ ಕಾರಣಗಳಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಸಂಪುಟದಿAದ ಲಕ್ಷಿ ಮಿಸ್ : ಬೇಸರ
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷಿ÷್ಮÃ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಹಿರೇಬಾಗೇವಾಡಿ ಬಳಿ ಟೋಲ್ ಬಂದ್ ಮಾಡಿ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಮತ್ತೊಮ್ಮೆ ಸಂಪುಟದಲ್ಲಿ ಲಕ್ಷಿ÷್ಮÃ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಡಿಕೆಶಿಯ ನೂತನ ಸಚಿವರ ಪಟ್ಟಿಯಲ್ಲಿ ಹೆಬ್ಬಾಳ್ಕರ್ ಅವರಿಗೆ ನಿರಾಸೆ ಆಗಿದೆ.
ಯಶವಂತ ರಾಯಗೌಡ ಪಾಟೀಲ್ ರಾಜೀನಾಮೆ
ಸಚಿವ ಸ್ಥಾನ ವಂಚಿತ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಹಂಗಾಮಿ ಸ್ಪೀಕರ್ ರುದ್ರಪ್ಪ ಲಮಾಣಿ ರಾಜೀನಾಮೆ ಸಲ್ಲಿಸಿ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದಾರೆ. ಇತ್ತ, ಸಚಿವ ಸ್ಥಾನ ಕೈತಪ್ಪಿದಕ್ಕೆ ಯಶವಂತರಾಯಗೌಡ ಪಾಟೀಲ್ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಶಾಸಕರ ಭವನದಲ್ಲಿ ಪ್ರತಿಭಟಿಸಿದ ಬೆಂಬಲಿಗರು, ತಮ್ಮ ನಾಯಕರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಕೈಯಲ್ಲಿ ಯಶವಂತರಾಯಗೌಡ ಅವರ ಫೋಟೋ ಹಿಡಿದು ಆಕ್ರೋಶ ಹೊರಹಾಕಿದರು.
ಈ ರೀತಿ ಆಗಿದೆ ಅಂತ ಬೇಜಾರು ಇದೆ
ಸಚಿವಾಕಾಂಕ್ಷಿಯಾಗಿದ್ದ ಅಪ್ಪಾಜಿ ನಾಡಗೌಡ ಮಾತನಾಡಿ, ಇದಕ್ಕೆ ರಾಜಕಾರಣ ಅಂತ ಹೇಳೋದು. ಪಾಲಿಟಿಕ್ಸ್??ನಲ್ಲಿ ಯಾರಿಗೆ ದೇವರು ಒಲಿಯುತ್ತಾನೆಂದು ಗೊತ್ತಾಗೋದಿಲ್ಲ. ಎಲ್ಲವೂ ಮುಗಿದು ಹೋಗಿದೆ. ನಾನು ಬೇರೆ ಕಾರಣಕ್ಕೆ ಸಿಎಂ ಭೇಟಿಯಾಗಲು ಬಂದಿದ್ದೆ. ಒಬ್ಬ ಹೊಸ ಸಿಎಂ ಇದ್ದಾನೆ, ಒಳ್ಳೆಯದಾಗಲಿ ಹಾರೈಸೋಣ ಅಂತ ಬಂದೆ. ನನಗೆ ಇದೆಲ್ಲವೂ ಅನುಭವ ಆಗಿದೆ. ಈ ರೀತಿ ಆಗಿದೆ ಅಂತಾ ಬೇಜಾರು ಆಗುತ್ತಿದೆ. ಪಕ್ಷಕ್ಕೆ ನಿಷ್ಠಾವಂತರು, ಪಕ್ಷದಲ್ಲಿ ಕಾಲುಕಟ್ಟಿಕೊಂಡು ಇರೋರಿಗೆ ಈ ರೀತಿ ಆಗುತ್ತಿದೆ. ನಾನು ಎಲ್ಲಿಯೂ ಹೋಗುವ ಪ್ರಶ್ನೆ ಅಲ್ಲ. ಆದರೆ ಇದೆಲ್ಲವೂ ಸರಿಯಾಗಿ ನಡೆಯುತ್ತಿಲ್ಲ. ವಿಜಯಪುರಕ್ಕೆ ಮತ್ತೊಂದು ಸ್ಥಾನ ಸಿಗಬೇಕಿತ್ತು ಎಂಬ ಪ್ರಶ್ನೆಗೆ ನಮ್ಮಲ್ಲಿ ಜಗದ್ಗುರುಗಳು ಇದ್ದಾರೆಂದು ಅಸಮಾಧಾನ ಹೊರಹಾಕಿದರು.
ವಿಪ – ವಿಧಾನ ಸಭೆಗೆ ಸಭಾಪತಿ – ಉಪಾಸಭಾಪತಿಗಳ ಪಟ್ಟಿ ಅಂತಿಮ
ರಾಜ್ಯದ 20 ನೂತನ ಸಚಿವರ ಹೆಸರನ್ನು ಪ್ರಕಟಿಸಿರುವ ಕಾಂಗ್ರೆಸ್ ಹೈಕಮಾಂಡ್ ವಿಧಾನಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿ ಸ್ಥಾನಕ್ಕೂ ಹೆಸರುಗಳನ್ನು ಅಂತಿಮಗೊಳಿಸಿದೆ. ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಗದಗ ಜಿಲ್ಲೆಯ ರೋಣಾ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ರವರ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಉಪಸಭಾಧ್ಯಕ್ಷ ಸ್ಥಾನಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣರವರ ಹೆಸರು ಅಂತಿಮವಾಗಿದೆ. ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಸಲೀಂ ಮಹಮದ್ ಹಾಗೂ ಉಪಸಭಾಪತಿಯಾಗಿ ಉಮಾಶ್ರೀಯವರ ಹೆಸರನ್ನು ಹೈಕಮಾಂಡ್ ಆಖೈರುಗೊಳಿಸಿದೆ.








