
ಬೆಂಗಳೂರು: ರಾಜ್ಯ ಸರ್ಕಾರ ನೇರ ನೇಮಕಾತಿ ಯಲ್ಲಿ ಸಾಧಕ ಕ್ರೀಡಾ ಪಟುಗಳಿಗೆ ಶೇ2ರಷ್ಟು ಮೀಸಲು ಸೌಲಭ್ಯ ಕಲ್ಪಿಸಿ, ಚೆಸ್ ಕ್ರೀಡೆ ಯನ್ನು ಈ ಸೌಲಭ್ಯ ದ ವ್ಯಾಪ್ತಿಗೆ ಮರು ಸೇರ್ಪಡೆ ಗೊಳಿಸಿ ಅ. 3ರಂದು ಆದೇಶ ಹೊರಡಿಸಿರುವುದು ಮಹತ್ವದ ಕ್ರಮವಾಗಿದೆ ಎಂದು ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ. ಎನ್. ಮಧುಕರ್ ಸ್ವಾಗತಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ ಅವರಿಗೆ ಧನ್ಯವಾದ ಅರ್ಪಿಸಿರುವ ಅವರು ನಮ್ಮ ಚೆಸ್ ಅಸೋಸಿಯೇಷನ್ ಮನವಿ ಸೇರಿದಂತೆ ರಾಜ್ಯದ ಕ್ರೀಡಾಪಟುಗಳಿಗೆ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಕರ್ನಾಟಕ ಸಿವಿಲ್ ಸೇವಾ ನೇಮಕಾತಿ ನಿಯಮಗಳು 1977ಕ್ಕೆ ತಿದ್ದುಪಡಿ ತಂದು ಚೆಸ್ ಸೇರಿ 34 ಪ್ರಕಾರ ದ ಕ್ರೀಡಾಪಟುಗಳಿಗೆ ಸರ್ಕಾರಿ ನೇಮಕಾತಿ ಯಲ್ಲಿ ಶೇ2ರಷ್ಟು ಕ್ರೀಡಾ ಮೀಸಲು ಅನುಕೂಲವಾಗುವಂತೆ ಕ್ರಮವಹಿಸಿರುವುದು ಸರ್ಕಾರದ ಮಹತ್ವದ ನಿರ್ಧಾರವೆನಿಸಿದೆ. ಕ್ರೀಡಾ ಕ್ಷೇತ್ರ ಮತ್ತಷ್ಟು ಬೆಳೆಯುವುದಲ್ಲದೆ ಸಾಧಕ ಕ್ರೀಡಾಪಟುಗಳಿಗೆ ಸರ್ಕಾರದ ಅಭಯ ದೊರೆತಂತಾಗಿದೆ.
ಕಿರಿಯ ವಯಸ್ಸಿನಲ್ಲೆ ಕ್ರೀಡೆಯಲ್ಲಿ ಮಿಂಚಿ ಸಾಧನೆ ಕ್ರೀಡಾಪಟು ಗಳಿಗೆ ಉದ್ಯೋಗ,ಮುಂದಿನ ಜೀವನದ ಬಗ್ಗೆ ಕ್ರೀಡಾಪಟುಗಳು ಅಭದ್ರತೆ ಯ ಆತಂಕ ಎದುರಿಸುತ್ತಿದ್ದರು. ಸರ್ಕಾರದ ಈ ನಿರ್ಧಾರ ಸಾಧಕ ಕ್ರೀಡಾಪಟುಗಳಿಗೆ ಬದುಕಿನ ಆಸರೆ ಕಲ್ಪಿಸಿದ್ದು ಸಮಸ್ತ ಚೆಸ್ ಕ್ರೀಡಾಪಟುಗಳು ಪೋಷಕರ ಪರವಾಗಿ ಸರ್ಕಾರಕ್ಕೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚೆಸ್ ಗೆ ಮತ್ತೆ ದೊರೆತ ಮನ್ನಣೆ
ಭಾರತೀಯ ಕ್ರೀಡೆ ಯಾದ ಚೆಸ್ ಆಟಗಾರರನ್ನು ಸರ್ಕಾರದ ಸೌಲಭ್ಯ ಗಳಿಂದ ಹೊರಗುಳಿಸಲಾಗಿತ್ತು. ನಮ್ಮ ರಾಜ್ಯ ಚೆಸ್ ಸಂಸ್ಥೆಯ ಮನವಿ, ನಿರಂತರ ಒತ್ತಾಯಕ್ಕೆ ಕ್ರೀಡಾ ಇಲಾಖೆ, ಮಾನ್ಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಸ್ಪಂದಿಸಿ ಚೆಸ್ ಪಂದ್ಯಾವಳಿಗೆ ಮರಳಿ ಸರ್ಕಾರದ ಮನ್ನಣೆ ಸಿಗುವಂತೆ ಮಾಡಿದ್ದಾರೆ. ಇದಕ್ಕಾಗಿ ಕ್ರೀಡಾ ಸಚಿವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತಾ ನೇರ ನೇಮಕಾತಿ ಮೀಸಲು ಸೌಲಭ್ಯದೊಟ್ಟಿಗೆ ರಾಷ್ಟ್ರೀಯ ಅಂತಾರಾಷ್ಟ್ರೀಯ ಚೆಸ್ ಆಟಗಾರರಿಗೆ ಕ್ರೀಡಾ ಪ್ರೋತ್ಸಾಹಧನ, ರಾಷ್ಟ್ರ ರಾಜ್ಯಕ್ಕೆ ಗರಿಮೆ ತಂದ ಚೆಸ್ ಆಟಗಾರರಿಗೆ ಸೂಕ್ತ ನಗದು ಬಹುಮಾನ, ಅಸಾಧಾರಣ ಚೆಸ್ ಆಟಗಾರರಿಗೆ ಏಕಲವ್ಯ, ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಯನ್ನು ಪ್ರತೀ ವರ್ಷ ನೀಡುವ ಮೂಲಕ ಚೆಸ್ ಕ್ರೀಡೆಯನ್ನು , ಆಟಗಾರರಿಗೆ ಪ್ರೋತ್ಸಾಹ ನೀಡಬೇಕೆಂದು ಸಮಸ್ತ ಚೆಸ್ ಆಟಗಾರರು, ಪೋಷಕರ ಪರವಾಗಿ ಮನವಿ ಮಾಡುತ್ತಿರುವುದಾಗಿ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ. ಎನ್. ಮಧುಕರ್ ತಿಳಿಸಿದ್ದಾರೆ.








